River Indie: ಬಹುನಿರೀಕ್ಷಿತ ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪ್ರಾರಂಭ
ಭಾರತೀಯರಿಗೆ ಹಬ್ಬದ ಸೀಸನ್‌ನಲ್ಲಿ ಮನೆಗೆ ಹೊಸ ವಾಹನಗಳನ್ನು ತರುವುದು ಶುಭಕರವೆಂದು ಭಾವಿಸುತ್ತಾರೆ. ಅಂತೆಯೆ ಬೆಂಗಳೂರು ಮೂಲದ EV ತಯಾರಕ ರಿವರ್ ಇವಿ ತನ್ನ ಬಹುನಿರೀಕ್ಷಿತ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಯನ್ನು ಪ್ರಾರಂಭಿಸಿದೆ.
ಹೊಸ ರಿವರ್ ಇಂಡೀ ಇವಿ ಸ್ಕೂಟರ್ ಅನ್ನು ಮುಂಗಡವಾಗಿ ಕಾಯ್ದಿರಿಸಿದ ಮೊದಲ ಬ್ಯಾಚ್ ಗ್ರಾಹಕರಿಗೆ ಬೆಂಗಳೂರಿನಲ್ಲಿ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಯನ್ನು ರಿವರ್ ಪ್ರಾರಂಭಿಸಿದೆ. ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ಕೀಗಳನ್ನು ಮೊದಲ ಬ್ಯಾಚ್ ಗ್ರಾಹಕರಿಗೆ ಹಸ್ತಾಂತರಿಸಲಾಯಿತು.

FAME II ಸಬ್ಸಿಡಿಗೆ ಇತ್ತೀಚಿನ ಪರಿಷ್ಕರಣೆಯ ಹೊರತಾಗಿಯೂ ರಿವರ್ ಇಂಡೀ ಗ್ರಾಹಕರು ಮೊದಲ ಬ್ಯಾಚ್ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರೂ. 1.25 ಲಕ್ಷಕ್ಕೆ (ಎಕ್ಸ್-ಶೋ ರೂಂ, ಬೆಂಗಳೂರು) ಖರೀದಿಸಿದ್ದಾರೆ. ಈ ಎಲೆಕ್ಟ್ರಿಕ್ ಸ್ಕೂಟರ್ ಇತರ ಸ್ಕೂಟರ್‌ಗಳಂತಲ್ಲದೇ ತನ್ನದೇ ಆದ ವಿಶಿಷ್ಟ ಡಿಸೈನ್ ಹಾಗೂ ವೈಶಿಷ್ಟ್ಗಳನ್ನು ಒಳಗೊಂಡಿರುವ ಕಾರಣ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ.
ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಮುಖ ವಿಶೇಷತೆ ಎಂದರೆ ಅದರ ವಿನ್ಯಾಸ. ವಾಸ್ತವವಾಗಿ, ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ವಿನ್ಯಾಸವು ಅದನ್ನು ಅತ್ಯಂತ ಪ್ರಯೋಜನಕಾರಿ ಮತ್ತು ಬಹುಮುಖವಾಗಿಸುತ್ತದೆ. ಇದು ಸಣ್ಣ ವ್ಯಾಪಾರ ನಿರ್ವಾಹಕರಿಗೆ ತುಂಬಾ ಸೂಕ್ತವಾಗಿದೆ. ಅಲ್ಲದೆ, ಈ ಇವಿಯನ್ನು 'ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಸ್‌ಯುವಿ' ಎಂದು ಕಂಪನಿ ಅಡಿಬರಹವನ್ನು ನೀಡಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ 8.98bhp ಪವರ್ ಮತ್ತು 26Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬೃಹತ್ ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಿದೆ. ಈ ಎಲೆಕ್ಟ್ರಿಕ್ ಮೋಟರ್‌ಗೆ ವಿದ್ಯುತ್ ಪೂರೈಸಲು ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ 4kWh NMC ಅಲ್ಯೂಮಿನಿಯಂ-ಕೇಸ್ಡ್ ತೆಗೆಯಲಾಗದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
ಅದರ ದೊಡ್ಡ 4kWh ಬ್ಯಾಟರಿ ಪ್ಯಾಕ್, ECO ಮೋಡ್‌ನಲ್ಲಿ ಪ್ರಯಾಣಿಸುವಾಗ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್‌ನಲ್ಲಿ 120 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 5 ಗಂಟೆಗಳಲ್ಲಿ ಶೇ 80 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ರಿವರ್ಸರ್ ಮೋಡ್ ಸೇರಿದಂತೆ ಬಹು ಸವಾರಿ ವಿಧಾನಗಳನ್ನು ಒಳಗೊಂಡಿದೆ.

ವೈಶಿಷ್ಟ್ಯಗಳ ಕುರಿತು ಹೇಳುವುದಾದ್ರೆ, ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 14-ಇಂಚಿನ ವೀಲ್‌ಗಳು, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಸಿಬಿಎಸ್ ಬ್ರೇಕಿಂಗ್, USB ಚಾರ್ಜರ್, 12-ಲೀಟರ್ ಗ್ಲೋವ್ ಬಾಕ್ಸ್, 43-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೊಸ ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಸಣ್ಣ ವ್ಯಾಪಾರ ನಿರ್ವಾಹಕರಿಗೆ ತುಂಬಾ ಸೂಕ್ತವಾಗಿದೆ. ಅದರ ದೊಡ್ಡ ಶೇಖರಣಾ ಆಯ್ಕೆಗಳು ಮತ್ತು ಗಟ್ಟಿಮುಟ್ಟಾದ ಬಾಡಿಯಿಂದಾಗಿ ಇತರ ಸ್ಕೂಟರ್‌ಗಳಿಗಿಂತ ವಿಭಿನ್ನವಾಗಿದೆ. ಇನ್ನು ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಯೋಜನಕಾರಿ ಅಂಶಗಳಿಂದಾಗಿ ಮಾರುಕಟ್ಟೆಯಲ್ಲಿ ಇತರ EV ಗಳ ವಿರುದ್ಧ ಪ್ರತಿಸ್ಪರ್ಧಿಸಲು ಸಹಾಯ ಮಾಡುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








