Royal Enfield: ಖದರ್ ತೋರಿದ ಭಾರತದ ರಾಯಲ್ ಎನ್‌ಫೀಲ್ಡ್.. ಅದು ನೆಕ್ಸ್ಟ್ ಲೆವೆಲ್!

ಬಹುತೇಕ ಯುವ ಜನರಿಗೆ ನಿಮ್ಮ ಫೆವರೇಟ್ ಬೈಕ್ ಯಾವುದೆಂದು ಕೇಳಿದರೆ, ತಕ್ಷಣ ಬರುವ ಉತ್ತರ ರಾಯಲ್ ಎನ್‌ಫೀಲ್ಡ್ (Royal Enfield) ಮೋಟಾರ್ ಸೈಕಲ್ ಎಂದು. ಅಷ್ಟರಮಟ್ಟಿಗೆ ಕಂಪನಿಯ ಬೈಕ್‌ಗಳು ದೇಶದಲ್ಲಿ ಖ್ಯಾತಿ ಗಳಿಸಿವೆ. ಪ್ರಸ್ತುತ, ಜುಲೈ ತಿಂಗಳ ಮಾರಾಟ ವರದಿ ಪ್ರಕಟಗೊಂಡಿದ್ದು, ರಾಯಲ್ ಎನ್‌ಫೀಲ್ಡ್ ಭಾರೀ ವೇಗದಲ್ಲಿ ಮುಗ್ಗುತ್ತಿದೆ.

ಕಳೆದ ಜುಲೈ ತಿಂಗಳಲ್ಲಿ (2023) ರಾಯಲ್ ಎನ್‌ಫೀಲ್ಡ್ ಕಂಪನಿ ಉತ್ತಮ ಪ್ರಗತಿ ಸಾಧಿಸಿದೆ. ಹೋದ ವರ್ಷದ ಇದೇ ಅವಧಿಗೆ (55,555 ಯುನಿಟ್) ಹೋಲಿಸಿದರೆ, ಭರ್ತಿ 73,117 ಯುನಿಟ್ ಮೋಟಾರ್ ಸೈಕಲ್ ಮಾರಾಟ ಮಾಡಿ, ಶೇಕಡ 32% ಬೆಳವಣಿಗೆ ಕಂಡಿದೆ. ಅದರಲ್ಲೂ ದೇಶೀಯ ಮಾರುಕಟ್ಟೆಯಲ್ಲಿ 66,062 ಬೈಕ್‌ಗಳನ್ನು ಮಾರಾಟ ಮಾಡಿ, ಶೇಕಡ 42% ಅಭಿವೃದ್ಧಿ ಸಾಧಿಸಿದೆ.

Royal Enfield: ಖದರ್ ತೋರಿದ ಭಾರತದ ರಾಯಲ್ ಎನ್‌ಫೀಲ್ಡ್.. ಅದು ನೆಕ್ಸ್ಟ್ ಲೆವೆಲ್!

ರಫ್ತು ವಿಚಾರದಲ್ಲಿ ರಾಯಲ್ ಎನ್‌ಫೀಲ್ಡ್ ಕೊಂಚ ಮಟ್ಟಿಗೆ ಹಿನ್ನೆಡೆ ಅನುಭವಿಸಿದೆ. 7,055 ವಾಹನಗಳನ್ನು ರಫ್ತು ಮಾಡಿ, ಶೇಕಡ 22% ಕುಸಿತ ಕಂಡಿದೆ. ಇತ್ತೀಚೆಗೆ, ಕಂಪನಿಯು ಸೂಪರ್ ಮೀಟಿಯರ್ 650 ಬೈಕ್ ಬಿಡುಗಡೆಗೊಳಿಸಿದ್ದು, ಉತ್ತಮ ಮಾರಾಟದ ಹಾದಿಯಲಿದೆ. ಅದರಲ್ಲೂ ಕಳೆದ ವರ್ಷದ ಆಗಸ್ಟ್‌ನಲ್ಲಿ ಲಾಂಚ್ ಆದ ಹಂಟರ್ 350 ಬೈಕ್, ರಾಯಲ್ ಎನ್‌ಫೀಲ್ಡ್ ಕಂಪನಿಯ ಅಗ್ಗದ ಬೆಲೆಯ ಮೋಟಾರ್ ಸೈಕಲ್ ಆಗಿದೆ.

ಇದು, ರೂ.1.50 ಲಕ್ಷದ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬಿಡುಗಡೆಗೊಂಡ ಮೇಲೆ ಕಂಪನಿಯು 2 ಲಕ್ಷಕ್ಕೂ ಹೆಚ್ಚು ಹಂಟರ್ 350 ಬೈಕ್ ಮಾರಾಟ ಮಾಡಿದೆ. ರಾಯಲ್ ಎನ್‌ಫೀಲ್ಡ್ ಈ ಮಟ್ಟಿಗೆ ಯಶಸ್ಸು ಸಾಧಿಸಿರುವ ಬಗ್ಗೆ ಮಾತನಾಡಿರುವ ಕಂಪನಿಯ ಸಿಇಒ ಬಿ.ಗೋವಿಂದರಾಜನ್ ಅವರು, 'ಮೊದಲ ತ್ರೈಮಾಸಿಕದಲ್ಲಿ ಭರ್ಜರಿಯಾಗಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಅದು ಎರಡನೇ ತ್ರೈಮಾಸಿಕದಲ್ಲೂ ಮುಂದುವರಿಯುವ ನೀರಿಕ್ಷೆಯಿದೆ' ಎಂದು ಹೇಳಿದ್ದಾರೆ.

'ಮುಂಬರುವ ತಿಂಗಳಲ್ಲಿ ನವೀನ ವಿನ್ಯಾಸದ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದೇವೆ. ದೀರ್ಘಕಾಲಿಕ ಗುರಿಯನ್ನು ಮುಟ್ಟಲು ವಿನೂತನ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ' ಎಂದು ಬಿ.ಗೋವಿಂದರಾಜನ್ ಹೇಳಿದ್ದಾರೆ. ಇದೇ ತಿಂಗಳ (ಆಗಸ್ಟ್) ಅಂತ್ಯದ ವೇಳೆಗೆ ರಾಯಲ್ ಎನ್‌ಫೀಲ್ಡ್‌ ಹೊಚ್ಚ ಹೊಸ ಬುಲೆಟ್ ಬೈಕ್ ಬಿಡುಗಡೆಗೊಳಿಸುತ್ತದೆ ಎಂದು ಹೇಳಲಾಗಿದೆ. ಆದರೆ, ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲ.

ಮೊದಲಿಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬಗ್ಗೆ ಮಾತನಾಡೋಣ. ಇದು, ರೂ.1.93 - 2.25 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು, 349 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 20.2 PS ಗರಿಷ್ಠ ಪವರ್ ಹಾಗೂ 27 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 41.55 kmpl ಮೈಲೇಜ್ ನೀಡುತ್ತದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ ರೂ.1.53 ಲಕ್ಷದಿಂದ ರೂ.1.69 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದು, 346 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಜೊತೆಗೆ 38 kmpl ಮೈಲೇಜ್ ನೀಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರೂ.2.16 - 2.28 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದು, 411 ಸಿಸಿ ಎಂಜಿನ್ ಹೊಂದಿದ್ದು, 24.3 PS ಗರಿಷ್ಠ ಪವರ್ ಹಾಗೂ 32 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದ್ದು, 32.04 kmpl ಮೈಲೇಜ್ ನೀಡುತ್ತದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಭಾರತದ ಮಾರುಕಟ್ಟೆ ರೂ.3.14 - 3.39 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದು, BS6.2 ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಿರುವ 648 ಸಿಸಿ ಎಂಜಿನ್ ಪಡೆದಿದ್ದು, 47.45 PS ಗರಿಷ್ಠ ಪವರ್ ಹಾಗೂ 52 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

More from DriveSpark

Article Published On: Wednesday, August 2, 2023, 12:39 [IST]
English summary
Royal enfield 32 growth july 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+