RE Himalayan 450 ಬಿಡುಗಡೆಗೂ ಮುನ್ನವೇ ಚಿತ್ರಗಳ ಸೋರಿಕೆ: ಹೊಸ ಡಿಸೈನ್ ಬಹಿರಂಗ
ರಾಯಲ್ ಎನ್‌ಫೀಲ್ಡ್ ತನ್ನ ಮುಂಬರುವ ಹಿಮಾಲಯನ್ 450 ಅಡ್ವೆಂಚರ್ (RE Himalayan 450) ಮೋಟಾರ್‌ಸೈಕಲ್‌ನ ಹೊಚ್ಚಹೊಸ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈ ಮುಂಬರುವ ಬೈಕ್ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಆದ್ರೆ ಅದಕ್ಕೂ ಮುನ್ನವೇ ಈಗ ಹೊಸ ಬೈಕ್‌ನ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.
ಈ ಫೋಟೋಗಳನ್ನು ನೋಡಿದ್ರೆ ಬಹುತೇಕ ಈಗ ಮಾರಾಟದಲ್ಲಿರುವ ಹಿಮಾಲಯನ್ ಮೋಟಾರ್ ಸೈಕಲ್‌ನಂತೆಯೇ ಕಾಣುತ್ತಿದ್ದು, ಕೆಲವೊಂದು ಬದಲಾವಣೆಗಳನ್ನು ಪಡೆದಿದೆ. ಮುಂಭಾಗವು ಹೆಚ್ಚು-ಮೌಂಟೆಡ್ ಮಡ್‌ಗಾರ್ಡ್‌ನೊಂದಿಗೆ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದ USD ಫೋರ್ಕ್ ಸಸ್ಪೆನ್ಶನ್ ಅನ್ನು ಸಹ ನವೀಕರಿಸಲಾಗಿದ್ದು, ಈಗಿರುವ ಮಾರಾಟದಲ್ಲಿರುವ ಮಾದರಿಗಿಂತ ವಿಭಿನ್ನವಾಗಿ ಕಾಣುತ್ತದೆ.

ಹಾಗಯೇ ವಿಂಡ್ ಶೀಲ್ಡ್ನ ಕೂಡ ಭಿನ್ನವಾಗಿದೆ. ಹೆಡ್‌ಲೈಟ್ ವೃತ್ತಾಕಾರದಲ್ಲಿದ್ದು ಯಾವುದೇ ಬದಲಾವಣೆಯಾಗಿಲ್ಲದಿದ್ದರೂ ಇದು ಎಲ್‌ಇಡಿ ಘಟಕವಾಗಿರುವ ಸಾಧ್ಯತೆಯಿದೆ. ಗಮನಿಸಬಹುದಾದ ಮತ್ತೊಂದು ಪ್ರಮುಖ ವಿನ್ಯಾಸ ವ್ಯತ್ಯಾಸವೆಂದರೆ ಕಂಪನಿಯು ಕೊಳವೆಯಾಕಾರದ ಎಕ್ಸೋಸ್ಕೆಲಿಟನ್‌ಗೆ ಸ್ವಲ್ಪ ನವೀಕರಣವನ್ನು ನೀಡಿದ್ದು, ಈಗಿನ ಮಾದರಿಗಿಂತ ಸ್ವಲ್ಪ ವಿಭಿನ್ನವಾಗಿದೆ.
ಅಲ್ಲದೆ, ಈ ಹೊಸ ಬೈಕ್‌ನಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿರುವುದು ಅದರ ಇಂಧನ ಟ್ಯಾಂಕ್. ಮರುವಿನ್ಯಾಸಗೊಳಿಸಲಾದ ಇಂಧನ ಟ್ಯಾಂಕ್ ಪ್ರಸ್ತುತ ಮಾದರಿಯ ತೆಳುವಾದ ಮತ್ತು ನಯವಾದ ಇಂಧನ ಟ್ಯಾಂಕ್‌ಗಿಂತ ಸ್ವಲ್ಪ ದೊಡ್ಡದಾಗಿದೆ. ಸೋರಿಕೆಯಾದ ಚಿತ್ರಗಳಿಂದ ಸಂಪೂರ್ಣವಾಗಿ ಸ್ಪಷ್ಟವಾಗಿ ಕಾಣದಿದ್ರೂ ಮುಂಬರುವ ಹಿಮಾಲಯನ್ 450 ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಹೊಸ ಕ್ಲಸ್ಟರ್ ಸಂಪೂರ್ಣವಾಗಿ ಹೊಸ ಇಂಟರ್ಫೇಸ್ ಅನ್ನು ಹೊಂದಿರುತ್ತದೆ. ರೈಡಿಂಗ್ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹಿಮಾಲಯನ್ 450 ಗೆ ಮತ್ತೊಂದು ಹೊಸ ಸೇರ್ಪಡೆ ಸ್ವಿಚ್ ಗೇರ್ ಆಗಿದ್ದು, ಮುಂಬರುವ ಈ ಬೈಕ್‌ನ ಹ್ಯಾಂಡಲ್‌ಬಾರ್ ಜೊತೆಗೆ ಸ್ವಿಚ್‌ಗಿಯರ್ ಅನ್ನು ಪರಿಷ್ಕರಿಸಲು ಕಂಪನಿ ನಿರ್ಧರಿಸಿದೆ.
ಚಾಲಕನ ಸೀಟಿನ ಕೆಳಗೆ ಬೈಕ್‌ನ ಮಧ್ಯದಲ್ಲಿ ಹೊಸ ಮೊನೊಶಾಕ್ ಸಸ್ಪೆನ್ಶನ್ ಅನ್ನು ಕಾಣಬಹುದು. ಸ್ವಲ್ಪ ಕೆಳಗೆ, ಸಂಪೂರ್ಣವಾಗಿ ಹೊಸ ಎಕ್ಸಾಸ್ಟ್ ವಿನ್ಯಾಸವನ್ನು ಸಹ ಗಮನಿಸಬಹುದು. ಕೊನೆಯದಾಗಿ, ಹಿಂದಿನ ಆಸನವನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದ್ದು, ಹಳೆಯ ಮಾದರಿಯಲ್ಲಿ ಕಾಣೆಯಾಗಿದ್ದ ಕೊಳವೆಯಾಕಾರದ ಎಕ್ಸೋಸ್ಕೆಲಿಟನ್ ಅನ್ನು ಹೊಸ ಮಾದರಿ ಒಳಗೊಂಡಿದೆ.
ಮೋಟಾರ್‌ಬೈಕ್ ಸ್ಪ್ಲಿಟ್ ಸೀಟ್ ಸೆಟಪ್‌ಗಾಗಿ ಹೊಸ ವಿನ್ಯಾಸವನ್ನು ನೀಡಲಾಗಿದೆ. ಸೀಟಿನ ಮುಂಭಾಗದ ಭಾಗವು ಇಂಧನ ಟ್ಯಾಂಕ್‌ಗೆ ಸ್ವಲ್ಪ ಮುಂದೆ ವಿಸ್ತರಿಸಿದೆ. ಬೈಕ್‌ನ ಚೌಕಟ್ಟನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಈ ಹೊಸ ಹಿಮಾಲಯನ್ 450 ನಲ್ಲಿ ಅಳವಡಿಸಲಾಗುವ ದೊಡ್ಡ ಬದಲಾವಣೆಗಳಲ್ಲಿ ಹೊಸ ಲಿಕ್ವಿಡ್-ಕೂಲ್ಡ್ ಎಂಜಿನ್ ಪ್ರಮುಖವಾಗಿದೆ.
ಈ ಎಂಜಿನ್ ಬ್ರ್ಯಾಂಡ್‌ನ ಮೊದಲ ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿದ್ದು, ವರದಿಗಳ ಪ್ರಕಾರ, ಸಂಪೂರ್ಣವಾಗಿ ಹೊಸ 450cc ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ಬರಲಿದೆ. ಇದು ಸುಮಾರು 40 bhp ಪವರ್ ಮತ್ತು 45 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಗೇರ್‌ಬಾಕ್ಸ್‌ಗೆ ಸಂಬಂಧಿಸಿದಂತೆ, ಇದು 6-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಬರುತ್ತದೆ ಎಂದು ಮೂಲಗಳು ತಿಳಿಸಿವೆ.
ಬೈಕ್ ತಯಾರಕರು ಹೊಸ ಹಿಮಾಲಯನ್ 450 ಅನ್ನು ಅಕ್ಟೋಬರ್ 30 ಮತ್ತು ನವೆಂಬರ್ 1 ರ ನಡುವೆ ಬಿಡುಗಡೆ ಮಾಡಲಿದ್ದಾರೆ. ಇದರ ಬೆಲೆ ಸುಮಾರು ರೂ. 2.6 ಲಕ್ಷ (ಎಕ್ಸ್ ಶೋ ರೂಂ)ದಿಂದ ಆರಂಭವಾಗುವ ನಿರೀಕ್ಷೆಯಿದೆ. ಒಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಹೊಸ ಹಿಮಾಲಯನ್ 450, BMW G310 GS ಮತ್ತು KTM 390 ಅಡ್ವೆಂಚರ್ X ಮುಂಬರುವ ಬಜಾಜ್/ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ನಂತಹ ಮಾದರಿಗಳ ವಿರುದ್ಧ ಸ್ಪರ್ಧಿಸಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








