ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್: ನೋಂದಣಿ ಪ್ರಾರಂಭ

ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ಹಲವು ಜನಪ್ರಿಯ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಜನಪ್ರಿಯ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್ ತಮ್ಮ ಕಾಂಟಿನೆಂಟಲ್ ಜಿಟಿ ಕಪ್‌ನ ಮೂರನೇ ಸೀಸನ್ ಅನ್ನು ಆಯೋಜಿಸಲು ಸಜ್ಜಾಗಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್‌ನ (Royal Enfield Continental GT Cup) ಮೂರನೇ ಸೀಸನ್ಗಾಗಿ ನೋಂದಣಿ ಪ್ರಾರಂಭವಾಗಿದೆ ಮತ್ತು ಭಾರತದಾದ್ಯಂತದ ಮಹತ್ವಾಕಾಂಕ್ಷಿ ಬೈಕರ್‌ಗಳಿಗೆ ತಮ್ಮ ಪ್ರತಿಭೆಯನ್ನು ಟ್ರ್ಯಾಕ್‌ನಲ್ಲಿ ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ. ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್‌ಗಾಗಿ ನೋಂದಣಿಗಳು ಪ್ರಾರಂಭವಾಗಿವೆ ಮತ್ತು ಭಾಗವಹಿಸುವವರು ವೃತ್ತಿಪರ ಅಥವಾ ಹವ್ಯಾಸಿ ವಿಭಾಗದ ಅಡಿಯಲ್ಲಿ ಸೈನ್ ಅಪ್ ಮಾಡಬಹುದು.

Royal Enfield Continental GT Cup

ಒಟ್ಟಾರೆಯಾಗಿ, 100 ರೇಸರ್‌ಗಳು, 25 ವೃತ್ತಿಪರರು ಮತ್ತು 75 ಹವ್ಯಾಸಿ ರೈಡರ್ ಗಳನ್ನು ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗುತ್ತಾರೆ. ಆಗಸ್ಟ್ 1 ರಂದು ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ ಆಯ್ಕೆಗಳು ನಡೆಯಲಿವೆ. ಆಯ್ಕೆಗಳು ಮುಗಿದ ನಂತರ, ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್‌ಗೆ ಟಾಪ್ 25 ರೈಡರ್‌ಗಳು ಮಾತ್ರ ಆಯ್ಕೆಯಾಗುತ್ತಾರೆ. ಇದರಲ್ಲಿ10 ವೃತ್ತಿಪರರು ಮತ್ತು 15 ಹವ್ಯಾಸಿ ರೈಡರ್‌ಗಳಾಗಿರುತ್ತಾರೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ಈ ವರ್ಷದ ಆಗಸ್ಟ್‌ನಲ್ಲಿ ಆರಂಭವಾಗಲಿದ್ದು, ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ. ಮೂರು ಸುತ್ತುಗಳು ಮತ್ತು 8 ರೇಸ್‌ಗಳು ನಡೆಯುತ್ತವೆ. ರೌಂಡ್ 1 ಆಗಸ್ಟ್ 25-27 ರವರೆಗೆ ನಡೆಯುತ್ತದೆ. ಇನ್ನು ರೌಂಡ್ 2 ಅಕ್ಟೋಬರ್ 6-8 ರವರೆಗೆ ನಡೆದರೆ, ರೌಂಡ್ 3 ಅನ್ನು ಸೆಪ್ಟೆಂಬರ್ 17-19 ರವರೆಗೆ ಆಯೋಜಿಸಲಾಗುತ್ತದೆ.

