ಭಾರತದಲ್ಲಿ ಅತ್ಯಂತ ಅಗ್ಗದ ಬೆಲೆಗೆ ಬಿಡುಗಡೆಯಾದ ಹೋಂಡಾ ಶೈನ್ 100 ವಿಶೇಷತೆಗಳು
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಭಾರತದಲ್ಲಿ ತನ್ನ ಅತ್ಯಂತ ಕೈಗೆಟುಕುವ ಮತ್ತು ಇಂಧನ ಸಮರ್ಥ ಮೋಟಾರ್‌ಸೈಕಲ್ ಆದ ಶೈನ್ 100 ಅನ್ನು ಬಿಡುಗಡೆ ಮಾಡಿದೆ. ಇದು ಪ್ರವೇಶ ಮಟ್ಟದ 100 ಸಿಸಿ ಮೋಟಾರ್ ಸೈಕಲ್ ಆಗಿದ್ದು, ದೇಶೀಯ ಮಾರುಕಟ್ಟೆಗೆ ರೂ. 64,900 ಬೆಲೆಯೊಂದಿಗೆ ಪರಿಚಯಿಸಲಾಗಿದೆ.
ಖರೀದಿದಾರರಿಗೆ ಪ್ರವೇಶ ಮಟ್ಟದ 100 ಸಿಸಿ ಪ್ರಯಾಣಿಕರ ವಿಭಾಗದಲ್ಲಿ ಸುಧಾರಿತ ತಂತ್ರಜ್ಞಾನವನ್ನು ನೀಡುವ ಉದ್ದೇಶದಿಂದ ಕಂಪನಿಯು ಹೋಂಡಾ ಶೈನ್ 100 ಅನ್ನು ಬಿಡುಗಡೆ ಮಾಡಿದೆ. ಹೋಂಡಾ ಶೈನ್ 100 ಅನ್ನು 12 ಪೇಟೆಂಟ್ ಅಪ್ಲಿಕೇಶನ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ವಿಶೇಷ 6-ವರ್ಷದ ವಾರಂಟಿ ಪ್ಯಾಕೇಜ್ (3 ವರ್ಷಗಳ ಪ್ರಮಾಣಿತ + 3 ವರ್ಷಗಳ ಐಚ್ಛಿಕ ವಿಸ್ತೃತ ವಾರಂಟಿ) ಅನ್ನು ಸಹ ನೀಡುತ್ತಿದೆ. ಇನ್ನೂ ಬೈಕ್ ಕುರಿತ ವಿಶೇಷತೆಗಳನ್ನು ಇಲ್ಲಿ ನೋಡೋಣ.

ವಿನ್ಯಾಸ, ಬಣ್ಣದ ಆಯ್ಕೆಗಳು:
ವಿನ್ಯಾಸ ಕುರಿತು ಮಾತನಾಡುವುದಾದರೆ ಹೊಸ ಹೋಂಡಾ ಶೈನ್ 100 ವಿನ್ಯಾಸವು ಶೈನ್ 125 ನಿಂದ ಸ್ಫೂರ್ತಿ ಪಡೆದಿದೆ. ಮುಂಭಾಗದ ಕೌಲ್, ಬ್ಲಾಕ್ ಅಲಾಯ್ ವೀಲ್‌ಗಳು, ಅಲ್ಯೂಮಿನಿಯಂ ಗ್ರಾಬ್ ರೈಲ್, ಟೈಲ್ ಲ್ಯಾಂಪ್ ಮತ್ತು ಸ್ಲೀಕ್ ಮಫ್ಲರ್‌ನೊಂದಿಗೆ ಒಟ್ಟಾರೆ ಗ್ರಾಫಿಕ್ ಥೀಮ್ ಅನ್ನು ಪಡೆದಿದೆ. ಬಣ್ಣದ ಆಯ್ಕೆಗಳನ್ನು ನೋಡುವುದಾದರೆ ಕಪ್ಪು ಕೆಂಪು ಪಟ್ಟಿಗಳೊಂದಿಗೆ ಕಪ್ಪು, ನೀಲಿ ಪಟ್ಟಿಯೊಂದಿಗೆ ಕಪ್ಪು, ಹಸಿರು ಪಟ್ಟಿಯೊಂದಿಗೆ ಕಪ್ಪು, ಗೋಲ್ಡ್ ಪಟ್ಟಿಯೊಂದಿಗೆ ಕಪ್ಪು ಮತ್ತು ಬೂದು ಪಟ್ಟಿಯೊಂದಿಗೆ ಕಪ್ಪು ಬಣ್ಣದಲ್ಲಿ ಒಟ್ಟು 5 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಹೊಸ 100cc ಎಂಜಿನ್:
