Tata Stryder: ಸ್ಟ್ರೈಡರ್ ಕಾಂಟಿನೋ ನಾಯ್ಸಿ ಬಾಯ್ ಬೈಸೈಕಲ್ ಬಿಡುಗಡೆ ಮಾಡಿದ ಟಾಟಾ

ಟಾಟಾ ಮೋಟಾರ್ಸ್ (tata motors) ಕೇವಲ ಕಾರುಗಳು ಮಾತ್ರವಲ್ಲ ಬೈಸೈಕಲ್‌ಗಳನ್ನು ಕೂಡ ನಿರ್ಮಾಣ ಮಾಡುತ್ತಿದೆಯೇ? ಎಂದು ನಿಮಗೆ ಅನಿಸಬಹುದು, ಆದ್ರೆ ಟಾಟಾ ಕೆಳಗಿರುವ ಅಂಗ ಸಂಸ್ಥೆಯೊಂದು ಬೈಸೈಕಲ್‌ಗಳನ್ನು ನಿರ್ಮಿಸುತ್ತಿದೆ. ಅದೇ ಟಾಟಾ ಇಂಟರ್‌ನ್ಯಾಶನಲ್‌ನ ಅಂಗಸಂಸ್ಥೆಯಾದ ಸ್ಟ್ರೈಡರ್ ಸೈಕಲ್ಸ್. ಈ ಕಂಪನಿಯು ಅಡ್ವೆಂಚರ್ ಸೈಕ್ಲಿಂಗ್‌ನಲ್ಲಿ ಕ್ರಾಂತಿಯನ್ನುಂಟುಮಾಡುತ್ತಿದೆ.

ಹೌದು ಸ್ಟ್ರೈಡರ್ ಸೈಕಲ್ಸ್ ಅತ್ಯುತ್ತಮ ಬೈಸೈಕಲ್‌ಗಳ ನಿರ್ಮಾಣ ಮಾಡುತ್ತದೆ. ಇದೀಗ ಕಾಂಟಿನೊ ನಾಯ್ಸಿ ಬಾಯ್ (Contino Noisy Boy) ಅಡ್ವೆಂಚರ್ ಬೈಸಿಕಲ್ ಅನ್ನು ರೂ.12,995 ಕ್ಕೆ ಬಿಡುಗಡೆ ಮಾಡಿದೆ. ಕಾರ್ಯಕ್ಷಮತೆ, ಶೈಲಿ ಮತ್ತು ಕಾರ್ಯಚಟುವಟಿಕೆಗಳ ಮೇಲೆ ಕೇಂದ್ರೀಕರಿಸಿದ ಸ್ಟ್ರೈಡರ್, ಆರಂಭಿಕರಿಂದ ವೃತ್ತಿಪರ ಕ್ರೀಡಾಪಟುಗಳವರೆಗೆ ಎಲ್ಲಾ ಹಂತಗಳಲ್ಲಿ ಸವಾರರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

tata-stryder-contino-noisy-boy-bicycle-launched

ಹೊಸ ಬೈಸೈಕಲ್ ಸವಾರರಿಗೆ ಸಾಟಿಯಿಲ್ಲದ ನಿಯಂತ್ರಣ ಮತ್ತು ಚುರುಕುತನವನ್ನು ನೀಡುವ ಸುಧಾರಿತ ಘಟಕಗಳನ್ನು ಹೊಂದಿದೆ. ಇದನ್ನು BMX ರೈಡಿಂಗ್‌ಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದ್ದು, Contino Noisy Boy BMX ಹ್ಯಾಂಡಲ್‌ಬಾರ್‌ಗಳು ಮತ್ತು 360 ಡಿಗ್ರಿ ಫ್ರೀ ಸ್ಟೈಲ್ ರೋಟರ್ ಅನ್ನು ಹೊಂದಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ U ಬ್ರೇಕ್‌ಗಳು ತೀವ್ರವಾದ ನಿಯಂತ್ರಣವನ್ನು ಒದಗಿಸುತ್ತವೆ. ಸುರಕ್ಷಿತ ಮತ್ತು ಆಹ್ಲಾದಕರವಾದ ಸವಾರಿಯನ್ನು ಖಾತ್ರಿಪಡಿಸುತ್ತವೆ ಎಂದು ಕಂಪನಿ ಭರವಸೆ ನೀಡಿದೆ.

