ಕನ್ಫರ್ಮ್ ಆಯ್ತು Royal Enfield ಎಲೆಕ್ಟ್ರಿಕ್ ಬೈಕ್... ಅದ್ದೂರಿ ನಿರ್ಮಾಣಕ್ಕಾಗಿ 1000 ಕೋಟಿ ಹೂಡಿಕೆ
ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ದೇಶದ ಬಹುತೇಕ ಕಂಪನಿಗಳು ತಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೂಡ ಬಿಡುಗಡೆ ಮಾಡುತ್ತಿವೆ. ಇದೀಗ ಭವಿಷ್ಯವನ್ನು ಅರಿತಿರುವ ದೇಶದ ದೈತ್ಯ ದ್ವಿಕ್ರ ವಾಹನ ತಯಾರಕ ರಾಯಲ್ ಎನ್‌ಫೀಲ್ಡ್ ಕೂಡ ಎಲೆಕ್ಟ್ರಿಕ್ ಬೈಕ್‌ಗಳ ತಯಾರಿಯಲ್ಲಿರುವುದನ್ನು ಖಚಿತಪಡಿಸಿದೆ.
ಐಷರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಲಾಲ್ ಅವರು, ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ತಯಾರಿಯನ್ನು ಖಚಿತಪಡಿಸಿದ್ದಾರೆ. ಇವರು 2000ನೇ ಇಸವಿಯಲ್ಲಿ ರಾಯಲ್ ಎನ್‌ಫೀಲ್ಡ್ ಸಿಇಒ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. 2006ರಲ್ಲಿ ಅವರು ಐಷರ್ ಮೋಟಾರ್ಸ್‌ನ ಸಿಇಒ ಮತ್ತು ಎಂಡಿ ಕೂಡ ಆದರು. ಸದ್ಯ ಎನ್‌ಫೀಲ್ಡ್ ಬ್ರಾಂಡ್ ಅನ್ನು ಅಗ್ರ ಸ್ಥಾನಕ್ಕೆ ತರುವಲ್ಲಿ ಶ್ರಮಿಸಿದ್ದಾರೆ.

ಇದೀಗ ಭವಿಷ್ಯದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಮನಗಂಡಿರುವ ಅವರು, Royal Enfeild ಎಲೆಕ್ಟ್ರಿಕ್ ಬೈಕ್ ನಿರ್ಮಾಣವನ್ನು ಖಚಿತಪಡಿಸಿದ್ದಾರೆ. ಅವರು ಮಾತನಾಡಿ, ಎಲೆಕ್ಟ್ರಿಕ್ ವಾಹನಗಳು ವೇಗದ ಬದಲಾವಣೆಯನ್ನು ಪಡೆಯುತ್ತಿವೆ. ಕಡಿಮೆ-ದೂರ, ನಗರ ಪ್ರಯಾಣಕ್ಕಾಗಿ EV ಗಳಿಗೆ ಬಲವಾದ ಬೇಡಿಕೆಯಿದೆ. ಆದರೆ ದೂರದ ಪ್ರಯಾಣಕ್ಕೆ ಪೆಟ್ರೋಲ್ ಚಾಲಿತ ವಾಹನಗಳೇ ಆಯ್ಕೆಯಾಗಲಿವೆ ಎಂದರು.
