165 ಕೋಟಿ ಹೂಡಿಕೆ: ಭಾರತದಲ್ಲೇ ಗರಿಷ್ಠ ರೇಂಜ್ ನೀಡುವ 'Simple ONE' ಸ್ಕೂಟರ್ ಶೀಘ್ರ ವಿತರಣೆ!

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (ಇವಿ) ವಿಭಾಗವು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ವಿವಿಧ ಕಂಪನಿಗಳು ಹಲವು ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಇದೀಗ, ಬೆಂಗಳೂರು ಮೂಲದ ಸ್ಟಾರ್ಟಪ್ 'ಸಿಂಪಲ್ ಎನರ್ಜಿ' ಮಹತ್ವದ ಘೋಷಣೆ ಮಾಡಿದೆ.

ಕರ್ನಾಟಕ ಮೂಲದ ಸ್ಟಾರ್ಟಪ್ ಕಂಪನಿಯಾಗಿ ಗುರುತಿಸಿಕೊಂಡಿರುವ 'ಸಿಂಪಲ್ ಎನರ್ಜಿ' ತಾನು ತಯಾರಿಸಿರುವ ಗರಿಷ್ಠ ರೇಂಜ್ ನೀಡುವ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್ ನಿಂದ ಎಲ್ಲೆಡೆ ಖ್ಯಾತಿಗಳಿಸಿದೆ. ಮಂಗಳವಾರ ಕಂಪನಿಯು ಬರೋಬ್ಬರಿ $20 ಮಿಲಿಯನ್ (ಸುಮಾರು ರೂ.165 ಕೋಟಿ) ಬಂಡವಾಳ ಸ್ವೀಕರಿಸಲಾಗಿದೆ ಎಂದು ಘೋಷಣೆ ಮಾಡಿದೆ. ಇದರೊಂದಿಗೆ ತನ್ನ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಲಿದೆ ಎಂದು ಹೇಳಲಾಗಿದ್ದು, ಅದು 'ಸಿಂಪಲ್ ಒನ್' ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯೊಂದಿಗೆ ಎಂಬುದು ಸದ್ಯದ ಮಾಹಿತಿ.

165 ಕೋಟಿ ಹೂಡಿಕೆ: ಅಗ್ಗದ ಬೆಲೆಯ Simple ONE ಸ್ಕೂಟರ್ ಶೀಘ್ರ ಸಿಗುತ್ತದೆ.. ಇದರ ರೇಂಜ್ ಬೆಚ್ಚಿಬೀಳಿಸುತ್ತೆ।

ಸಿಂಪಲ್ ಎನರ್ಜಿ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನಿರೀಕ್ಷಿತ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಡಿಸೆಂಬರ್ 2021ರಲ್ಲಿ ಬಿಡುಗಡೆ ಮಾಡಿತ್ತು. ಅಲ್ಲದೆ, ಈ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ರೇಂಜ್ ನೀಡುವ ಸಾಮರ್ಥ್ಯ ಪಡೆದುಕೊಂಡಿದೆ ಎಂದು ಹೇಳಲಾಗಿದ್ದ ಕಾರಣ, ಗ್ರಾಹಕರಿಂದ ಭರಪೂರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಈವರೆಗೆ ಒಂದು ಲಕ್ಷಕ್ಕೂ ಹೆಚ್ಚಿನ ಖರೀದಿದಾರರು ಬುಕ್ ಮಾಡಿದ್ದಾರೆ. ಆದರೆ, ಬಿಡುಗಡೆಯಾಗಿ 18 ತಿಂಗಳು ಕಳೆದರೂ ಕಂಪನಿಯು ಸ್ಕೂಟರ್ ವಿತರಣೆಯನ್ನು ಆರಂಭಿಸಿಲ್ಲ. ಇದೀಗ ರೂ.165 ಕೋಟಿ ಹೊಡಿಕೆ ಸಂಗ್ರಹಿಸಿದ್ದರಿಂದ ಶೀಘ್ರದಲ್ಲೇ ಸಿಂಪಲ್ ಒನ್ ಸ್ಕೂಟರ್ ವಿತರಣೆಯಾಗಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಂಪಲ್ ಎನರ್ಜಿ ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ರಾಜಕುಮಾರ್, 'ನೂತನ ಸಿಂಪಲ್ ಒನ್ ಸ್ಕೂಟರ್ ಖರೀದಿಗೆ ಬುಕಿಂಗ್ ಆರಂಭಿಸಿದಾಗ ನಮಗೆ ಗ್ರಾಹಕರು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ. ಕಂಪನಿಯು ಗರಿಷ್ಠ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದ್ದು, ಶೀಘ್ರದಲ್ಲೇ ಸ್ಕೂಟರ್ ವಿತರಣೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ವರ್ಷದ ಜೂನ್ 2022ರಲ್ಲಿ ಈ ಸ್ಕೂಟರ್ ಗಾಗಿ ಟೆಸ್ಟ್ ಡ್ರೈವ್ ಕೂಡ ಶುರು ಮಾಡಲಾಗಿದೆ' ಎಂದು ಹೇಳಿದ್ದಾರೆ.

