ಹೊಸ ಹೋಂಡಾ ಆಕ್ಟೀವಾ 125 H-Smart ವಿವರಗಳು ಸೋರಿಕೆ... ಇನ್ಮುಂದೆ ಆಕ್ಟೀವಾ ಅಲ್ಲ ಸ್ಮಾರ್ಟೀವಾ
ಭಾರತದಲ್ಲಿ ಬಿಡುಗಡೆಯಾದಾಗಿನಿಂದಲೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೇ ಇಂದಿಗೂ ಸ್ಕೂಟರ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ ಮುನ್ನುತ್ತಿರುವ ಹೋಂಡಾ ಆಕ್ಟೀವಾ, ಇದೀಗ ಸತತ ಆರನೇ ತಲೆಮಾರಿನ ಸ್ಕೂಟರ್ ಅನ್ನು ಪರಿಚಯಿಸಲಿದೆ. ಆದರೆ ಇದರ ಪರಿಚಯಕ್ಕೂ ಮುನ್ನವೇ ಹೊಸ ಸ್ಕೂಟರ್‌ನ ಸ್ಮಾರ್ಟ್ ಫೀಚರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ.
ಆರಂಭದಲ್ಲಿ 100 cc ಎಂಜಿನ್‌ನೊಂದಿಗೆ ಓಡುತ್ತಿದ್ದ ಆಕ್ಟಿವಾ ನಂತರ 110 cc ಆನಂತರ 125 cc ಮಾದರಿಗಳ ಸಾಮರ್ಥ್ಯವನ್ನು ಅರಿತುಕೊಂಡು ಗ್ರಾಹಕರಿಗೆ ಉತ್ತಮ ಚಾಲನಾ ಅನುಭವ ನೀಡುತ್ತಿದೆ. ನಿಮ್ಮ ಮನೆಗೆ ಗೇರ್‌ಲೆಸ್ ಸ್ಕೂಟರ್ ಖರೀದಿಸಲು ನೀವು ಮುಂದಾದರೇ, ಮನಸ್ಸಿಗೆ ಬರುವ ಮೊದಲ ಹೆಸರು ಆಕ್ಟೀವಾ. ಹೋಂಡಾ ಡಿಯೊದಂತಹ ಮಾದರಿಗಳು ಇದನ್ನು ಬೆಂಬಲಿಸಿದರೂ ಸಹ, ಹೋಂಡಾ ಈ ಒಂದೇ ಮಾದರಿಯೊಂದಿಗೆ ಭಾರತದಲ್ಲಿ ಸ್ಕೂಟರ್ ವಿಭಾಗವನ್ನು ಆಳುತ್ತಿದೆ.

ಆಕ್ಟೀವಾದಲ್ಲಿ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಮಾಡುವ ಮೂಲಕ ಹೋಂಡಾ ಮಾರಾಟದಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. ಉದಾಹರಣೆಗೆ, ಕೆಲವು ತಿಂಗಳ ಹಿಂದೆ ಕಂಪನಿಯು ಆಕ್ಟಿವಾದ H-Smart ಆವೃತ್ತಿಯನ್ನು ಪರಿಚಯಿಸಿತು. ಇದು ಸ್ಮಾರ್ಟ್ ಕೀ ಸಿಸ್ಟಮ್ ಹೊಂದಿದ್ದು, ಸವಾರ ಭೌತಿಕ ಕೀಯನ್ನು ಬಳಸದೆಯೇ ಸ್ಕೂಟರ್ ಅನ್ನು ಲಾಕ್ ಮತ್ತು ಅನ್ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಹೊಸ ವೈಶಿಷ್ಟ್ಯಕ್ಕೆ ಜನರಿಂದ ಉತ್ತಮ ಮನ್ನಣೆ ಸಿಕ್ಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೋಂಡಾ ಈ ತಂತ್ರಜ್ಞಾನವನ್ನು 125cc ರೂಪಾಂತರಕ್ಕೂ ಪರಿಚಯಿಸಲಿದೆ.
