TVS Apache 310 Street: ಹಬ್ಬದ ದಿನವೇ ಹೊಸ ಟಿವಿಎಸ್ ಅಪಾಚೆ 310 ಸ್ಟ್ರೀಟ್ ಬೈಕ್ ಬುಕ್ಕಿಂಗ್ ಶುರು

ಭಾರತದಲ್ಲಿ ಟಿವಿಎಸ್ (TVS) ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ವಿವಿಧ ಸ್ಕೂಟರ್ ಹಾಗೂ ಬೈಕ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುತ್ತದೆ. ಎರಡು ದಿನದ ಹಿಂದಷ್ಟೇ, ಪ್ರೀಮಿಯಂ 'ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿ, ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗ ಹೊಚ್ಚ ಹೊಸ ಬೈಕ್ ಬಗ್ಗೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ.

ಟಿವಿಎಸ್ ಕಂಪನಿ ಮುಂಬರಲಿರುವ ಅಪಾಚೆ 310 ಸ್ಟ್ರೀಟ್‌ (Apache 310 Street) ಬೈಕ್‌ನ ಹಲವು ಟೀಸರ್‌ಗಳನ್ನು ಕೆಲವು ದಿನಗಳಿಂದ ಬಿಡುಗಡೆಗೊಳಿಸುತ್ತಿದ್ದು, ಡಿಸೈನ್ ಬಗ್ಗೆ ಒಂದಷ್ಟು ಮಾಹಿತಿಯನ್ನು ಬಹಿರಂಗಪಡಿಸುತ್ತಲೇ ಬಂದಿದೆ. ಕಂಪನಿಯು ವರಮಹಾಲಕ್ಷ್ಮಿ ಹಬ್ಬದ ದಿನವೇ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಈ ಬೈಕ್‌ಗಾಗಿ ಪ್ರಿ-ಬುಕ್ಕಿಂಗ್ ತೆರೆದಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

TVS Apache 310 Street: ಹಬ್ಬದ ದಿನವೇ ಹೊಸ ಟಿವಿಎಸ್ ಅಪಾಚೆ 310 ಸ್ಟ್ರೀಟ್ ಬೈಕ್ ಬುಕ್ಕಿಂಗ್ ಶುರು

ನೂತನ ಟಿವಿಎಸ್ ಅಪಾಚೆ 310 ಸ್ಟ್ರೀಟ್‌ ಬಹುತೇಕ ಸೆಪ್ಟೆಂಬರ್ 7 ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ರೂ. 2.5 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಟಿವಿಎಸ್ ಹಾಗೂ ಬಿಎಂಡಬ್ಲ್ಯೂ ಕಂಪನಿ ಪಾಲುದಾರಿಕೆ ಹೊಂದಿವೆ. ಆ ಕಾರಣಕ್ಕೆ ನೂತನ ಅಪಾಚೆ 310 ಸ್ಟ್ರೀಟ್‌ ಬೈಕ್, ಬಿಎಂಡಬ್ಲ್ಯೂ ಪ್ರೀಮಿಯಂ ಬೈಕ್‌ಗಳ ಪ್ಲಾಟ್‌ಫಾರ್ಮ್ ಆಧರಿಸಿರಲಿದೆ.

ಬಹುತೇಕ, ಬಿಎಂಡಬ್ಲ್ಯೂ ಮೋಟಾರ್ ಸೈಕಲ್ ರೀತಿಯಲ್ಲಿ ಹೊಸ ಟಿವಿಎಸ್ ಅಪಾಚೆ 310 ಸ್ಟ್ರೀಟ್‌ ಬೈಕ್, ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ನೀರಿಕ್ಷೆಯಿದೆ. ಡಿಸೈನ್ ವಿಷಯವಾಗಿ ಹೇಳುವುದಾದರೆ, ಈ ಅಪಾಚೆ, ಮುಂಭಾಗದಲ್ಲಿ ಸ್ಲಿಮ್ ಸ್ಪ್ಲಿಟ್ LED ಹೆಡ್‌ಲೈಟ್ಸ್, ಹಿಂಭಾಗ, ಹೊಸದಾಗಿ ವಿನ್ಯಾಸಗೊಳಿಸಲಾದ LED ಟೈಲ್‌ಲೈಟ್ಸ್ ಹೊಂದಿರುವ ನೀರಿಕ್ಷೆಯಿದೆ. ಜೊತೆಯಲ್ಲಿ ಸ್ಪ್ಲಿಟ್ ಸೀಟ್ ಅನ್ನು ಪಡೆದಿರಲಿದೆ.

