ಟ್ರಯಂಫ್‌ನ ಹೊಸ ಬೈಕ್‌ಗಳ ಟಾಪ್ 5 ವಿಷಯಗಳು ನಿಮಗೆ ಗೊತ್ತಾ?: ತಿಳಿದಿರಲೇಬೇಕಾದ ಸಂಗತಿಗಳು
ಬ್ರಿಟೀಷ್ ಮೋಟೋರ್ ಸೈಕಲ್ ನಿರ್ಮಾಣ ಕಂಪನಿಯಾದ ಟ್ರಯಂಫ್ ಭಾರತದಲ್ಲಿ ಬಜಾಜ್ ನ ಸಹಯೋಗದೊಂದಿಗೆ ಎರಡು ಬೈಕ್‌ಗಳನ್ನು ಅನಾವರಣಗೊಳಿಸಿದ್ದು, ಮುಂದಿನ ತಿಂಗಳಲ್ಲಿ ಆ ಬೈಕ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಲಿದೆ. Speed 400 ಮತ್ತು Scrambler 400X ಎಂಬ ಬೈಕ್‌ಗಳನ್ನು ಅನಾವಾರಣಗೊಳಿಸಿದ್ದು, ಇದರ ಟಾಪ್ ೫ ವಿಷಯಗಳನ್ನು ಇಂದು ನೋಡೋಣ.
ಡಿಸೈನ್: ಸ್ಪೀಡ್ 400 ಮತ್ತು ಸ್ಕ್ರಾಂಬ್ಲರ್ 400 X ರ ಡಿಸೈನ್ ಅನ್ನು ಗಮನಿಸುವುದಾದರೆ ಎರಡೂ ಬೈಕ್ ಸಹ ರೆಟ್ರೋ ಡಿಸೈನ್ ಟಚ್ ಹೊಂದಿದೆ. ಇದರಲ್ಲಿ ಮುಖ್ಯವಾಗಿ ಟ್ರೈಂಫ್‌ನ ಎವರ್‌ಗ್ರೀನ್ ರೋಡ್‌ಸ್ಟರ್ ಮತ್ತು ಸ್ಕ್ರಾಂಬ್ಲರ್ ಸಿಲೂಯೆಟ್‌ಗಳು, ಇದರ ಸಿಗ್ನೇಚರ್ ಟ್ಯಾಂಕ್‌ಗಳು, ಟ್ರೈಂಫ್‌ನ ಕ್ಲಾಸಿಕ್ ಎಂಜಿನ್ ಪ್ರೊಫೈಲ್ ಮತ್ತು ಟ್ರೈಂಫ್ ಬ್ಯಾಡ್ಜ್ ಮುಖ್ಯವಾದವು.

ಎಂಜಿನ್: ಇನ್ನು ಸ್ಪೀಡ್ 400 ರೋಡ್‌ಸ್ಟರ್ ಮತ್ತು ಸ್ಕ್ರಾಂಬ್ಲರ್ 400 X ಈ ಎರಡೂ ಬೈಕ್‌ಗಳಲ್ಲಿ TR ಸರಣಿಯ ಫ್ಯುಯೆಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ ೩೯೮ ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪರಿಚಯಿಸಲಾಗಿದೆ. ಈ ಎಂಜಿನ್ ಸಹಾಯದಿಂದ ಬೈಕ್‌ಗಳು ಆರಾಮದಾಯಕ ಸವಾರಿಯ ಅನುಭವವನ್ನು ನೀಡಲಿದೆ.
ಪರ್ಫಾಮೆನ್ಸ್: ಇನ್ನು ಸ್ಪೀಡ್ 400 ಮತ್ತು ಸ್ಕ್ರಾಂಬ್ಲರ್ 400 X ಸಹಯಾದಿಂದ ಈ ಬೈಕ್‌ಗಳು ಈ 40 ಪಿಎಸ್ ಪೀಕ್ ಪವರ್ ಮತ್ತು 37.5 ಎನ್‌ಎಮ್ ಟಾರ್ಕನ್ನು ಸಹ ಈ ಬೈಕ್‌ಗಳು ಉತ್ಪಾದಿಸಲಿದೆ. ಈ ಪರ್ಫಾಮೆನ್ಸ್ ಬೈಕ್‌ಗಳಿಗೆ ಉತ್ತಮ ರೀತಿಯಲ್ಲಿ ಆನ್ ರೋಡ್ ಪರ್ಫಾಮೆನ್ಸ್ ನೀಡಲಿದೆ.

