ಕೊನೆಗೂ ಬಿಡುಗಡೆಯಾಯ್ತು ಬೆಂಗಳೂರಿನ 'Simple ONE' ಇ-ಸ್ಕೂಟರ್: ನಿರೀಕ್ಷೆಗಿಂತ ಡಬಲ್ ವಿಶೇಷತೆಗಳಿವೆ

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಅಬ್ಬರಿಸುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ 'ಸಿಂಪಲ್ ಎನರ್ಜಿ' ಗರಿಷ್ಠ ರೇಂಜ್ ಹಿಂದಿರುಗಿಸುವ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ.

ಸದ್ಯ, ನಿಮ್ಮೆಲ್ಲರಿಗೂ ಈ ಸ್ಕೂಟರ್ ರೇಂಜ್ ಹಾಗೂ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಸಿಂಪಲ್ ಒನ್ ರೂ.1.45 ಲಕ್ಷದಿಂದ ರೂ.1.5 ಲಕ್ಷ ಬೆಲೆಯನ್ನು (ಎಕ್ಸ್ ಶೋರೂಂ ಬೆಂಗಳೂರು) ಹೊಂದಿದೆ. 750 ವ್ಯಾಟ್ ಪೋರ್ಟಬಲ್ ಚಾರ್ಜರ್ ಗೆ ರೂ.13,000 ಹೆಚ್ಚುವರಿಯಾಗಿ ವೆಚ್ಚವಾಗುತ್ತದೆ. ಕಂಪನಿಯು 2021ರಲ್ಲಿಯೇ ಈ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣ ಮಾಡಿತ್ತು. ಆದರೆ, ವಿವಿಧ ಕಾರಣಗಳಿಗೆ ಬಿಡುಗಡೆ ಮುಂದೂಡುತ್ತಲೇ ಬಂದಿತ್ತು.

ಕೊನೆಗೂ ಬಿಡುಗಡೆಯಾಯ್ತು ಬೆಂಗಳೂರಿನ Simple ONE ಇ-ಸ್ಕೂಟರ್: ನಿರೀಕ್ಷೆಗಿಂತ ಡಬಲ್ ವಿಶೇಷತೆಗಳಿವೆ

ಬಹುನೀರಿಕ್ಷಿತ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ವಿತರಣೆಗಳು ಜೂನ್ 6ರಿಂದ ಬೆಂಗಳೂರಿನಲ್ಲಿ ಮೊದಲಿಗೆ ಆರಂಭವಾಗಲಿದೆ. ಆ ಬಳಿಕ ಹಂತ ಹಂತವಾಗಿ ದೇಶದ ಇತರೆ ಪ್ರಮುಖ ನಗರಗಳಲ್ಲಿ ಡೆಲಿವರಿ ಮಾಡಲಾಗುತ್ತದೆ. ಈ ಹಿಂದೆ, ನೂತನ ಸ್ಕೂಟರ್ 4.8 kWh ಬ್ಯಾಟರಿ ಪ್ಯಾಕ್ ಹೊಂದಿರಲಿದೆ ಎಂದು ಕಂಪನಿ ಘೋಷಿಸಿತ್ತು. ಆದರೀಗ, ಪವರ್ ಪುಲ್ 5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ನೊಂದಿಗೆ ಸಿಂಪಲ್ ಒನ್ ಸ್ಕೂಟರ್ ಲಾಂಚ್ ಆಗಿದೆ.

ಈ ಹೊಚ್ಚ ಹೊಸ ಸ್ಕೂಟರ್ ಪಡೆದಿರುವ ಬ್ಯಾಟರಿ ಪ್ಯಾಕ್ ಸಂಪೂರ್ಣ ಸುರಕ್ಷಿತವಾಗಿದ್ದು, ಇದು ಏಳು ಪದರಗಳ ರಕ್ಷಣಾ ಕವಚವನ್ನು ಪಡೆದಿದೆ ಎಂದು ಕಂಪನಿ ಹೇಳಿದೆ. ಎಲ್ಲರು ತುಂಬಾ ನಿರೀಕ್ಷೆ ಇಟ್ಟುಕೊಂಡಿರುವ ರೇಂಜ್ ಬಗ್ಗೆ ಮಾತನಾಡುವುದಾದರೆ, ಈ ಸ್ಕೂಟರ್ ಸಂಪೂರ್ಣ ಚಾರ್ಜಿನಲ್ಲಿ 212 km (IDC) ರೇಂಜ್ ನೀಡಲಿದೆ. ಮೊದಲಿಗೆ ಕಂಪನಿಯು ಫುಲ್ ಚಾರ್ಜ್‌ನಲ್ಲಿ 236 km ರೇಂಜ್ ಕೊಡುತ್ತದೆ ಎಂದು ತಿಳಿಸಿತ್ತು.

