ಮತ್ತಷ್ಟು ಸದ್ದು ಮಾಡಲು ನವೀಕರಣಗಳೊಂದಿಗೆ ಬರುತ್ತಿವೆ ರಾಯಲ್ ಎನ್ಫೀಲ್ಡ್ 650 ಟ್ವಿನ್ ಬೈಕ್‌ಗಳು
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗದ್ದು, ಈ ರಾಯಲ್ ಎನ್‌ಫೀಲ್ಡ್ ಕಂಪನಿಯ ಇಂಟರ್‌ಸೆಪ್ಟರ್ 650 (Interceptor 650) ಮತ್ತು ಕಾಂಟಿನೆಂಟಲ್ ಜಿಟಿ650 (Continental GT 650) ಎಂಬ ಟ್ವಿನ್ ಬೈಕ್‌ಗಳು ಬಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿಂದ ಮಾರಾಟವಾಗುತ್ತಿದೆ.
ಹೊಸ ವರದಿಗಳ ಪ್ರಕಾರ, ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಶೀಘ್ರದಲ್ಲೇ ಟ್ಯೂಬ್‌ಲೆಸ್ ಟೈರ್‌ಗಳು ಮತ್ತು ಹೊಸ ಬಣ್ಣದ ಯೋಜನೆಗಳೊಂದಿಗೆ ಅಲಾಯ್ ವ್ಹೀಲ್ ಗಳನ್ನು ಪಡೆಯಲಿದೆ. ಅಸ್ತಿತ್ವದಲ್ಲಿರುವ ವೈರ್-ಸ್ಪೋಕ್ ವೀಲ್ ಮಾದರಿಯೊಂದಿಗೆ ಮಾರಾಟವಾಗುವ ಹೊಸ ರೂಪಾಂತರಗಳ ರೂಪದಲ್ಲಿ ನವೀಕರಣಗಳನ್ನು ಪರಿಚಯಿಸಬಹುದು. ಟ್ಯೂಬ್‌ಲೆಸ್ ಅಲಾಯ್ ವ್ಹೀಲ್ ಗಳು ರೈಡಿಂಗ್ ಅನುಭವವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನವೀಕರಿಸಿದ ಈ ರಾಯಲ್ ಎನ್ಫೀಲ್ಡ್ ಟ್ವಿನ್ ಬೈಕ್‌ಗಳು OBD2 ಎಮಿಷನ್ ಕಂಪ್ಲೇಂಟ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ.

ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಸದ್ಯಕ್ಕೆ 649ಸಿಸಿ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 5,250 ಆರ್‌ಪಿಎಂನಲ್ಲಿ 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿಗಳಾದಯೆ ಯಜ್ಡಿ ಬೈಕ್‌ಗಳು ಬಿಡುಗಡೆಯಾಗಿವೆ .
ಆದರೂ ಇದರಿಂದ ರಾಯಲ್ ಎನ್‌ಫೀಲ್ಡ್ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ 650 ಟ್ವಿನ್ ಬೈಕ್‌ಗಳನ್ನು ಭಾರತದಲ್ಲಿ ಮೊದಲು ಬಿಡುಗಡೆಗೊಳಿಸಲಾಯಿತು. ಈ ಮಾದರಿಗಳು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿವೆ. ಕಳೆದ ಭಾರಿ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ650 ಬೈಕ್‌ಗಳು ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿತ್ತು. ಅದೇ ರೀತಿ ಈ ಬಾರಿಯು ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿದೆ.
ಈ ರಾಯಲ್ ಎನ್ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ವೆಂಚುರಾ ಬ್ಲೂ, ಆರೆಂಜ್ ಕ್ರಷ್, ಡೌನ್‌ಟೌನ್ ಡ್ರ್ಯಾಗ್, ಕ್ಯಾನ್ಯನ್ ರೆಡ್, ಸನ್‌ಸೆಟ್ ಸ್ಟ್ರಿಪ್ ಮತ್ತು ಬೇಕರ್ ಎಕ್ಸ್‌ಪ್ರೆಸ್ ಎಂಬ ಬಣ್ಣಗಳ ಆಯ್ಕೆಗಳೊಂದಿಗೆ ಬರಬಹುದು. ಇನ್ನು ಕಾಂಟಿನೆಂಟಲ್ ಜಿಟಿ 650 ಬೈಕ್ ರಾಕರ್ ರೆಡ್, ಡಕ್ಸ್ ಡಿಲಕ್ಸ್, ಬ್ರಿಟಿಷ್ ರೇಸಿಂಗ್ ಗ್ರೀನ್, ಬ್ಲ್ಯಾಕ್ ಮ್ಯಾಜಿಕ್, ಮಿಸ್ಟರ್ ಕ್ಲೀನ್ ಮತ್ತು ವೆಂಚುರಾ ಸ್ಟಾರ್ಮ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಬರಲಿವೆ.
ಈ ಎರಡು 650 ಟ್ವಿನ್ ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಗ್ಯಾಸ್ ಚಾರ್ಜ್ಡ್ ಶಾಕ್ ಗಳು 5-ಹಂತದ ಹೊಂದಾಣಿಕೆಯೊಂದಿಗೆ ಪ್ರಿ-ಲೋಡ್ ಡ್ಯಾಂಪಿಂಗ್ ಹೊಂದಿದೆ. ಪ್ರಮುಖವಾಗಿ ಈ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ650 ಬೈಕ್‌ಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.
ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಪ್ರಸ್ತುತ ಈ ರಾಯಲ್ ಎನ್ಫೀಲ್ಡ್ 650 ಟ್ವಿನ್ ಬೈಕ್ ಗಳಲ್ಲಿ 18 ಇಂಚಿನ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿವೆ. ಎರಡು ಬೈಕ್ ಗಳ ವಿನ್ಯಾಸವು ಬದಲಾಗದೆ ಉಳಿದಿದೆ. ಇದು ಒಂದೇ ಮಾದರಿಯ ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು, ಟ್ವಿನ್ ಎಕ್ಸಾಸ್ಟ್ ಸೆಟಪ್, ಸಿಂಗಲ್-ಪೀಸ್ ಫ್ಲಾಟ್ ಸೀಟ್ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಕೂಡ ಒಳಗೊಂಡಿದೆ.
ಈ ಹೊಸ ಇಂಟರ್‍ಸೆಪ್ಟರ್ 650 ಬೈಕ್ ಉತ್ತಮ ಸೀಟಿಂಗ್ ಪೊಷಿಷನ್ ಅನ್ನು ಹೊಂದಿದೆ. ಇನ್ನು ಕಾಂಟಿನೆಂಟಲ್ ಜಿಟಿ 650 ಅದರ ಉದ್ದವಾದ ಟ್ಯಾಂಕ್ ವಿನ್ಯಾಸ ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳೊಂದಿಗೆ ಹೆಚ್ಚು ಅಗ್ರೇಸಿವ್ ಲುಕ್ ನಿಂದ ಕೂಡಿದೆ.ಇನ್ನು ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ650 ಬೈಕ್‌ಗಳಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ನೀಡಲಾಗಿಲ್ಲ. ಆದರೆ ಕಂಪನಿಯು ಕಸ್ಟಮೈಸ್ ಮಾಡಲು ಆಯ್ಕೆಯನ್ನು ಸಹ ಕಂಪನಿ ನೀಡಲಾಗಿದೆ.


Click it and Unblock the Notifications