Royal Enfield Continental GT Cup

ಇನ್ನು ರಾಯಲ್ ಎನ್‌ಫೀಲ್ಡ್ ಈವೆಂಟ್ ಅನ್ನು ಪ್ರೋ-ಆಮ್ ಸ್ವರೂಪದಲ್ಲಿ ಆಯೋಜಿಸುವುದನ್ನು ಮುಂದುವರಿಸುತ್ತದೆ, ಅಲ್ಲಿ ಹವ್ಯಾಸಿಗಳು ಮತ್ತು ವೃತ್ತಿಪರರು ಒಂದೇ ಟ್ರ್ಯಾಕ್‌ನಲ್ಲಿ ಒಟ್ಟಿಗೆ ರೈಡ್ ಮಾಡುತ್ತಾರೆ. ಈ ಸೀಸನ್ ಅನ್ನು JK ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್ 2023ರ ಭಾಗವಾಗಿ ಆಯೋಜನೆ ಮತ್ತು FMSCI ಪ್ರಮಾಣೀಕರಿಸಲ್ಪಟ್ಟಿದೆ (ಫೆಡರೇಶನ್ ಎಫ್ ಮೋಟಾರ್‌ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ).

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್‌ನಲ್ಲಿ, ಎಲ್ಲಾ ರೈಡರ್‌ಗಳು ಒಂದೇ ರೀತಿಯ ಬೈಕ್ ಗಳನ್ನು ರೈಡ್ ಮಾಡುತ್ತಾರೆ. ಇನ್ನೂ ಪ್ರತಿಯೊಂದಕ್ಕೂ ಒಂದೇ ರೀತಿಯ ಸೆಟಪ್ ಇರುತ್ತದೆ. ಅವರು ರೇಸ್-ಪ್ರಿಪ್ಡ್ ಕಾಂಟಿನೆಂಟಲ್ GT-R650 ಗಳನ್ನು ಓಡಿಸಲಿದ್ದಾರೆ ಮತ್ತು ಈ ವರ್ಷ ಮೋಟಾರ್ ಸೈಕಲ್ ರೇಸ್ ಟ್ಯೂನ್ ಮಾಡಿದ ECU ನೊಂದಿಗೆ ಬರಲಿದೆ.

Royal Enfield Continental GT Cup

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ಅನ್ನು ಟ್ರ್ಯಾಕ್‌ನಲ್ಲಿ ನಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ವೃತ್ತಿಪರ ರೇಸಿಂಗ್ ನಮಗೆ ಹೆಚ್ಚು ಲಭ್ಯವಾಗುವಂತೆ ಮಾಡಲು ಅವಕಾಶವನ್ನು ಒದಗಿಸಲಾಗಿದೆ. 2021ರಲ್ಲಿ ರಾಯಲ್ ಎನ್‌ಫೀಲ್ಡ್ಈ ಕಾಂಟಿನೆಂಟಲ್ ಜಿಟಿ ಕಪ್‌ ಅನ್ನು ಪ್ರಾರಂಭಿಸಿದ್ದರು. ಅಂದಿನಿಂದ 1,000 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಸ್ವೀಕರಿಸಿದೆ.

ರಾಯಲ್ ಎನ್‌ಫೀಲ್ಡ್‌ನ ಶ್ರೀಮಂತ ಮೋಟಾರ್‌ಸೈಕ್ಲಿಂಗ್ ಇತಿಹಾಸ ಮತ್ತು ಅವರ ಮೋಟಾರ್‌ಸ್ಪೋರ್ಟಿಂಗ್ ಕಾರ್ಯಕ್ರಮವನ್ನು ಹೈಲೈಟ್ ಮಾಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈಗ ಒಂದು ಶತಮಾನಕ್ಕೂ ಹೆಚ್ಚು ಕಾಲ ಮೋಟರ್‌ಸೈಕ್ಲಿಂಗ್ ಸಂಸ್ಕೃತಿಯನ್ನು ಬೆಳೆಸಲು ಬೆಂಬಲಿಸುತ್ತಿದೆ ಮತ್ತು ಸಹಾಯ ಮಾಡುತ್ತಿದೆ ಎಂಬುವುದು ಪ್ರಶಂಸನೀಯ.

More from DriveSpark

Article Published On: Wednesday, July 12, 2023, 8:30 [IST]
English summary
Third season royal enfield continental gt cup registrations open details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+