ರಾಯಲ್ ಎನ್‌ಫೀಲ್ಡ್ EV ಯೋಜನೆಗಳ ಕುರಿತು ಮಾತನಾಡಿ, ಕಂಪನಿಯು EV ಬೈಕ್‌ಗಳಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದೆ. "ನಾವು ಕೂಡ ಶ್ರಿಸುತ್ತಿದ್ದೇವೆ, EV ಅಭಿವೃದ್ಧಿಯಲ್ಲಿ ಹೆಚ್ಚಿನ ವೇಗವಿದೆ. ನಮ್ಮ ಪರೀಕ್ಷೆ ಮತ್ತು ಮೌಲ್ಯೀಕರಣ ಪ್ರಕ್ರಿಯೆಯು ಉತ್ತಮವಾಗಿರುವುದರಿಂದ ವಾಹನವನ್ನು ಮಾರುಕಟ್ಟೆಗೆ ತರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಸ್ಥಾಪಕ ಲಾಲ್ ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳು ದಿನದಿಂದ ದಿನಕ್ಕೆ ತಂತ್ರಾಜ್ಞಾನದಲ್ಲಿ ವೇಗದ ಅಭಿವೃದ್ಧಿಯನ್ನು ಕಾಣುತ್ತಿವೆ. ಹಾಗೆಯೇ ರಾಯಲ್ ಎನ್‌ಫೀಲ್ಡ್‌ನ ಹೊಸ ಇವಿ ಬೈಕ್ ಅಭಿವೃದ್ಧಿ ಪ್ರಕ್ರಿಯೆಯು ಚುರುಕಾಗಿದೆ. ಬ್ಯಾಟರಿ, ಮೋಟಾರ್‌ಗಳಂತಹ ಕೆಲವು ತಂತ್ರಜ್ಞಾನಗಳು ವೇಗವಾಗಿ ವಿಕಸನಗೊಂಡರೆ, ಆ ಘಟಕಗಳನ್ನು ಕಡಿಮೆ ಸಮಯದಲ್ಲಿ ನವೀಕರಿಸಿ ನಮ್ಮ ಮೋಟಾರ್ ಸೈಕಲ್ ಅನ್ನು ಆದಷ್ಟು ಬೇಗನೇ ತರುತ್ತೇವೆ ಎಂದು ಭರವಸೆ ನೀಡಿದರು.
ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ, ಪೋಷಕ ಕಂಪನಿ ಐಷರ್ ಮೋಟಾರ್ಸ್ 2024 ರಲ್ಲಿ 1,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲು ಮುಂದಾಗಿದೆ. ಇದಕ್ಕೆ ಕಾರಣ ರಾಯಲ್ ಎನ್‌ಫೀಲ್ಡ್ ಉತ್ತಮ ಬೆಳವಣಿಗೆ ಕಂಡಿರುವುದಾಗಿದೆ. 2022 ರಲ್ಲಿ 6,02,268 ಯುನಿಟ್‌ಗಳ ಮಾರಾಟ ಹಾಗೂ 2023 ರಲ್ಲಿ 8,34,895 ಮೋಟಾರ್ ಸೈಕಲ್‌ಗಳ ಅತ್ಯಧಿಕ ಮಾರಾಟವನ್ನು ದಾಖಲಿಸಿದೆ.

ಈ ಮೂಲಕ ಕಂಪನಿಯು ವರ್ಷದಿಂದ ವರ್ಷಕ್ಕೆ ಶೇ 38.4 ರಷ್ಟು ಅಭಿವೃದ್ಧಿ ಸಾಧಿಸಿದೆ. ಹಾಗಾಗಿ ಭವಿಷ್ಯದ ಯೋಜನೆಗಳಿಗಾಗಿ ಸಾವಿರ ಕೋಟಿ ರೂ. ಹೂಡಿಕೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಹೊಸ ಡಿಸೈನ್‌ನೊಂದಿಗೆ ಪೆಟ್ರೋಲ್ ಚಾಲಿತ ಎನ್‌ಫೀಲ್ಡ್ ಬೈಕ್‌ಗಳನ್ನು ತರಲು ಸಜ್ಜಾಗಿದ್ದಾರೆ. ಐಷರ್ ಮೋಟಾರ್ಸ್‌ನ ಎಂಡಿ ಸಿದ್ಧಾರ್ಥ ಲಾಲ್ ಅವರು ರಾಯಲ್ ಎನ್‌ಫೀಲ್ಡ್ ಭವಿಷ್ಯದ ಬಗ್ಗೆ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಡ್ರೈವ್ ಸ್ಪಾರ್ಕ್ ಕನ್ನಡ ವೆಬ್ ಸೈಟ್‌ನಲ್ಲಿ ಪ್ರಚಾರವಾಗಿರುವ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