ಇಂಟಿಗ್ರೇಟೆಡ್ ಸ್ಟಂಟ್ ಪೆಗ್‌ಗಳೊಂದಿಗೆ, ನಾಯ್ಸ್ ಬಾಯ್ BMX ಅಡ್ವೆಂಚರ್ ಮತ್ತು ಗುರುತ್ವಾಕರ್ಷಣೆ ಧಿಕ್ಕರಿಸುವ (gravity-defying adventures) ಸಾಹಸಗಳ ಜಗತ್ತಿಗೆ ಅದ್ಬುತ ಕೊಡುಗೆಯಾಗಿದೆ. ಇದು ನಯವಾದ ಮತ್ತು ಗಮನ ಸೆಳೆಯುವ ವಿನ್ಯಾಸವನ್ನು ಹೊಂದಿದ್ದು, ಅದು ಡಿಸೈನ್ ಮತ್ತು ವಸ್ತುವಿನ ಸಮ್ಮಿಳನವನ್ನು ಒದಗಿಸುವ ಮೂಲಕ ಇತರ ಬೈಸೈಕಲ್‌ಗಳಿಂದ ಪ್ರತ್ಯೇಕಿಸುತ್ತದೆ ಎಂದು ತಿಳಿಸಿದೆ.

tata-stryder-contino-noisy-boy-bicycle-launched

ಹೊಸ ಸೈಕಲ್ ಬಿಡುಗಡೆ ಕುರಿತು ಮಾತನಾಡಿದ ಸ್ಟ್ರೈಡರ್ ಸೈಕಲ್‌ನ ಬಿಸಿನೆಸ್ ಹೆಡ್ ರಾಹುಲ್ ಗುಪ್ತಾ, "ಭಾರತದಲ್ಲಿ BMX ರೈಡಿಂಗ್ ವೇಗವನ್ನು ಪಡೆಯುತ್ತಿರುವುದರಿಂದ ನಮ್ಮ ಸೈಕಲ್ ಬಿಡುಗಡೆಗೆ ಇದು ರೋಮಾಂಚಕಾರಿ ಸಮಯವಾಗಿದೆ. ಬೈಸೈಕಲ್‌ಗಳನ್ನು ನಿಖರ ಮತ್ತು ಗಮನದಿಂದ ಅತ್ಯಾಧುನಿಕ ಸಾಮಗ್ರಿಗಳು ಮತ್ತು ಉತ್ಪಾದನಾ ತಂತ್ರಗಳನ್ನು ಬಳಸಿಕೊಂಡು ರಚಿಸಲಾಗಿದೆ. ಪ್ರತಿ ಬೈಸೈಕಲ್ ಸಾಟಿಯಿಲ್ಲದ ಕಾರ್ಯಕ್ಷಮತೆ ಮತ್ತು ಬಾಳಿಕೆ ನೀಡುತ್ತದೆ ಎಂದು ಹೇಳಿದರು.

Contino Noisy Boy BMX ಬೈಸೈಕಲ್‌ಗಳ ಬಿಡುಗಡೆಯ ಜೊತೆಗೆ ಗ್ರಾಹಕರಿಗೆ ಭರ್ಜರಿ ಆಫರ್ ಕೂಡ ನೀಡಲಾಗಿದೆ. ಸ್ಟ್ರೈಡರ್ ಸೈಕಲ್ಸ್ ಸೀಮಿತ ಅವಧಿಯ ರಿಯಾಯಿತಿಯನ್ನು ರೂ. 4,335 ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು Amazon ಶಾಪಿಂಗ್ ಅಪ್ಲಿಕೇಶನ್‌ನಲ್ಲಿ ಪ್ರತಿ ಖರೀದಿಯೊಂದಿಗೆ ಕಾಂಪ್ಲಿಮೆಂಟರಿ ಉಡುಗೊರೆಯಾಗಿ ರೂ. 3,500 ಪಡೆಯಬಹುದು.

tata-stryder-contino-noisy-boy-bicycle-launched

ಭಾರತದ ಮೊದಲ ಮೆಗ್ನೀಶಿಯಂ ಬೈಸಿಕಲ್: ಸೆಪ್ಟೆಂಬರ್‌ನಲ್ಲಿ Tata Stryder ಮೆಗ್ನಿಷಿಯಂ ನಿರ್ಮಿತ ಬೈಸೈಕಲ್ ಅನ್ನು ಬಿಡುಗಡೆ ಮಾಡಿತ್ತು. ಎಲ್ಲ ಬೈಸಿಕಲ್‌ಗಳಲ್ಲಿ ಬಳಕೆ ಮಾಡುವ ಅಲ್ಯೂಮಿನಿಯಂ ಫ್ರೇಮ್ (aluminum frames)ಗೆ ಹೋಲಿಸಿದರೆ, ಮೆಗ್ನೀಶಿಯಂ ಫ್ರೇಮ್ (Magnesium frames) ಹಗುರವಾಗಿರುತ್ತವೆ. ಜೊತೆಗೆ ಹೆಚ್ಚು ಶಕ್ತಿಯುತವಾಗಿರುತ್ತದೆ. ಆ ಕಾರಣಕ್ಕೆ ಎಂತಹ ಬೆಟ್ಟ ಗುಡ್ಡದ ರಸ್ತೆಯಲ್ಲಿಯೂ ಈ ಬೈಸಿಕಲ್‌ನ್ನು ಸುಲಭವಾಗಿ ಓಡಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Friday, November 10, 2023, 13:39 [IST]
English summary
Tata stryder contino noisy boy bicycle launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+