ಭಾರೀ ಸದ್ದು ಮಾಡುತ್ತಿದ್ದ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೆಲೆ ಏರಿಕೆ
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಸೂಪರ್ ಮಿಟಿಯೊರ್ 650 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತು. ರಾಯಲ್ ಎನ್‌ಫೀಲ್ಡ್ ಪ್ರಸ್ತುತ ಭಾರತ ಮಾತ್ರವಲ್ಲ ವಿಶ್ವದ ವಿವಿಧ ದೇಶಗಳಲ್ಲಿ ತನ್ನ ಬೈಕ್ ಗಳನ್ನು ಮಾರಾಟ ಮಾಡುತ್ತಿದೆ
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 (Royal Enfield Super Meteor 650) ಬೈಕ್ ಸ್ಟ್ಯಾಂಡರ್ಡ್ ಮತ್ತು ಟೂರರ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ರಾಯಲ್ ಎನ್‌ಫೀಲ್ಡ್ ಬೈಕಿಗೆ ಭಾರತದಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕಿನ ಬೆಲೆಯನ್ನು ಹೆಚ್ಚಿಸಿದೆ, ಈ ಬೈಕಿನ ಎಲ್ಲಾ ಮೂರು ರೂಪಾಂತರಗಳಿಗೆ ರೂ 5,000 ರಷ್ಟು ಹೆಚ್ಚಿಸಿದೆ.

ಬೆಲೆ ಏರಿಕೆಯ ಬಳಿಕ, ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕಿನ ಅತ್ಯಂತ ಕೈಗೆಟುಕುವ ಆಸ್ಟ್ರಲ್ ರೂಪಾಂತರದ ಬೆಲೆ ಈಗ ರೂ.3.54 ಲಕ್ಷ, ಮಿಡ್-ಸ್ಪೆಕ್ ಇಂಟರ್‌ಸ್ಟೆಲ್ಲರ್ ರೂಪಾಂತರದ ಬೆಲೆಯು ರೂ,3.69 ಲಕ್ಷವಾದರೆ, ಟಾಪ್ ರೂಪಾಂತರದ ಬೆಲೆಯು ರೂ.3.84 ಲಕ್ಷವಾಗಿದೆ. ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ 648cc, ಏರ್ ಮತ್ತು ಆಯಿಲ್-ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.
ಇದೇ ಎಂಜಿನ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ ಗಳಲ್ಲಿ ನೀಡಲಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಸೂಪರ್ ಮಿಟಿಯೊರ್‌ನ ಎಂಜಿನ್ ಮತ್ತು ಅದರ ಗೇರಿಂಗ್ ಅನ್ನು ನವೀಕರಿಸಿದೆ. ಈ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕಿನಲ್ಲಿರುವ ಅದೇ 648 cc,ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 46.2 ಬಿಹೆಚ್‍ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ
ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಬೈಕ್ ಒಟ್ಟು 241 ಕೆಜಿ ತೂಕದ ಅತ್ಯಂತ ಭಾರವಾದ ರಾಯಲ್ ಎನ್‌ಫೀಲ್ಡ್ ಬೈಕ್ ಆಗಿದೆ. ಇನ್ನು ಆಯಾಮದಲ್ಲಿ ವಿಷಯದಲ್ಲಿ, ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ 2260 mm ಉದ್ದ, 890 mm ಅಗಲ ಮತ್ತು 1155 mm ಎತ್ತರವನ್ನು ಹೊಂದಿದೆ.
ಇನ್ನು ಈ ಹೊಸ ಬೈಕ್ 1500 mm ವ್ಹೀಲ್ ಬೇಸ್ ಮತ್ತು 135 mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಮಿಟಿಯೊರ್ 650 ಬೈಕ್ ಸೀಟ್ 740 ಎಂಎಂ ಎತ್ತರವನ್ನು ಹೊಂದಿದೆ. ಈ ಬೈಕ್ ಸಂಪೂರ್ಣ ಎಲ್‌ಇಡಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿರುವ ಕಂಪನಿಯ ಮೊದಲ ಬೈಕ್ ಆಗಿದೆ.
ಈ ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕಿನ ಬಣ್ಣಗಳ ಆಯ್ಕೆಯ ಬಗ್ಗೆ ಹೇಳುವುದಾದರೆ, ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು ಆಸ್ಟ್ರಲ್ ಬ್ಲೂ, ಆಸ್ಟ್ರಲ್ ಬ್ಲಾಕ್, ಆಸ್ಟ್ರಲ್ ಗ್ರೀನ್, ಇಂಟರ್ ಸ್ಟೆಲ್ಲರ್ ಗ್ರೀನ್ ಮತ್ತು ಇಂಟರ್ ಸ್ಟೆಲ್ಲರ್ ಗೆರಿ.ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು 300 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.
ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ಪಡೆಯುತ್ತದೆ. ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್ ಯುಎಸ್‌ಡಿ ಫೋರ್ಕ್ ಸಸ್ಪೆಕ್ಷನ್ ಅನ್ನು ಹೊಂದಿದೆ. ಈ ಬೈಕ್ ಟಿಯರ್‌ಡ್ರಾಪ್ ಆಕಾರದ ಇಂಧನ ಟ್ಯಾಂಕ್, ವೃತ್ತಾಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಎಂಜಿನ್ ಕೇಸಿಂಗ್‌ಗಳಲ್ಲಿ ಬ್ಲ್ಯಾಕ್ ಫಿನಿಶ್ ಮತ್ತು ಅಲ್ಯೂಮಿನಿಯಂ ಫಿನಿಶ್ಡ್ ಸ್ವಿಚ್ ಕ್ಯೂಬ್‌ಗಳನ್ನು ಒಳಗೊಂಡಿದೆ.


Click it and Unblock the Notifications