ಮೊದಲೇ ಹೇಳಿದಂತೆ ಶೀಘ್ರ ವಿತರಣೆಯಾಗಿರುವ ಸಿಂಪಲ್ ಒನ್ ಸ್ಕೂಟರ್ ಗರಿಷ್ಠ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಒಂದೇ ಚಾರ್ಜಿನಲ್ಲಿ ಸುಮಾರು 240 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. 4.8 kWh ಬ್ಯಾಟರಿ ಪ್ಯಾಕ್ ಹೊಂದಿರುವ ಎಲೆಕ್ಟ್ರಿಕ್ ಮೋಟಾರ್ ನೊಂದಿಗೆ ಖರೀದಿಗೆ ಲಭ್ಯವಿದ್ದು, 4.5 kW ಪೀಕ್ ಪವರ್ ಹಾಗೂ 72 Nm ಟಾರ್ಕ್ ಉತ್ಪಾದಿಸಲಿದೆ. ಕೇವಲ 2.95 ಸೆಕೆಂಡುಗಳಲ್ಲಿ 0-40 km/h ವೇಗವನ್ನು ಪಡೆಯಲಿದ್ದು, 105 km/h ಟಾಪ್ ಸ್ವೀಡ ಹೊಂದಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು ಯುವ ಖರೀದಿದಾರರನ್ನು ಆಕರ್ಷಿಸುವ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ದೊಡ್ಡದಾದ 30 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್, 7-ಇಂಚಿನ TFT ಇನ್ಸ್ರುಮೆಂಟಲ್ ಕ್ಲಸ್ಟರ್, ಜಿಯೋ ಫೆನ್ಸಿಂಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ರೂ.1.10 ಲಕ್ಷದಿಂದ 1.45 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಅಲ್ಲದೆ, ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪೂರೈಕೆ ಮಾಡಲು ತಮಿಳುನಾಡಿನ ಶೂಲಾಗಿರಿಯಲ್ಲಿ ಸರಿ ಸುಮಾರು ರೂ.100 ಕೋಟಿ ವೆಚ್ಚದ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಇಲ್ಲಿ ಬರೋಬ್ಬರಿ 700ಕ್ಕೂ ಹೆಚ್ಚು ಮಂದಿಗೆ ಉದ್ಯೋಗವನ್ನು ನೀಡಿವ ಗುರಿಯನ್ನು ಕಂಪನಿ ಹಾಕಿಕೊಂಡಿದ್ದು, ಅದರಲ್ಲಿ ಹೆಚ್ಚಿನ ಹುದ್ದೆಗಳು ಮಹಿಳೆಯರಿಗೆ ಮೀಸಲಿರಲಿವೆ ಎಂದು ಹೇಳಿದೆ. ಇದನ್ನು ಗಮನಿಸಿದಾಗ ತನ್ನ ಉದ್ಯಮವನ್ನು ಬೆಳೆಸಲು ಕಂಪನಿ ದೊಡ್ಡ ಯೋಜನೆ ಹಾಕಿಕೊಂಡಿದೆ ಎಂಬುದು ಗೊತ್ತಾಗುತ್ತದೆ.

ಈ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಈಗಾಗಲೇ ಗರಿಷ್ಠ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದೆ. ಆದರೆ, ವಿತರಣೆವನ್ನೇ ಆರಂಭ ಮಾಡಿಲ್ಲ. ಇದೀಗ, 165 ಕೋಟಿ ಹೂಡಿಕೆ ಬಂದಿದ್ದು, ಈ ಸ್ಕೂಟರ್ ಶೀಘ್ರದಲ್ಲೇ ವಿತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಸಿಂಪಲ್ ಒನ್ ಭಾರೀ ಪೈಪೋಟಿ ನೀಡಬಹುದು. ಜೊತೆಗೆ ಕಡಿಮೆ ಬೆಲೆಯನ್ನು ಹೊಂದಿರುವುದು ಈ ಸ್ಕೂಟರ್ ಯುವ ಖರೀದಿದಾರರನ್ನು ಸೆಳೆಯುವುದು ಖಚಿತ ಎಂದು ಹೇಳಬಹುದು.

More from DriveSpark

Article Published On: Wednesday, February 8, 2023, 13:30 [IST]
English summary
Simple energy rs 165 crore in funds simple one electric scooter launch soon details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+