ಅಧಿಕ ದೂರ ಚಲಿಸುವ, ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭಾರತದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿದೆ. ಇದರಿಂದ ನಿಧಾನವಾಗಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಪ್ರಾರಂಭಿಸಿದ್ದು, ಮುಂದೆ ಭಾರತದಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸುಜುಕಿ ಇ-ಬರ್ಗ್‌ಮ್ಯಾನ್: ಸುಜುಕಿ ಮೋಟಾರ್ ಕಾರ್ಪೊರೇಷನ್ ಮುಂಬರುವ ಸುಜುಕಿ ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಸುಜುಕಿ ಪ್ರಕಾರ, ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ 4kW ಪೀಕ್ ಔಟ್‌ಪುಟ್, 0.98kW ರೇಟ್ ಔಟ್‌ಪುಟ್ ಮತ್ತು 18 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ ಸಿಂಗಲ್ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಈ ರೇಂಜ್ ಗಮನಾರ್ಹವಾಗಿ ಕಡಿಮೆ ಕಂಡುಬಂದರೂ, ಅಂತಿಮ ಮಾದರಿಯು ಹೆಚ್ಚಿನ ರೇಂಜ್ ನೀಡುವ ನಿರೀಕ್ಷೆಯಿದೆ.

ಸುಜುಕಿ ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್‌ನಲ್ಲಿ 44 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ 60 ಕಿ,ಮೀ ಟಾಪ್ ಸ್ಪೀಡ್ ಹೊಂದಿರುತ್ತದೆ, ಈ ಎಲೆಕ್ಟ್ರಿಕ್ ಸ್ಕೂಟರ್ 147 ಕೆಜಿ ತೂಕವನ್ನು ಹೊಂದಿದೆ. ಸುಜುಕಿ ಬರ್ಗ್‌ಮ್ಯಾನ್ ಇ-ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಬ್ಯಾಟರಿ ಪ್ಯಾಕ್ ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ: ಸ್ವಾಪಿಂಗ್ ಸ್ಟೇಷನ್‌ಗಳಲ್ಲಿ ಬ್ಯಾಟರಿಯನ್ನು ಬದಲಾಯಿಸಬಹುದು.
ಯಮಹಾ ಎಲೆಕ್ಟ್ರಿಕ್ ಸ್ಕೂಟರ್- ನಿಯೋಸ್ ಮತ್ತು E01: ಇತ್ತೀಚೆಗೆ ಭಾರತದಲ್ಲಿ ಡೀಲರ್ ಈವೆಂಟ್‌ನಲ್ಲಿ ಪ್ರದರ್ಶಿಸಲಾಯಿತು, ಯಮಹಾ ನಿಯೋ ಮತ್ತು ಇ01 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಜಪಾನಿನ ದ್ವಿಚಕ್ರ ವಾಹನ ತಯಾರಕರು ಮುಂದಿನ ವರ್ಷ ಅಥವಾ 2025 ರಲ್ಲಿ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಬಹುದು.

ಟಿವಿಎಸ್ iQube ST: 2023ರ ಆಟೋ ಎಕ್ಸ್‌ಪೋದಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಪ್ರದರ್ಶಿಸಿತು. ಮುಂದಿನ ಕೆಲವು ವಾರಗಳಲ್ಲಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಲೋ ಟ್ರಿಮ್‌ಗಳಲ್ಲಿನ 3kWh ಯುನಿಟ್‌ಗೆ ಹೋಲಿಸಿದರೆ ಇದು ದೊಡ್ಡ 4.56kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 145 ಕಿ.ಮೀ ರೇಂಜ್ ಅನ್ನು ನೀಡಬಹುದು.
ರಿವರ್ ಇ-ಸ್ಕೂಟರ್: ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಶೀಘ್ರದಲ್ಲೇ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊರತರಲಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ದೊಡ್ಡದಾದ 14-ಇಂಚಿನ ವ್ಹೀಲ್ ಗಳೊಂದಿಗೆ ದೊಡ್ಡ ಎಲ್ಇಡಿ ಲ್ಯಾಂಪ್ ಗಳನ್ನು ಹೊಂದಿವೆ.
ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಗಳು: ಹೋಂಡಾ ಕಂಪನಿಯು 2024 ರಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನಿರ್ಧರಿಸಲಾಗಿದೆ. 2 ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಹೋಂಡಾ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರವೇಶಿಸಲಿದೆ. ಎರಡೂ ದ್ವಿಚಕ್ರ ವಾಹನಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಮತ್ತು ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಕ್ಟಿವಾ ಎಲೆಕ್ಟ್ರಿಕ್ ಎಂದು ಕರೆಯಲಾಗುತ್ತದೆ.
ಇನ್ನು ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಗಳು ಪ್ಲಾಟ್‌ಫಾರ್ಮ್ 'ಇ' ಎಂಬ ಕೋಡ್ ನಾಮ್ ಹೊಂದಿರುವ ಹೊಚ್ಚ ಹೊಸ EV-ನಿರ್ದಿಷ್ಟ ಅಂಡರ್‌ಪಿನ್ನಿಂಗ್ ಅನ್ನು ಆಧರಿಸಿ, ಮುಂಬರುವ ದ್ವಿಚಕ್ರ ವಾಹನಗಳು ಭವಿಷ್ಯದಲ್ಲಿ ಅದೇ ಪ್ಲಾಟ್‌ಫಾರ್ಮ್ ಬಳಸಿಕೊಳ್ಳುವ ವಿವಿಧ ಹೊಸ ಮಾದರಿಗಳಿಗೆ ದಾರಿ ಮಾಡಿಕೊಡುತ್ತವೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಚೊಚ್ಚಲ ಸ್ಕೂಟರ್ ಸ್ಥಿರ ಬ್ಯಾಟರಿಯನ್ನು ಹೊಂದಿರುತ್ತದೆ, ಆದರೆ ಎರಡನೇ ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿಯನ್ನು ಹೊಂದಿರಬಹುದು.


Click it and Unblock the Notifications








