TVS: ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್ ಬಿಡುಗಡೆ, ಯಾರೂ ಊಹಿಸದಷ್ಟು ಡಬಲ್ ವಿಶೇಷತೆಗಳಿವೆ
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ (TVS) ಜನಪ್ರಿಯತೆ ಗಳಿಸಿದೆ. ಇದೀಗ, ಹೊಚ್ಚ ಹೊಸ ಪ್ರೀಮಿಯಂ ಮೋಟಾರ್ ಸೈಕಲ್ ಅಪಾಚೆ ಆರ್‌ಟಿಆರ್ 310 (Apache RTR 310) ಬಿಡುಗಡೆಗೊಳಿಸಿದೆ. ಈ ಬೈಕ್ ನಿರೀಕ್ಷೆಗೂ ಮೀರಿದ ವಿಶೇಷತೆಗಳನ್ನು ಹೊಂದಿದ್ದು, ಆ ಬಗ್ಗೆ ಇಲ್ಲಿದೆ ಮಾಹಿತಿ.
ಮೊದಲಿಗೆ, ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್ ಬೆಲೆ ಬಗ್ಗೆ ಮಾತನಾಡೋಣ. ಇದು, ಭಾರತದ ಮಾರುಕಟ್ಟೆಯಲ್ಲಿ ರೂ.2.43 ಲಕ್ಷ ಎಕ್ಸ್ ಶೋರೂಂ ದರಕ್ಕೆ ಲಾಂಚ್ ಆಗಿದೆ. ಅಪಾಚೆ ಆರ್‌ಆರ್ 310 (TVS Apache RR 310) ಮೋಟಾರ್‌ಸೈಕಲ್ ಗೆ ಹೋಲಿಸಿದರೆ, ರೂ.29,000 ಕಡಿಮೆ ದರವನ್ನು ಹೊಂದಿದೆ. ಕೆಲವೇ ದಿನಗಳ ಹಿಂದೆಯೇ ಈ ಬೈಕ್ ಬುಕ್ಕಿಂಗ್ ಶುರುವಾಗಿತ್ತು.

ಬಿಎಂಡಬ್ಲ್ಯೂ ಹಾಗೂ ಟಿವಿಎಸ್ ಸಹಭಾಗಿತ್ವದಲ್ಲಿ ಈ ಅಪಾಚೆ ಆರ್‌ಟಿಆರ್ 310 ಬೈಕ್ ಅಭಿವೃದ್ಧಿಪಡಿಸುತ್ತಿರವುದರಿಂದ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಇದರ 312 ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್, 35.6 hp ಗರಿಷ್ಠ ಪವರ್ ಮತ್ತು 28.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಈ ಬೈಕ್, 2.81 ಸೆಕೆಂಡುಗಳಲ್ಲಿ 0 - 60 kmph ವೇಗವನ್ನು ಪಡೆಯಲಿದ್ದು, 150 kmph ಟಾಪ್ ಸ್ವೀಡ್ ಹೊಂದಿದೆ. ಮುಂಭಾಗ, ಶೇಕಡ 30% ಕಂಪ್ರೆಷನ್ & ರೀಬೌಂಡ್ ಡ್ಯಾಂಪಿಂಗ್‌ನೊಂದಿಗೆ USD ಪೋರ್ಕ್ಸ್, ಹಿಂಭಾಗ ಕೂಡ ಶೇಕಡ 30% ಪ್ರಿ-ಲೋಡ್ ರೀಬೌಂಡ್ ಡ್ಯಾಂಪಿಂಗ್‌ನೊಂದಿಗೆ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಜೊತೆಗೆ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದ್ದು, ಡ್ಯುಯಲ್ ಕಾಂಪೌಂಡ್ ರೇಡಿಯಲ್ ಟೈರ್ ಒಳಗೊಂಡಿದೆ.

ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್, ಡೈನಾಮಿಕ್ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್ಸ್ ಹಾಗೂ ಎಲ್ಇಡಿ DRLನೊಂದಿಗೆ ತೀಕ್ಷ್ಣವಾದ ನೋಟವನ್ನು ಹೊಂದಿದೆ. ಸ್ಪ್ಲಿಟ್ ಎಲ್ಇಡಿ ಟೈಲ್ ಲೈಟ್ ನೊಂದಿಗೆ ಡೈನಾಮಿಕ್ ರೇರ್ ಎಲ್ಇಡಿ ಬ್ರೇಕ್ ಲೈಟಿಂಗ್ ಅನ್ನು ಒಳಗೊಂಡಿದೆ. ಅತ್ಯಾಕರ್ಷಕ ಪ್ಯೂಯೆಲ್ ಟ್ಯಾಂಕ್, ಟೂ ಪೀಸ್ ಸೀಟ್ಸ್, ಕೊಂಚ ಅಗಲವಾದ ಹ್ಯಾಂಡಲ್ ಬಾರ್ ಪಡಿದಿದೆ.
ಹೊಸ, ಅಪಾಚೆ ಆರ್‌ಟಿಆರ್ ಬೈಕ್ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಕ್ರೂಸ್ ಕಂಟ್ರೋಲ್, 5 ರೈಡ್ ಮೋಡ್ಸ್, 5-ಇಂಚಿನ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ಲೈಮೇಟ್ ಕಂಟ್ರೋಲ್ ಸೀಟ್, RT-DSC (ರೇಸ್ ಟ್ಯೂನ್ಡ್ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್), ಫ್ರಂಟ್ ವೀಲ್ ಲಿಫ್ಟ್ ಆಫ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕಿಗೆ ಕೆಟಿಎಂ 390 ಡ್ಯೂಕ್ ಹಾಗೂ ಕೆಟಿಎಂ 250 ಡ್ಯೂಕ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಮೈಲೇಜ್ ಬಗ್ಗೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಮುಂಬರುವ ದಿನಗಳಲ್ಲಿ ಹಬ್ಬದ ಸೀಸನ್ ಆರಂಭವಾಗುವುದರಿಂದ ಹೆಚ್ಚಿನ ಗ್ರಾಹಕರು, ಇಷ್ಟಪಟ್ಟು ಈ ಬೈಕ್ ಖರೀದಿಸಬಹುದು. ಇದರಿಂದ ಕಂಪನಿಯ ಮಾರಾಟ ಗಣನೀಯವಾಗಿ ಅಧಿಕಗೊಳ್ಳಬಹುದು.
ಸದ್ಯ ಖರೀದಿಗೆ ಲಭ್ಯವಿರುವ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್, ಬೆಂಗಳೂರಿನಲ್ಲಿ ರೂ.3,45,476 ಆನ್-ರೋಡ್ ಬೆಲೆಯನ್ನು ಹೊಂದಿದೆ. 312.2 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್, 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಈ ಬೈಕ್, 33.1 kmpl ಮೈಲೇಜ್ ನೀಡಲಿದ್ದು, LED ಲೈಟಿಂಗ್, ಬ್ಲೂಟೂತ್ ಕನೆಕ್ಟ್ದ್ TFT ಡಿಸ್ಪ್ಲೇಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications