ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452: ಈ ಹೊಸ ಅಪ್‌ಡೇಟ್ ಬರುತ್ತೆಂದು ಯಾರೂ ಊಹಿಸಿರಲಿಲ್ಲ
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಂಬ ಹೆಸರು ಕೆಳದೇ ಇರುವ ಬೈಕ್ ಪ್ರೀಯರು ಇಲ್ಲವೇ ಇಲ್ಲ ಎಂದು ಹೇಳಬಹುದು. ಕಾರಣ ರಾಐಲ್ ಎನ್‌ಪೀಲ್ಡ್ ಈ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದಾಗಿನಿಂದ ಇದು ಬೈಕ್‌ಪ್ರೀಯರ ನೆಚ್ಚಿನ ಬೈಕಾಗಿದೆ. ಇದಕ್ಕೆ ತನ್ನದೇ ಆದ ಕಾರಣಗಳೂ ಸಹ ಇದೆ.
ಕೆಲವೇ ದಿನಗಳಲ್ಲಿ ರಾಯಲ್ ಎನ್‌ಪೀಲ್ಡ್ ಹಿಮಾಲಯನ್ ಬೈಕ್‌ನ ಮತ್ತೊಂದು ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂಬ ಮಾಹಿತಿ ಹೊಸದೇನಲ್ಲ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಪೀಲ್ಡ್ ಹಿಮಾಲಯನ್ 411 ಸಿಸಿ ಯಲ್ಲಿ ಲಭ್ವಿದ್ದು, ಇದೀಗ ರಾಯಲ್ ಎನ್‌ಪೀಲ್ಡ್ ಹಿಮಾಲಯನ್ 452 ಸಿಸಿ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಇದು ಬೈಕ್ ಪ್ರೇಮಿಗಳ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸ್ಟೈಲಿಷ್ ಮತ್ತು ಒರಟಾದ ಅಡ್ವೆಂಚರ್ ಮೋಟಾರ್‌ಸೈಕಲ್ ಆಗಿದ್ದು, ಎಂತಹ ರಸ್ತೆಗಳಲ್ಲೂ ಗಮ್ಯಸ್ಥಾನ ತಲುಪಲು ವಿನ್ಯಾಸಗೊಳಿಸಲಾಗಿದೆ. ಆದರೆ ಈ ಮೋಟಾರ್‌ಸೈಕಲ್ ಸಂಪೂರ್ಣವಾಗಿ ಸಮರ್ಥವಾಗಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಹಾಗಾಗಿ ರಾಯಲ್ ಎನ್‌ಫೀಲ್ಡ್ ಈಗ ಹಿಮಾಲಯನ್ ಮೋಟಾರ್‌ಸೈಕಲ್‌ನ ಹೆಚ್ಚು ಪವರ್ ಫುಲ್ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ.
ಈ ಕುರಿತಾಗಿ ಹಲವಾರು ಸ್ಪೈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಂಡು ಬರುತ್ತಿದ್ದು ಇದರಿಂದಾಗಿ ಆ ಬೈಕ್ ಮೇಲೆ ಇಟ್ಟಿರುವ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಬೈಕ್ ಕುರಿತಾದ ಹೊಸದಾದ ಸುದ್ದಿಯೊಂದು ಹರಿದಾಡುತ್ತಿದೆ. ಮಾಹಿತಿಗಳ ಪ್ರಕಾರ ಹೊಸ ಹಿಮಾಲಯನ್ ಬೈಕ್‌ನಲ್ಲಿ ಟ್ಯೂಬ್‌ಲೆಸ್ ಟೈರ್ ಆಯ್ಕೆಯ ಆವೃತ್ತಿಯೂ ಲಭ್ಯವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು ಹೊಸ ಹಿಮಾಲಯನ್‌ನಲ್ಲಿ ಟ್ಯೂಬ್‌ಲೆಸ್ ಟೈರ್ ಆವೃತ್ತಿ ಆಪ್ಷನ್ ಆಗಿ ಲಭ್ಯವಾಗುವುದರಿಂದ ಇದರ ಬೆಲೆಯಲ್ಲೂ ಸಹಜವಾಗಿಯೇ ಏರಿಕೆಯಾಗಬಹುದು. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಿಮಾಲಯನ್ ವಿತ್ ಟ್ಯೂಬ್ ಟೈರ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಹೊಸ ಹಿಮಾಲಯನ್ ಗ್ರಾಹಕರಿಗೆ ಒಂದು ಉತ್ತಮ ಆಯ್ಕೆಯಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎಂಬುದೇ ಹಲವರ ಅಭಿಪ್ರಾಯ.
ಇನ್ನು ಈ ಬೈಕ್‌ನ ಇತರ ವಿಷಯಗಳನ್ನು ನೋಡುವುದಾದರೆ, ರಾಯಲ್ ಎನ್‌ಪೀಲ್ಡ್ ಹಿಮಾಲಯನ್ 451 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ಇರುತ್ತದೆ. ಆದರೆ ಬೈಕ್‌ನ ಪವರ್ ಬಗ್ಗೆ ಅಷ್ಟಾಗಿ ಮಾಹಿತಿ ಲಭ್ಯವಾಗಿಲ್ಲ. ಆದರೂ ಇದು 40 Bhp ಶಕ್ತಿ ಮತ್ತು 45 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂಬ ಅಂದಾಜಿದೆ.
ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ಗೆ ಜೋಡಣೆಯಾಗಿರುವುದರ ಜೊತೆಗೆ ದೊಡ್ಡ ಇಂಧನ ಟ್ಯಾಂಕ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿರುವ ಸಾಧ್ಯತೆ ಇದೆ. ಹೊಸ ಲಿಕ್ವಿಡ್-ಕೂಲ್ಡ್ ಎಂಜಿನ್ ಮೂಲಕ ಉತ್ಪತ್ತಿಯಾಗುವ ಪವರ್ ಮತ್ತು ಟಾರ್ಕ್ ಉತ್ಪಾದನೆಯನ್ನು ಗರಿಷ್ಠಗೊಳಿಸಲು, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಅನ್ನು 6 - ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಜ್ಜುಗೊಳಿಸುವ ನಿರೀಕ್ಷೆಯಿದೆ.
ಅಲ್ಲದೆ, ಮಾದರಿಯು ಸುಗಮವಾದ ಡೌನ್ ಶಿಫ್ಟ್‌ಗಳಿಗಾಗಿ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ನೀಡುವ ಹೆಚ್ಚಿನ ನಿರೀಕ್ಷೆಯಿದೆ.
ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್‌ಸೈಕಲ್ ನಲ್ಲಿ ಹಲವು ಆಧುನಿಕ ಫೀಚರ್‌ಗಳು ಕಂಡು ಬರಲಿವೆ ಎಂಬ ಮಾಹಿತಿಗಳಿವೆ. ಬ್ಲೂಟೂತ್ ಕನೆಕ್ಟಿವಿಟಿ, ಆಲ್-ಎಲ್‌ಇಡಿ ಲೈಟಿಂಗ್, ಡ್ಯುಯಲ್-ಚಾನೆಲ್ ಎಬಿಎಸ್ ಟೆಕ್, ಮಲ್ಟಿಪಲ್ ರೈಡ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್) ಮತ್ತು ಹೊಸ ವೃತ್ತಾಕಾರದ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








