Simple Energy: ಬೆಂಗಳೂರಿನ ಸಿಂಪಲ್ ಎನರ್ಜಿಯಿಂದ ತೀರಾ ಕಡಿಮೆ ಬೆಲೆಗೆ 2 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ?

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳು, ಕಮ್ಮಿ ಬೆಲೆಗೆ ಆಕರ್ಷಕ ವೈಶಿಷ್ಟ್ಯ ಹಾಗೂ ಉತ್ತಮ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಾಕಷ್ಟು ಶ್ರಮವಹಿಸುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರು ಮೂಲದ ಓಲಾ (Ola), ಎಸ್1 ಏರ್ ಹಾಗೂ ಎಥರ್ ಎನರ್ಜಿ, 450ಎಸ್ ಇ-ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿವೆ.

ಪ್ರಸ್ತುತ, ನಮ್ಮ ಬೆಂಗಳೂರಿನ ಮತ್ತೊಂದು ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಕಂಪನಿ ಸಿಂಪಲ್ ಎನರ್ಜಿ (Simple Energy), ಕಡಿಮೆ ಬೆಲೆಗೆ ದೇಶೀಯ ಮಾರುಕಟ್ಟೆಯಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಆ ಬಗ್ಗೆ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿದ್ದು, ಸಿಂಪಲ್ ಎನರ್ಜಿಯು ಸಿಂಪಲ್ ಡಾಟ್ ಒನ್ (Simple Dot One) ಮತ್ತು ಡಾಟ್ ಒನ್ (Dot One) ಎಂಬ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ.

Simple Energy: ಬೆಂಗಳೂರಿನ ಸಿಂಪಲ್ ಎನರ್ಜಿಯಿಂದ ತೀರಾ ಕಡಿಮೆ ಬೆಲೆಗೆ 2 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ?

ಸದ್ಯ, ಲಭ್ಯವಾಗಿರುವ ಮಾಹಿತಿ ಪ್ರಕಾರ, ನೂತನ ಸ್ಕೂಟರ್‌ಗಳನ್ನು ನಗರ ಸಂಚಾರಕ್ಕೆ ಸಾಧ್ಯವಾಗುವಂತೆ ಕಂಪನಿಯು ವಿನ್ಯಾಸಗೊಳಿಸಬಹುದು. ಇವೆರೆಡು ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಂಪೂರ್ಣ ಚಾರ್ಜಿನಲ್ಲಿ 180 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸಿಂಪಲ್ ಒನ್ (Simple One) ಇ-ಸ್ಕೂಟರ್ ಫುಲ್ ಚಾರ್ಜ್‌ನಲ್ಲಿ 212 km (IDC) ರೇಂಜ್ ಕೊಡುತ್ತದೆ.

ಮುಂಬರಲಿರುವ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸರಿ ಸುಮಾರು ರೂ.1 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು. ರೇಂಜ್ ಕೊಂಚ ಕಡಿಮೆಯಿರುವ ನೀರಿಕ್ಷೆಯಿರುವುದರಿಂದ ಬ್ಯಾಟರಿ ಗಾತ್ರ ಚಿಕ್ಕದಿರಬಹುದು. ಇವು, ಓಲಾ ಎಸ್1 ಏರ್ ಹಾಗೂ ಎಥರ್ ಎನರ್ಜಿ 450ಎಸ್ ಸ್ಕೂಟರ್ ಗಳಿಗೆ ಪ್ರಬಲ ಪೈಪೋಟಿ ನೀಡಬಹುದು ಎಂದು ಲೆಕ್ಕಾಹಾಕಲಾಗಿದೆ. ಜೊತೆಗೆ ಆಕರ್ಷಕ ವೈಶಿಷ್ಟ್ಯದೊಂದಿಗೆ ಗ್ರಾಹಕರಿಗೆ ಸಿಗಬಹುದು.

Simple Energy: ಬೆಂಗಳೂರಿನ ಸಿಂಪಲ್ ಎನರ್ಜಿಯಿಂದ ತೀರಾ ಕಡಿಮೆ ಬೆಲೆಗೆ 2 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ?

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ರೂ.1.45 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಎಲ್ಲ ವಿಧದ ಸುರಕ್ಷತೆಯಿಂದ ಕೂಡಿರುವ 5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಉಪಯೋಗಿಸಲಾಗಿದೆ. ಜೊತೆಗೆ ಈ ಸ್ಕೂಟರ್‌ನ ಎಲೆಕ್ಟ್ರಿಕ್ ಮೋಟಾರ್ 11.39 bhp (8.5kW) ಗರಿಷ್ಠ ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಕೇವಲ 2.77 ಸೆಕೆಂಡ್‌ಗಳಲ್ಲಿ ಗಂಟೆಗೆ 0-40 ಕಿಮೀ ವೇಗವನ್ನು ಪಡೆಯಲಿದ್ದು, 105 km ಟಾಪ್ ಸ್ವೀಡ್ ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಶೇಕಡ 0 - 80% ಚಾರ್ಜ್ ಆಗಲು 5 ಗಂಟೆ 54 ನಿಮಿಷ ತೆಗೆದುಕೊಳ್ಳುತ್ತದೆ. ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್ ಎಂಬ ನಾಲ್ಕು ರೈಡಿಂಗ್ ಮೋಡ್ ಆಯ್ಕೆಗಳನ್ನು ಪಡೆದಿದೆ.

ಬ್ರೆಜೆನ್ ಬ್ಲ್ಯಾಕ್, ಅಜುರೆ ಬ್ಲೂ ಹಾಗೂ ಗ್ರೇಸ್ ವೈಟ್ ಸೇರಿದಂತೆ ಆರು ಬಣ್ಣಗಳ ಆಯ್ಕೆಯಲ್ಲಿ ದೊರೆಯುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, OTA ಅಪ್‌ಡೇಟ್‌ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಟ್ಟಿಗೆ ಫ್ರಂಟ್ ಹಾಗೂ ರೇರ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಇನ್ನು, ಸಿಂಪಲ್ ಎನರ್ಜಿ ಅಗ್ಗದ ಬೆಲೆಗೆ 2 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದು, ಅದಕ್ಕಾಗಿ ಎರಡು ಹೆಸರನ್ನು ಟ್ರೇಡ್ ಮಾರ್ಕ್ ಮಾಡಿರುವುದು ಕಂಪನಿ ಅಭಿಮಾನಿಗಳಿಗೆ ಖುಷಿ ತಂದಿದೆ. ಕೆಲವೇ ತಿಂಗಳಲ್ಲಿ ಈ ಸ್ಕೂಟರ್ ಲಾಂಚ್ ಆಗುವ ಸಾಧ್ಯತೆಯಿದ್ದು, ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, August 11, 2023, 19:42 [IST]
English summary
Simple energy low cost electric scooters launching soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+