TVS Apache RTR 310: ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿವರಗಳಿವು

ತಮಿಳುನಾಡಿನ ಹೊಸೂರು ಮೂಲದ ಟಿವಿಎಸ್ (TVS), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಸೆ.6ರಂದು ಹೆಚ್ಚಿನ ಯುವ ಗ್ರಾಹಕರನ್ನು ತನ್ನತ್ತ ಸೆಳೆಯಲು ನೂತನ ಪ್ರೀಮಿಯಂ ಮೋಟಾರ್‌ಸೈಕಲ್ ಅಪಾಚೆ ಆರ್‌ಟಿಆರ್ 310 (Apache RTR 310) ಬಿಡುಗಡೆಗೊಳಿಸಿತ್ತು. ಈ ಬೈಕ್ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ.

ಮೊದಲಿಗೆ ಬೆಲೆ ಬಗ್ಗೆ ತಿಳಿಯೋಣ. ನೂತನ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್ ಭರಪೂರ ವೈಶಿಷ್ಟ್ಯಗಳನ್ನು ಪಡೆದಿರುವುದರಿಂದ ಕೊಂಚ ಹೆಚ್ಚಿನ ಬೆಲೆಯನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ರೂ.2.43 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಖರೀದಿಗೆ ಲಭ್ಯವಿದೆ. ಅಪಾಚೆ ಆರ್‌ಆರ್ 310 ಬೈಕಿಗೆ ಹೋಲಿಸಿದರೆ, ರೂ.29,000 ಅಗ್ಗವಾಗಿದೆ. ಈ ಮೂಲಕ ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗಕ್ಕೆ ಟಿವಿಎಸ್ ಕಂಪನಿಯ ಅದ್ಬುತ ಕೊಡುಗೆಯಾಗಿದೆ.

TVS Apache RTR 310: ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿವರಗಳಿವು

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್, 312 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಎಂಜಿನ್ ಹೊಂದಿದೆ. ಆದರೆ, ಅಪಾಚೆ ಆರ್‌ಆರ್ 310 ಬೈಕ್‍ಗೆ ಹೋಲಿಸಿದರೆ, ಕೊಂಚ ಕಡಿಮೆ ಪವರ್ ಉತ್ಪಾದಿಸುತ್ತದೆ. 9,700 rpmನಲ್ಲಿ 35 bhp ಗರಿಷ್ಠ ಪವರ್ ಹಾಗೂ 6,650 rpmನಲ್ಲಿ 28.7 Nm ಪೀಕ್ ಟಾರ್ಕ್ ಹೊರಹಾಕಲು ಶಕ್ತವಾಗಿದೆ. 6-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದೆ.

ಅಪಾಚೆ ಆರ್‌ಟಿಆರ್ ಬೈಕ್, ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇತರೆ ಕಂಪನಿ ಬೈಕ್‍ಗಳಿಗೆ ಹೋಲಿಸಿದರೆ, ಅತ್ಯುನ್ನತವಾಗಿದ್ದು, ಕೇವಲ 2.81 ಸೆಕೆಂಡುಗಳಲ್ಲಿ 0-60 km/h ವೇಗವನ್ನು ಪಡೆಯಲಿದ್ದು, 150 km/h ಟಾಪ್ ಸ್ವೀಡ್ ಒಳಗೊಂಡಿದೆ. ಇದೇ ಈ ಮೋಟಾರ್‌ಸೈಕಲ್ ಹೈಲೆಟ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸೆಳೆಯಲು ಸಾಧ್ಯವಾಗುತ್ತದೆ.

TVS Apache RTR 310: ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿವರಗಳಿವು

ಬಿಎಂಡಬ್ಲ್ಯೂ ಹಾಗೂ ಟಿವಿಎಸ್ ಸಹಭಾಗಿತ್ವದಲ್ಲಿ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್ ಅಭಿವೃದ್ಧಿಪಡಿಸಿರುವುದರಿಂದ ಯಾವ ಕಾರಿಗೂ ಕಮ್ಮಿ ಇಲ್ಲದಂತಹ ಡಿಸೈನ್ ಹೊಂದಿದೆ. ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್ಸ್ ಹಾಗೂ ಎಲ್ಇಡಿ DRL ಅನ್ನು ಪಡೆದಿದೆ. ಜೊತೆಯಲ್ಲಿ ಅತ್ಯಾಧುನಿಕ ರೇರ್ ಎಲ್ಇಡಿ ಬ್ರೇಕ್ ಲೈಟಿಂಗ್, ಟೂ ಪೀಸ್ ಸೀಟ್ಸ್ ಹಾಗೂ ಅಗಲವಾದ ಹ್ಯಾಂಡಲ್ ಬಾರ್ ಒಳಗೊಂಡಿದೆ.

ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಇದು ಆಕರ್ಷಕ 5 - ಇಂಚಿನ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ಲೈಮೇಟ್ ಕಂಟ್ರೋಲ್ ಸೀಟ್, ಕ್ರೂಸ್ ಕಂಟ್ರೋಲ್, TPMS (ಟ್ರೈರ್ ಪ್ರೆಜರ್ ಮಾನಿಟರಿಂಗ್ ಸಿಸ್ಟಮ್), ಡುಯೆಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

ಕಡೆಯದಾಗಿ, ಸಸ್ಪೆನ್ಷನ್ ಸಿಸ್ಟಮ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ತಿಳಿಯೋಣ. ಈ ಅಪಾಚೆ ಆರ್‌ಟಿಆರ್ 310 ಬೈಕ್, ಫ್ರಂಟ್ USD ಪೋರ್ಕ್ಸ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಎರಡು ತುದಿಯಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇದರೊಟ್ಟಿಗೆ 17 ಇಂಚಿನ ವೀಲ್ಸ್ ಹಾಗೂ ಡ್ಯುಯಲ್ ಕಾಂಪೌಂಡ್ ರೇಡಿಯಲ್ ಟೈಯರ್ಸ್ ಒಳಗೊಂಡಿದೆ.

ಟಿವಿಎಸ್ ಕಂಪನಿ, ಈ ಅಪಾಚೆ ಆರ್‌ಟಿಆರ್ 310 ಬೈಕ್ ಮೈಲೇಜ್ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗಪಡಿಸಿಲ್ಲ. ಆದರೂ, 33.1 kmpl ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿ ಕೆಟಿಎಂ ಡ್ಯೂಕ್ ಸರಣಿ ಬೈಕ್‍ಗಳಿವೆ. ಹಬ್ಬದ ಋತುವಿನಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Friday, September 8, 2023, 8:30 [IST]
English summary
Tvs apache rtr 310 bike top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+