ಭೌತಿಕ ಕೀಯನ್ನು ಬಳಸದೆಯೇ ವಾಹನವನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಸ್ಮಾರ್ಟ್ ಕೀ ಸಹಾಯ ಮಾಡುತ್ತದೆ. ಸಕ್ರಿಯಗೊಳಿಸಿದ ನಂತರ 20 ಸೆಕೆಂಡುಗಳವರೆಗೆ ಯಾವುದೇ ಚಟುವಟಿಕೆಯನ್ನು ಸಿಸ್ಟಮ್ ಪತ್ತೆ ಮಾಡದಿದ್ದರೆ, ಸ್ಕೂಟರ್ ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ. ಸ್ಮಾರ್ಟ್ ಕೀಯು ಸ್ಕೂಟರ್‌ನ 2 ಮೀಟರ್ ವ್ಯಾಪ್ತಿಯಲ್ಲಿದ್ದರೆ, ಸವಾರನು ಲಾಕ್ ಮೋಡ್‌ನಲ್ಲಿರುವ ನಾಬ್ ಅನ್ನು ಇಗ್ನಿಷನ್ ಸ್ಥಾನಕ್ಕೆ ತಿರುಗಿಸುವ ಮೂಲಕ ಮತ್ತು ಕೀಯನ್ನು ತೆಗೆಯದೆ ಸ್ಟಾರ್ಟ್ ಬಟನ್ ಅನ್ನು ಒತ್ತುವ ಮೂಲಕ ಸರಾಗವಾಗಿ ಪ್ರಾರಂಭಿಸಬಹುದು.
ಹೋಂಡಾ ಆಕ್ಟಿವಾ ಡಿಜಿಟಲ್ ಕ್ಲಸ್ಟರ್ ಮತ್ತು ಬ್ಲೂಟೂತ್ ಸಂಪರ್ಕದಂತಹ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲಿದೆ ಎಂಬ ಸುದ್ದಿಯ ಹೊರತಾಗಿಯೂ, ಆಕ್ಟೀವಾ 125 ಮಾದರಿಯನ್ನು ಇನ್ನೂ ಹೊಸ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲು ಸಜ್ಜುಗೊಳಿಸಲಾಗಿದೆ. ವಿತರಕರ ಮೂಲಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡುವ ಪೋಸ್ಟರ್ ಚಿತ್ರಗಳನ್ನು ಬಿಡುಗಡೆ ಮಾಡಿವೆ. Activa 125 H-Smart ಆವೃತ್ತಿಯ ಹೊಸ ಚಿತ್ರಗಳು ವೈರಲ್ ಆಗಿದ್ದು, ಇದನ್ನು Smartiva ಎಂದು ಕರೆಯಲಾಗುತ್ತದೆ.
ಸ್ಮಾರ್ಟ್ ಫೈಂಡ್, ಸ್ಮಾರ್ಟ್ ಅನ್‌ಲಾಕ್, ಸ್ಮಾರ್ಟ್ ಸ್ಟಾರ್ಟ್ ಮತ್ತು ಸ್ಮಾರ್ಟ್ ಸೇಫ್‌ನಂತಹ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುವ ಹೊಸ ಸ್ಮಾರ್ಟ್ ಕೀಯ ಲಭ್ಯತೆಯು ಇದರಲ್ಲಿ ಮುಖ್ಯ ಸೇರ್ಪಡೆಯಾಗಿದೆ. ಸ್ಮಾರ್ಟ್ ಕೀಯಲ್ಲಿರುವ ಆನ್ಸರ್ ಬ್ಯಾಕ್ ವ್ಯವಸ್ಥೆಯು ವಾಹನವನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿಯಾಗಿದೆ. ಆನ್ಸರ್ ಬ್ಯಾಕ್ ಬಟನ್ ಒತ್ತಿದಾಗ ಎಲ್ಲಾ ನಾಲ್ಕು ಟರ್ನ್ ಇಂಡಿಕೇಟರ್‌ಗಳು ಫ್ಲ್ಯಾಷ್ ಆಗುತ್ತವೆ. ದೊಡ್ಡ ಪಾರ್ಕಿಂಗ್ ಪ್ರದೇಶದಲ್ಲಿ ಸ್ಕೂಟರ್ ಅನ್ನು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ.