ಫೀಚರ್ಸ್: ಸ್ಪೀಡ್ 400 ಮತ್ತು ಸ್ಕ್ರಾಂಬ್ಲರ್ 400 X ಬೈಕ್‌ನಲ್ಲಿ ಇತರ ಆಧುನಿಕ ಟೆಕ್ನಾಲಜಿ ಫೀಚರ್ಸ್‌ಗಳನ್ನೂ ಕಾಣಬಹುದಾಗಿದೆ. ಅದರಲ್ಲಿ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್, ಡ್ಯುಯಲ್ ಫಾರ್ಮಾಟ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಳು ಮುಂತಾದ ಫೀಚರ್‌ಗಳು ಸಹ ಸೇರಿವೆ. ಈ ಬೈಕ್ ಮುಂದಿನ ವರ್ಷ ಗ್ರಾಹಕರ ಕೈಸೇರಲಿದೆ ಎಂದು ಕಂಪನಿ ತಿಳಿಸಿದೆ. ಎರಡೂ ಬೈಕ್‌ನ ಬೆಲೆ ಇನ್ನೂ ಸಹ ಹೊರಬಿದ್ದಿಲ್ಲ.
ಕಲರ್ಸ್: ಈ ಎರಡೂ ಬೈಕ್‌ಗಳು ಆಕರ್ಷಕ ಬಣ್ಣಗಳಲ್ಲಿಇ ಗ್ರಾಹಕರ ಕೈ ಸೇರಲಿದೆ. ಅವುಗಳಾವುವು ಎಂದರೆ ಮೊದಲಿಗೆ ಸ್ಪೀಡ್ 400 ಬೈಕ್ ಕಾರ್ನಿವಲ್ ರೆಡ್, ಕ್ಯಾಸ್ಪಿಯನ್ ಬ್ಲೂ ಮತ್ತು ಫ್ಯಾಂಟಂ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದ್ದು, ಸ್ಕ್ರಾಂಬ್ಲರ್ 400 X ಬೈಕ್ ಮ್ಯಾಟ್ ಖಾಕಿ ಗ್ರೀನ್ ಮತ್ತು ಫ್ಯೂಷನ್ ವೈಟ್, ಕಾರ್ನಿವಲ್ ರೆಡ್ ಮತ್ತು ಫ್ಯಾಂಟಂ ಬ್ಲ್ಯಾಕ್ ಹಾಗೂ ಫ್ಯಾಂಟಂ ಬ್ಲ್ಯಾಕ್ ಮತ್ತು ಸಿಲ್ವರ್ ಐಸ್ ಬಣ್ಣದಲ್ಲಿ ಲಭ್ಯವಿದೆ.
ಬಹುನಿರೀಕ್ಷೆಯ ಈ ಎರಡೂ ಬೈಕ್‌ಗಳು ಜುಲೈ ತಿಂಗಳಲ್ಲಿ ಭಾರತದಲ್ಲಿ ಲಾಂಚ್ ಆಗಲಿದೆ. ರಾಯಲ್ ಎನ್‌ಫೀಲ್ಡ್ ೬೫೦ ಸಿಸಿಯ ಬೈಕ್‌ಗಳಿಗೆ ಇದು ಪ್ರತಿಸ್ಪರ್ದಿಯಾಗಲಿದೆ ಎಂಬುದು ಆಟೋಮೊಬೈಲ್ ಪಂಡಿತರ ಅಭಿಪ್ರಾಯ. ಮುಂದಿನ ವರ್ಷ ಗ್ರಾಹಕರ ಕೈ ಸೇರಲಿರುವ ಈ ಬೈಕ್ ಮಾರುಕಟ್ಟೆಯಲ್ಲಿ ಹೇಗೆ ತನ್ನ ಪಾರುಪತ್ಯವನ್ನು ಸಾಧಿಸಲಿದೆ ಎಂದು ಕಾದು ನೋಡಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








