ರಾಯಲ್ ಎನ್‌ಫೀಲ್ಡ್ ಹಂಟರ್ 350 ದಾಖಲೆ ನಿರ್ಮಾಣ... 2 ಲಕ್ಷ ಬೈಕ್‌ಗಳ ವಿತರಣೆ

ಮಧ್ಯಮ ಗಾತ್ರದ ಮೋಟಾರ್‌ಸೈಕಲ್ ವಿಭಾಗದಲ್ಲಿ (250cc - 750cc) ಜಾಗತಿಕ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ತನ್ನ ಸ್ಟೈಲಿಶ್ ರೋಡ್‌ಸ್ಟರ್, ಹಂಟರ್ 350 ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ ಅತಿ ಕಡಿಮೆ ಅವಧಿಯಲ್ಲಿ ದಾಖಲೆಯ 2 ಲಕ್ಷ ಬೈಕ್‌ಗಳ ಮಾರಾಟದ ಗಡಿಯನ್ನು ದಾಟಿದೆ.

ಆಗಸ್ಟ್ 2022 ರಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿತ್ತು. ವಿಶೇಷ ಅಂದ್ರೆ ಬಿಡುಗಡೆಯಾದ ಕೇವಲ 6 ತಿಂಗಳುಗಳಲ್ಲಿ (ಫೆ. 2023) ಹಂಟರ್ 1 ಲಕ್ಷ ಮಾರಾಟದ ಗಡಿಯನ್ನು ಮುಟ್ಟಿತ್ತು. ಇದಾದ ಕೇವಲ ಐದು ತಿಂಗಳಲ್ಲಿ ಮತ್ತೊಮ್ಮೆ ಒಂದು ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿ ಒಟ್ಟಾರೆ 2 ಲಕ್ಷ ಬೈಕ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗಿದೆ.

royal-enfield-hunter-350-delivery-2-lakh-bikes

ತಳಮಟ್ಟದಿಂದ ಅಭಿವೃದ್ಧಿಪಡಿಸಲಾದ ಹೊಸ ಆಕರ್ಷಕ ವಿನ್ಯಾಸದೊಂದಿಗೆ ರಾಯಲ್ ಎನ್‌ಫೀಲ್ಡ್ ಹಂಟರ್ ಒಟ್ಟಾರೆ ಮಾರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಹಂಟರ್ 350 ಹೊಸ ಗ್ರಾಹಕರನ್ನು ರಾಯಲ್ ಎನ್‌ಫೀಲ್ಡ್ ಸಮುದಾಯಕ್ಕೆ ತರುವಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂಬುದಕ್ಕೆ ಈ ಮಾರಾಟದ ಅಂಕಿಅಂಶಗಳೆ ಸಾಕ್ಷಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹಂಟರ್ 350 ಯಶಸ್ಸಿನ ಬಗ್ಗೆ ಮಾತನಾಡಿದ ರಾಯಲ್ ಎನ್‌ಫೀಲ್ಡ್ ಸಿಇಒ ಬಿ. ಗೋವಿಂದರಾಜನ್, "ಹಂಟರ್ 350 ನಿಸ್ಸಂದೇಹವಾಗಿ ಕಳೆದ ವರ್ಷ ಮಧ್ಯಮ ಗಾತ್ರದ ಮೋಟಾರ್‌ಸೈಕಲ್ ವಿಭಾಗದಲ್ಲಿ ಬಿಡುಗಡೆಯಾದ ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್ ಆಗಿದೆ. ಪ್ರಾರಂಭವಾದ ಒಂದು ವರ್ಷದೊಳಗೆ ಹಂಟರ್ ಪ್ರಪಂಚದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಸವಾರರ ಹೆಮ್ಮೆಯ ಸಮುದಾಯವನ್ನು ಸಂಗ್ರಹಿಸಿದೆ ಎಂದು ನಾವು ತುಂಬಾ ಹೆಮ್ಮೆಪಡುತ್ತೇವೆ ಎಂದರು.

royal-enfield-hunter-350-delivery-2-lakh-bikes

ಭಾರತದಲ್ಲಿ ಮಾತ್ರವಲ್ಲದೆ, ಹಂಟರ್ 350 ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಜನಪ್ರಿಯತೆ ಹೆಚ್ಚುತ್ತಿದೆ. ನಮ್ಮ ಹಂಟರ್ ಸಮುದಾಯಕ್ಕೆ ಧನ್ಯವಾದ ಅರ್ಪಿಸುತ್ತೇವೆ. ಚೆನ್ನೈನಲ್ಲಿರುವ ನಮ್ಮ ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳು ಮತ್ತು ನಮ್ಮ ವಿಸ್ತಾರವಾದ ಜಾಗತಿಕ ಜಾಲದಿಂದ ಯಶಸ್ವಿಯಾಗಿ ಬ್ರಾಂಡ್ ಮುನ್ನಡೆಯುತ್ತಿದೆ. ಪ್ರಪಂಚದಾದ್ಯಂತ ಹಂಟರ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ವಿಶ್ವಾಸ ನಮಗಿದೆ ಎಂದರು.

ಬೈಕ್‌ನ ಆಕರ್ಷಕ ಸ್ಟೈಲಿಂಗ್, ಉತ್ತಮ ಪರ್ಫಾಮೆನ್ಸ್ ಮತ್ತು ಆಧುನಿಕ-ರೆಟ್ರೊ ಲುಕ್‌ನೊಂದಿಗೆ, ಹಂಟರ್ 350 ಇಂದು ಯುವ ಸವಾರರಿಗೆ ಆದ್ಯತೆಯ ಆಯ್ಕೆಯಾಗಿದೆ. ಯುವ ಸವಾರರು ಅದರ ವೇಗದ ಚುರುಕುತನ ಮತ್ತು ಆತ್ಮವಿಶ್ವಾಸದ ಕುಶಲತೆಗಾಗಿ ಹಂಟರ್ 350 ಅನ್ನು ಆರಿಸಿಕೊಳ್ಳುತ್ತಿದ್ದಾರೆ. ಹಂಟರ್ 350, 20ಕ್ಕೂ ಹೆಚ್ಚು ಭಾರತೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವುದಾಗಿ ಕಂಪನಿ ಹೇಳಿಕೊಂಡಿದೆ.

royal-enfield-hunter-350-delivery-2-lakh-bikes

ಇದಿಷ್ಟೇ ಅಲ್ಲದೇ ಗೌರವಾನ್ವಿತ 'ವರ್ಷದ ಭಾರತೀಯ ಮೋಟಾರ್‌ಸೈಕಲ್ 2023' ಪ್ರಶಸ್ತಿ ಮತ್ತು ಥೈಲ್ಯಾಂಡ್‌ನ ಅತ್ಯುತ್ತಮ ಆಧುನಿಕ ಕ್ಲಾಸಿಕ್ ಲೈಟ್‌ವೇಟ್ ಮೋಟಾರ್‌ಸೈಕಲ್‌ ಪುರಸ್ಕಾರಗಳನ್ನು ಪಡೆದಿದೆ. ಭಾರತದಲ್ಲಿ, ಹಂಟರ್ 350 ಮಹಾನಗರಗಳ ಹೊರತಾಗಿ ಟೈರ್-2 ಮತ್ತು ಟೈರ್-3 ಮಾರುಕಟ್ಟೆಗಳಲ್ಲಿ ವೇಗವಾಗಿ ಪ್ರವೇಶಿಸಿದೆ. ಭಾರತದ ಜೊತೆಗೆ, ಹಂಟರ್ ಈಗ ಇಂಡೋನೇಷ್ಯಾ, ಜಪಾನ್, ಕೊರಿಯಾ, ಥೈಲ್ಯಾಂಡ್‌ನಲ್ಲಿ ಲಭ್ಯವಿದೆ.

ನಿರಂತರ ಉತ್ಪಾದನೆಯಲ್ಲಿ ಅತ್ಯಂತ ಹಳೆಯ ಮೋಟಾರ್‌ಸೈಕಲ್ ಬ್ರ್ಯಾಂಡ್, ರಾಯಲ್ ಎನ್‌ಫೀಲ್ಡ್ ಮೇಲೆ ತಿಳಿಸಿದ ದೇಶಗಳು ಮಾತ್ರವಲ್ಲದೆ ಫ್ರಾನ್ಸ್, ಜರ್ಮನಿ, ಇಟಲಿ, ಯುಕೆ, ಅರ್ಜೆಂಟೀನಾ, ಕೊಲಂಬಿಯಾ, ಮೆಕ್ಸಿಕೋ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿಯೂ ಸಹ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಈ ಮೋಟಾರ್ ಸೈಕಲ್ ಬ್ರೆಜಿಲ್ ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

royal-enfield-hunter-350-delivery-2-lakh-bikes

ರಾಯಲ್ ಎನ್‌ಫೀಲ್ಡ್‌ ಸದ್ಯ ಸ್ಟೈಲಿಶ್ ಹಂಟರ್ 350, ಟೈಮ್‌ಲೆಸ್ ಕ್ಲಾಸಿಕ್ 350, ಮೀಟಿಯೊರ್ 350 ಕ್ರೂಸರ್, 650 ಟ್ವಿನ್ ಮೋಟಾರ್‌ಸೈಕಲ್‌ಗಳ ಜೊತೆಗೆ ಹೊಸ ಸೂಪರ್ ಮೆಟಿಯರ್ 650, ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮತ್ತು ಹಿಮಾಲಯನ್ 1 ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ ಸದ್ಯ ಕಂಪನಿಯ ಎಂಟ್ರಿ ಲೆವಲ್ ವಿಭಾಗದಲ್ಲಿದ್ದು ಇದರ ಜೊತೆಗ ಬುಲೆಟ್ 350 ಕೂಡ ಇದೆ. ಆದ್ರೆ ಸದ್ಯಕ್ಕೆ ಕ್ಲಾಸಿಕ್ 350 ನಂತರ ಅತಿ ಹೆಚ್ಚು ಮಾರಾಟ ಕಾಣುತ್ತಿರು ಮೋಟಾರ್ ಸೈಕಲ್ ಆಗಿ ಹಮಟರ್ ಜನಪ್ರಿಯತೆ ಪಡೆದಿದೆ. ಈ ಹೊಸ ಹಂಟರ್ 350 ಮೋಟಾರ್‌ಸೈಕಲ್ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Tuesday, July 25, 2023, 15:35 [IST]
English summary
Royal enfield hunter 350 delivery 2 lakh bikes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+