TVS Apache 310 Street: ಹಬ್ಬದ ದಿನವೇ ಹೊಸ ಟಿವಿಎಸ್ ಅಪಾಚೆ 310 ಸ್ಟ್ರೀಟ್ ಬೈಕ್ ಬುಕ್ಕಿಂಗ್ ಶುರು

ಟಿವಿಎಸ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಟೀಸರ್‌ವೊಂದರಲ್ಲಿ ಈ ಅಪಾಚೆ 310 ಸ್ಟ್ರೀಟ್‌ ಬೈಕಿನ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಕೆಲವೊಂದು ವಿವರಗಳನ್ನು ಬಹಿರಂಗಪಡಿಸಿದೆ. ಅದರಲ್ಲಿ ಈ ಮೋಟಾರ್ ಸೈಕಲ್, ಮುಂಭಾಗ USD ಪೋರ್ಕ್ಸ್, ಹಿಂಭಾಗ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿರಲಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿರಲಿದೆ.

ಮುಂಬರಲಿರುವ ಟಿವಿಎಸ್ ಅಪಾಚೆ 310 ಸ್ಟ್ರೀಟ್‌ ಬೈಕ್ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಬ್ಲೂಟೂತ್ ಸಂಪರ್ಕಿತ ಡಿಜಿಟಲ್ TFT ಡಿಸ್ಪ್ಲೇ, ಕಾಲ್ & ಮ್ಯೂಸಿಕ್ ಡಿಸ್ಪ್ಲೇ, SmartXonnect ಕನೆಕ್ಟಿವಿಟಿ ಸೂಟ್, ನ್ಯಾವಿಗೇಷನ್, ರೈಡ್ ಅನಾಲಿಟಿಕ್ಸ್, ಜಿಯೋ-ಫೆನ್ಸಿಂಗ್ ಸೇರಿದಂತೆ ವಿವಿಧ ಫೀಚರ್ಸ್ ಹೊಂದಿರುವ ನೀರಿಕ್ಷೆಯಿದೆ. ಜೊತೆಯಲ್ಲಿ ಡ್ಯುಯಲ್-ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿರಬಹುದು.

ಟಿವಿಎಸ್ ಅಪಾಚೆ 310 ಸ್ಟ್ರೀಟ್‌ ಮೋಟಾರ್ ಸೈಕಲ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರ 312.2cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಪೆಟ್ರೋಲ್ ಎಂಜಿನ್, 34 PS ಪವರ್, 27.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಸಾಧ್ಯತೆಯಿದೆ. ಸ್ಪೋರ್ಟ್, ಟ್ರ್ಯಾಕ್, ಅರ್ಬನ್ ಹಾಗೂ ರೈನ್ ಎಂಬ ರೈಡಿಂಗ್ ಮೋಡ್ ಒಳಗೊಂಡಿರಬಹುದು.

ಎರಡು ದಿನದ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿತ್ತು. ಇದು, ರೂ.2.50 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯಲಿದ್ದು, ನವೆಂಬರ್ ತಿಂಗಳಿಂದ ವಿತರಣೆಗಳು ಶುರುವಾಗಲಿದೆ. 4.44 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿರುವ ಈ ಸ್ಕೂಟರ್, ಸಂಪೂರ್ಣ ಚಾರ್ಜ್‌ನಲ್ಲಿ 140 ಕಿಮೀ ರೇಂಜ್ ನೀಡುತ್ತದೆ. 10.25 - ಇಂಚಿನ ಟಿಲ್ಟ್ ಸ್ಕ್ರೀನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, August 25, 2023, 16:17 [IST]
English summary
Tvs apache 310 street bike bookings open details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+