ಫಿಸಿಕಲ್ ಕೀ ಬಳಸದೆ ವಾಹನವನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಸ್ಮಾರ್ಟ್ ಕೀ ಸಹಾಯ ಮಾಡುತ್ತದೆ ಎಂಬುದು ಕೂಡ ವಿಶೇಷವಾಗಿದೆ. ಸಕ್ರಿಯಗೊಳಿಸಿದ 20 ಸೆಕೆಂಡುಗಳಲ್ಲಿ ಸಿಸ್ಟಮ್ ಯಾವುದೇ ಚಟುವಟಿಕೆಯನ್ನು ಪತ್ತೆ ಮಾಡದಿದ್ದರೆ ಸ್ವಯಂಚಾಲಿತವಾಗಿ ಆಫ್ ಆಗಲು ಹೋಂಡಾ, ಹೊಸ ಸ್ಕೂಟರ್ ಅನ್ನು ಸಂಯೋಜಿಸಿದೆ. ಸ್ಮಾರ್ಟ್ ಕೀ ಸ್ಕೂಟರ್‌ನ 2 ಮೀಟರ್‌ಗಳ ಒಳಗೆ ಇದ್ದರೆ, ಸವಾರನು ಲಾಕ್ ಮೋಡ್‌ನಲ್ಲಿರುವ ನಾಬ್ ಅನ್ನು ಇಗ್ನಿಷನ್ ಸ್ಥಾನಕ್ಕೆ ತಿರುಗಿಸಬಹುದು ಮತ್ತು ಕೀ ಹಾಕದೇ ಸ್ಟಾರ್ಟ್ ಬಟನ್ ಒತ್ತಿ ಮುಂದೆ ಸಾಗಬಹುದು.
ಮ್ಯಾಪ್ ಮಾಡಲಾದ ಸ್ಮಾರ್ಟ್ ಇಸಿಯು ಮತ್ತು ಸ್ಮಾರ್ಟ್ ಕೀ ನಡುವೆ ಎಲೆಕ್ಟ್ರಾನಿಕ್ ಹೊಂದಾಣಿಕೆ (ID) ಮೂಲಕ ಸುರಕ್ಷತಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ವಾಹನ ಕಳ್ಳತನವಾಗುತ್ತದೆ ಎಂಬ ಭಯ ಸವಾರರಿಗೆ ಇರುವುದಿಲ್ಲ. ಸ್ಮಾರ್ಟ್ ಕೀಯು ಇಮೊಬಿಲೈಸರ್ ವ್ಯವಸ್ಥೆಯನ್ನು ಹೊಂದಿದ್ದು ಅದು ನೋಂದಾಯಿಸದ ಕೀಯೊಂದಿಗೆ ಎಂಜಿನ್ ಅನ್ನು ಪ್ರಾರಂಭವನ್ನು ತಡೆಯುತ್ತದೆ. ಸ್ಮಾರ್ಟ್ ಕೀಗೆ ಸುರಕ್ಷಿತ ಸಂಪರ್ಕವಿಲ್ಲದೆ ಇಮೊಬಿಲೈಸರ್ ಸಿಸ್ಟಮ್ ಸಕ್ರಿಯಗೊಳ್ಳುವುದಿಲ್ಲ ಎಂದು ಕಂಪನಿ ಹೇಳುತ್ತಿದೆ.


Click it and Unblock the Notifications