River Indie Review: ರಿವರ್ ಇಂಡೀ ಸ್ಕೂಟರ್ ರಿವ್ಯೂ ವಿಡಿಯೋ ಇಲ್ಲಿದೆ!
ಕಂಪನಿಯು ರಿವರ್ ಇಂಡೀ ಬೆಲೆಯನ್ನು 1.25 ಲಕ್ಷ (ಎಕ್ಸ್-ಶೋರೂಂ) ರೂ.ಗೆ ನಿಗಧಿಪಡಿಸಿದೆ. ಆದರೆ ಗ್ರಾಹಕರು ಖರೀದಿಸುವ ಮುನ್ನ ಸ್ಕೂಟರ್ ಬೆಲೆಗೆ ತಕ್ಕಂತೆ ಇದೆಯೇ ಎಂಬುದನ್ನು ನೋಡುತ್ತಾರೆ. ಹಾಗಾಗಿ ಗ್ರಾಹಕರಿಗೆ ಸ್ಕೂಟರ್ ಹೇಗಿದೆ ಎಂಬುದನ್ನು ತಿಳಿಸಿಕೊಡಲು ನಾವು ರಿವರ್ ಇಂಡೀ ಸ್ಕೂಟರ್ ಅನ್ನು ಬೆಂಗಳೂರಿನ ಸುತ್ತಮುತ್ತ ಓಡಿಸಿದ್ದೇವೆ.
ಸ್ಕೂಟರ್ ಖರೀದಿಸಲು ಬಯಸುವವರಿಗೆ ಈ ಕೆಳಗಿನ ವಿಮರ್ಶೆ ಉಪಯುಕ್ತವಾಗಲಿದೆ. ಈ ಹೊಸ ಸ್ಕೂಟರ್ ವಿನ್ಯಾಸವು 'ವಿಶಿಷ್ಟ'ವಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಅದರ ಬಾಕ್ಸ್ ಲೈಟಿಂಗ್ ಸೆಟಪ್‌ನೊಂದಿಗೆ ಇತರ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಭಿನ್ನವಾಗಿ ಕಾಣುತ್ತದೆ. ಮುಂಭಾಗದಲ್ಲಿ, ಡ್ಯುಯಲ್ ಸ್ಕ್ವೇರ್ ಎಲ್‌ಇಡಿ ಹೆಡ್‌ಲೈಟ್‌ಗಳು ವಾಲ್-ಇ ನ ಕಣ್ಣುಗಳಂತೆ ಕಾಣುತ್ತವೆ.
ಮಾನ್ಸೂನ್ ಬ್ಲೂ, ಸಮ್ಮರ್ ರೆಡ್ ಮತ್ತು ಸ್ಪ್ರಿಂಗ್ ಯೆಲ್ಲೋ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ನೀವು ಯಾವುದನ್ನು ಆರಿಸಿಕೊಂಡರೂ ಮುಂಭಾಗದ ಏಪ್ರನ್, ಮುಂಭಾಗದ ಫೆಂಡರ್ ಶೈನಿ ಬ್ಲಾಕ್ ಬಣ್ಣದಲ್ಲಿ ಬರುತ್ತದೆ. ತೆಳ್ಳಗಿನ ಇಂಡಿಕೇಟರ್‌ಗಳು ಎಲ್ಲರ ಗಮನಸೆಳೆಯುತ್ತದೆ. ಬದಿಗಳು ವಿಶಿಷ್ಟವಾದ ಡಿಸೈನ್ ಹೊಂದಿದ್ದು, ಒಟ್ಟಾರೆ ಪ್ಯಾಕೇಜ್ ಖರೀದಿಸಿದರೆ ಬದಿಗಳಿಂದಲೂ ಹೆಚ್ಚಿನ ಉಪಯುಕ್ತತೆ ಇರುತ್ತದೆ.
ಇಂಡೀ 14-ಇಂಚಿನ ಅಲಾಯ್ ವೀಲ್‌ಗಳು, ವಿಶಾಲವಾದ ಆಸನ ತುಂಬಾ ತಪ್ಪಗಿರುವವರಿಗೂ ಉತ್ತಮ ಸವಾರಿ ಅನುಭವವನ್ನು ಒದಗಿಸುತ್ತದೆ. ಒಮ್ಮೆ ನೀವು ಸೀಟ್ ಮೇಲೆ ಕುಳಿತು 6-ಇಂಚಿನ ಡಿಸ್‌ಪ್ಲೇಯತ್ತ ನೋಡಿದ್ರೆ, ಸ್ಕೂಟರ್ ಸ್ಥಿತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಹೇಳುತ್ತದೆ, ರೈಡಿಂಗ್ ಮೋಡ್‌ಗಳಿಂದ ವೇಗದವರೆಗೆ ಚಾರ್ಜ್ ಮಟ್ಟದ ಬಗ್ಗೆ ಎಲ್ಲವನ್ನೂ ವಿವರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