ಕೊನೆಗೂ ಬಿಡುಗಡೆಯಾಯ್ತು ಬೆಂಗಳೂರಿನ Simple ONE ಇ-ಸ್ಕೂಟರ್: ನಿರೀಕ್ಷೆಗಿಂತ ಡಬಲ್ ವಿಶೇಷತೆಗಳಿವೆ

ಚಾರ್ಜಿಂಗ್ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಮನೆಯ ವಿದ್ಯುತ್ ಉಪಯೋಗದಲ್ಲಿ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಬ್ಯಾಟರಿ ಶೇಕಡ 0-80% ಚಾರ್ಜ್ ಆಗಲು 5 ಗಂಟೆ 54 ನಿಮಿಷ ಬೇಕಾಗುತ್ತದೆ. ರೂ.13,000 ಹೆಚ್ಚುವರಿ ಹಣವನ್ನು ಖರ್ಚು ಮಾಡಿದರೆ, ಪೋರ್ಟಬಲ್ 750 ವ್ಯಾಟ್ ಫಾಸ್ಟ್ ಚಾರ್ಜರ್ ಅನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಕಂಪನಿ ಗೃಹ ಬಳಕೆಗೆ ನೀಡಲಿದೆ.

ಜೊತೆಗೆ ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್‌ನ್ನು ಆಗಸ್ಟ್‌ ತಿಂಗಳಿಂದ ದೇಶದ ಪ್ರಮುಖ ನಗರಗಳಲ್ಲಿ 'ಸಿಂಪಲ್ ಎನರ್ಜಿ' ಶುರು ಮಾಡಲಿದ್ದು, ಅಲ್ಲಿ ನಿಮಿಷಕ್ಕೆ 1.5 km ರೇಂಜ್ ನೀಡುವಷ್ಟು ಬ್ಯಾಟರಿ ಪ್ಯಾಕ್ ಚಾರ್ಜ್ ಆಗಲಿದೆ. ಈ ಸ್ಕೂಟರ್ ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 11.39 bhp (8.5kW) ಗರಿಷ್ಠ ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ವಿವಿಧ ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದ್ದು, ಅವುಗಳೆಂದರೆ, ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್. ಈ ಸ್ಕೂಟರ್, ಕೇವಲ 2.77 ಸೆಕೆಂಡ್‌ಗಳಲ್ಲಿ ಗಂಟೆಗೆ 0-40 ಕಿಮೀ ವೇಗವನ್ನು ಪಡೆಯಲಿದ್ದು, 105 km ಟಾಪ್ ಸ್ವೀಡ್ ಹೊಂದಿದೆ. ಆರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಪ್ರಮುಖವಾಗಿ ಬ್ರೆಜೆನ್ ಬ್ಲ್ಯಾಕ್, ಅಜುರೆ ಬ್ಲೂ ಹಾಗೂ ಗ್ರೇಸ್ ವೈಟ್ ಸೇರಿವೆ.

ಈ ಸ್ಕೂಟರ್ ಪಡೆದಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, OTA ಅಪ್‌ಡೇಟ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ ಫ್ರಂಟ್, ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಸಿಂಪಲ್ ಒನ್ ಸ್ಕೂಟರ್ ಗೆ ಭಾರತದ ಮಾರುಕಟ್ಟೆಯಲ್ಲಿ ಓಲಾ, ಎಥರ್, ಟಿವಿಎಸ್ ಹಾಗೂ ಹೀರೋ ಕಂಪನಿ ಸ್ಕೂಟರ್ ಗಳು ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Tuesday, May 23, 2023, 16:18 [IST]
English summary
Simple one electric scooter launched india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+