NX100 Scooter: ಒಂದೇ ಚಾರ್ಜ್‌ನಲ್ಲಿ 500 ಕಿ.ಮೀ ಓಡಬಲ್ಲ ಇವಿ ಸ್ಕೂಟರ್.. ಅದ್ಭುತ ವೈಶಿಷ್ಟ್ಯಗಳು!
ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇವಿ ತಯಾರಕ ಕಂಪನಿಗಳು ಕೂಡ ಹೆಚ್ಚಾಗುತ್ತಿವೆ. ನಮ್ಮ ಕರ್ನಾಟಕ ಮೂಲದ ರಿವೋಟ್ ಮೋಟಾರ್ಸ್ ಭಾರತದಲ್ಲಿ ಹೊಸ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಈ ಬ್ರಾಂಡ್ ಮುಂಬರುವ ದಿನಗಳಲ್ಲಿ ಟಾಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕಾ ಕಂಪನಿಯಾಗಿ ಗುರ್ತಿಸಿಕೊಳ್ಳುವ ಸಾಧ್ಯತೆಯಿದೆ.
ಕಂಪನಿಯು ತನ್ನ ಸ್ಕೂಟರ್‌ನಲ್ಲಿ ನೀಡುತ್ತಿರುವ ಅದ್ಬುತ ವೈಶಿಷ್ಟ್ಯಗಳು, ಭಾರೀ ರೇಂಜ್, ಕೈಗೆಟುಕುವ ಬೆಲೆ, ಅತ್ಯಾಧುನಿಕ ಫೀಚರ್‌ಗಳು ಗ್ರಾಹಕರನ್ನು ಕಂಡಿತ ತನ್ನತ ಸೆಳೆಯಲಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹುಡುಕುತ್ತಿರುವವರಿಗೆ? ಇವರ ಸ್ಕೂಟರ್‌ಗಳು ಉತ್ತಮ ಆಯ್ಕೆ ಎಂದು ಹೇಳಬಹುದು. ನೀವು ಒಮ್ಮೆ ಈ ಸ್ಕೂಟರ್ ಮಾದರಿಯನ್ನು ಪರಿಶೀಲಿಸಬಹುದು. ರೂಪಾಂತರವನ್ನು ಅವಲಂಬಿಸಿ ದರವೂ ಬದಲಾಗುತ್ತದೆ.

ರಿವೋಟ್ ಮೋಟಾರ್ಸ್ ಕಂಪನಿಯ NX100 ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಮೊದಲ ಇವಿ ಆಗಿದೆ. ಸ್ಮಾರ್ಟ್ ಪವರ್ ಫುಲ್ ಇವಿ ಬಯಸುವವರು ಇದನ್ನು ಪರಿಶೀಲಿಸಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ಕ್ಲಾಸಿಕ್, ಪ್ರೊ, ಮ್ಯಾಕ್ಸ್, ಸ್ಪೋರ್ಟ್ಸ್ ಮತ್ತು ಆಫ್‌ಲ್ಯಾಂಡರ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. ವೈಶಿಷ್ಟ್ಯಗಳು ಮತ್ತು ಬೆಲೆಯು ರೂಪಾಂತರವನ್ನು ಅವಲಂಬಿಸಿ ಬದಲಾಗುತ್ತದೆ ಎಂಬುದನ್ನು ಗಮನಿಸಬೇಕು.
ಈ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 100 ರಿಂದ 300 ಕಿ.ಮೀ ಓಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸ್ಮಾರ್ಟ್ ಡ್ಯಾಶ್ ಕ್ಯಾಮೆರಾ, ವರ್ಧಿತ ಸುರಕ್ಷತೆ, ಟಚ್‌ಸ್ಕ್ರೀನ್ ಇಂಟರ್ಫೇಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 100 ರಿಂದ 110 ಕಿಲೋಮೀಟರ್. 500 ಕಿ.ಮೀ ಹೋಗಲು ಅಪ್‌ಗ್ರೇಡ್ ಆಯ್ಕೆಯೂ ಇರಲಿದೆ ಎಂದು ತಿಳಿದುಬಂದಿದೆ.

ವೇರಿಯೆಂಟ್ ವಾರು ರೇಂಜ್: ಕ್ಲಾಸಿಕ್ ವೇರಿಯಂಟ್‌ನ ರೇಂಜ್ 100 ಕಿ.ಮೀ, ಪ್ರೊ ವೇರಿಯಂಟ್‌ನ ರೇಂಜ್ 200 ಕಿ.ಮೀ, ಮ್ಯಾಕ್ಸ್ ವೆರಿಯಂಟ್‌ನ ರೇಂಜ್ 300 ಕಿ.ಮೀ, ಸ್ಪೋರ್ಟ್ಸ್ ವೆರಿಯಂಟ್‌ನ ರೇಂಜ್ 200 ಕಿ.ಮೀ ಮತ್ತು ಟಾಪ್ ಎಂಡ್ ವೇರಿಯೆಮಟ್ ಆಫ್‌ಲ್ಯಾಂಡರ್ ರೇಂಜ್ 300 ರಿಂದ 500 ಕಿ.ಮೀ ಎಂದು ಕಂಪನಿ ಹೇಳಿದೆ.
ವೇರಿಯೆಂಟ್ ವಾರು ಬೆಲೆ: ಟಾಪ್ ಎಂಡ್ ಆಫ್‌ಲ್ಯಾಂಡರ್ ಬೆಲೆ 1.89 ಲಕ್ಷ ರೂ., ಸ್ಪೋರ್ಟ್ಸ್ ವೇರಿಯೆಂಟ್ ಬೆಲೆ ರೂ. 1.39 ಲಕ್ಷ, ಮ್ಯಾಕ್ಸ್ ರೂಪಾಂತರದ ಬೆಲೆ ರೂ.1.59 ಲಕ್ಷ ಮತ್ತು ಪ್ರೊ ರೂಪಾಂತರದ ಬೆಲೆ ರೂ.1.29 ಲಕ್ಷವಿದೆ. ಹಾಗೆಯೇ ಕಕಂಪನಿಯ ಅತ್ಯಂತ ಅಗ್ಗದ ಬೆಲೆಗೆ ಕ್ಲಾಸಿಕ್ ವೆರಿಯಂಟ್ ಲಭ್ಯವಿದ್ದು, ಇದರ ಬೆಲೆ ರೂ.89 ಸಾವಿರ ಇದೆ.

ಎಲ್ಲಾ ವೇರಿಯೆಂಟ್‌ಗಳು ರಿವರ್ಸ್ ಗೇರ್, ಫೋನ್ ಲಾಕ್, ಫೋನ್ ಕನೆಕ್ಟಿವಿಟಿ, ಅಲಾಯ್ ವೀಲ್‌ಗಳು, ಎಲ್ಇಡಿ ಲೈಟ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಕಂಪನಿ ಇನ್ನು ಬಹಿರಂಗಪಡಿಸಿಲ್ಲ. ಆದರೆ ಪ್ರಿಬುಕಿಂಗ್ ಆಯ್ಕೆ ಲಭ್ಯವಿದೆ. ನೀವು ಈ ಸ್ಕೂಟರ್ ಅನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ರೂ. 499 ಪಾವತಿಸಿ ಬುಕ್ ಮಾಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