ಹೋಂಡಾ ಶೈನ್ 100 ಹೊಸ 100cc OBD2 ಕಂಪ್ಲೈಂಟ್ PGM-FI ಎಂಜಿನ್ ಅನ್ನು ಒಳಗೊಂಡಿದೆ. ವರ್ಧಿತ ಸ್ಮಾರ್ಟ್ ಪವರ್ (eSP) ನಿಂದ ಉತ್ತೇಜಿಸಲ್ಪಟ್ಟಿದೆ. ಮೃದುವಾದ ಪರಿಸರ ಸ್ನೇಹಿ ಎಂಜಿನ್‌ನೊಂದಿಗೆ ಗರಿಷ್ಠ ಪರಿಣಾಮಕಾರಿ ದಹನವನ್ನು ಕಡಿಮೆ ಮಾಡಿ ಹೊರಸೂಸುವಿಕೆಯನ್ನು ನಿಯಂತ್ರಿಸುತ್ತದೆ. ಈ ಹೊಸ 100cc ಎಂಜಿನ್ ಸುಲಭವಾಗಿ ಪ್ರವೇಶಿಸಬಹುದಾದ ಹಾಗೂ ನಿರ್ವಹಣೆಯ ಸಮಯವನ್ನು ಕಡಿಮೆ ಮಾಡಲು ಇಂಧನ ಟ್ಯಾಂಕ್ ಹೊರಗೆ ಬಾಹ್ಯ ಇಂಧನ ಪಂಪ್ ಅನ್ನು ಅಳವಡಿಸಲಾಗಿದೆ.

ಸೌಕರ್ಯ ಮತ್ತು ಅನುಕೂಲತೆ:
ಹೋಂಡಾ ಶೈನ್ 100 ನ ಉದ್ದದ ಸೀಟ್ (677 ಎಂಎಂ) ಸವಾರರಿಗೆ ಮತ್ತು ಹಿಂಬದಿ ಕೂರುವವರಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ಹಾಗೆಯೇ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಟ್ಯಾಂಕ್ ಅನ್ನು ಹೊಂದಿದೆ, ಇದು ಸವಾರನಿಗೆ ವರ್ಧಿತ ಮೊಣಕಾಲಿನ ಹಿಡಿತವನ್ನು ನೀಡುತ್ತದೆ ಎಂದು ಹೋಂಡಾ ಹೇಳಿದೆ. ಅತ್ಯುತ್ತಮ ಸೀಟ್ ಎತ್ತರ (786mm) ಸರಾಸರಿ ಎತ್ತರದ ಭಾರತೀಯ ಸವಾರರಿಗೆ ಸುಲಭವಾಗಿ ನೆಲವನ್ನು ತಾಗಲು ಅನುಮತಿಸುತ್ತದೆ.
ಸೈಡ್ ಸ್ಟ್ಯಾಂಡ್ ಹಾಕಿದ್ದಾಗ ಎಂಜಿನ್ ಸ್ಟಾರ್ಟ್ ಆಗದೇ ತಡೆಯಲು ಇದು ಎಂಜಿನ್ ಇನ್ಹಿಬಿಟರ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಅನ್ನು ಪಡೆಯುತ್ತದೆ. ಈ ಮೂಲಕ ಸುರಕ್ಷಿತ ಸವಾರಿಯನ್ನು ನಮಗೆ ನೀಡುತ್ತದೆ. ಹೋಂಡಾ ಶೈನ್ 100 ಈಕ್ವಲೈಜರ್‌ನೊಂದಿಗೆ ಪೇಟೆಂಟ್ ಪಡೆದ ಕಾಂಬಿ-ಬ್ರೇಕ್ ಸಿಸ್ಟಮ್ (CBS) ಅನ್ನು ಸಹ ಪಡೆಯುತ್ತದೆ. ಇದು 1245 ಎಂಎಂ ಉದ್ದದ ವೀಲ್‌ಬೇಸ್ ಮತ್ತು 168 ಎಂಎಂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಮಾತನಾಡಿ, "ಶೈನ್ ತನ್ನ ವರ್ಗದಲ್ಲಿ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ಮೋಟಾರ್‌ಸೈಕಲ್ ಆಗಿದೆ. ಶೈನ್ 100 ಅನ್ನು ಶೈನ್ ಪರಂಪರೆಯನ್ನು ಪುನಶ್ಚೇತನಗೊಳಿಸಲು ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಶೈನ್ 100 ಭಾರತದಾದ್ಯಂತ ಜನರಿಗೆ ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಲು ಹೋಂಡಾ ಈ ಹೊಸ ಮೋಟಾರ್ ಸೈಕಲ್ ಅನ್ನು ತಂದಿದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications