TVS Creon: ಹೊಸ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ಬಿಡುಗಡೆ, ಐಕ್ಯೂಬ್ 'ಅಣ್ಣ' ಬರಲಿದೆ!

ಭಾರತದಲ್ಲಿ ಟಿವಿಎಸ್ (TVS) ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಐಕ್ಯೂಬ್ ಸ್ಕೂಟರ್ ಮಾರಾಟದೊಂದಿಗೆ ಎಲೆಕ್ಟ್ರಿಕ್ ವಿಭಾಗಕ್ಕೂ ಪ್ರವೇಶಿಸಿದೆ. ತನ್ನ ಮುಂಬರಲಿರುವ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಒಂದೊಂದೇ ಮಾಹಿತಿಯನ್ನು ಬಹಿರಂಗ ಪಡಿಸುತ್ತಿದ್ದು, ಉತ್ಪಾದನೆಗೆ ಸಿದ್ದಗೊಂಡಿರುವ ಕ್ರಿಯೋನ್ (Creon) ಕಾನ್ಸೆಪ್ಟ್ ಇ-ಸ್ಕೂಟರ್ ಟೀಸರ್ ಬಿಡುಗಡೆಗೊಳಿಸಿದೆ.

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ಟೀಸರ್ ಸಖತ್ ಹಲ್ ಚಲ್ ಸೃಷ್ಟಿಸಿದೆ. ಮುಂಬರಲಿರುವ ಹೊಸ ಟಿವಿಎಸ್ ಕ್ರಿಯೋನ್ (ಕಾನ್ಸೆಪ್ಟ್ ಆಧಾರಿತ) ಎಲೆಕ್ಟ್ರಿಕ್ ಸ್ಕೂಟರ್, ಸಾಕಷ್ಟು ಕನೆಕ್ಟಿವಿಟಿ ಫೀಚರ್ಸ್ ಹೊಂದಿರಬಹುದು. ಅದಕ್ಕಾಗಿಯೇ TFT ಸ್ಕ್ರೀನ್ ಸ್ಮಾರ್ಟ್‌ವಾಚ್‌ಗೆ ಕನೆಕ್ಟ್ ಆಗಿರುವಂತೆ ಟೀಸರ್ ವಿಡಿಯೋದಲ್ಲಿ ತೋರಿಸಲಾಗಿದೆ. ಆಗಸ್ಟ್ 23ರಂದು ಟಿವಿಎಸ್ ಕಂಪನಿ ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಜಾಗತಿಕವಾಗಿ ಅನಾವರಣ ಮಾಡಲಿದ್ದು, ಅಂದೇ ಎಲ್ಲದಕ್ಕೂ ಉತ್ತರ ಸಿಗಲಿದೆ.

TVS Creon: ಹೊಸ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ಬಿಡುಗಡೆ, ಐಕ್ಯೂಬ್ ಅಣ್ಣ ಬರಲಿದೆ!

ಮೊದಲು ಬಿಡುಗಡೆಗೊಳಿಸದ ಟೀಸರ್ ವಿಡಿಯೋವನ್ನು ನೋಡಿದಾಗ ಟಿವಿಎಸ್ ಕಂಪನಿಯು ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಗ್ರಾಹಕರ ಅಭಿರುಚಿಯನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಅದರ ಸಲುವಾಗಿ ತನ್ನ, ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿಯು ಇನ್ಸ್ಟ್ರುಮೆಂಟ್ ಕನ್ಸೋಲ್ ಬದಲಿಗೆ ಸಂಪೂರ್ಣ ಬಣ್ಣದಿಂದ ಕೂಡಿರುವ TFT ಡಿಸ್ಪ್ಲೇಯನ್ನು ನೀಡುತ್ತಿದೆ. ಈಗಾಗಲೇ ದೇಶೀಯ ಮಾರುಕಟ್ಟೆಯಲ್ಲಿ ಈ ರೀತಿಯ ಡಿಸ್ಪ್ಲೇಯಿಂದ ಓಲಾ ಎಸ್1 ಪ್ರೊ ದೊಡ್ಡಮಟ್ಟದಲ್ಲಿ ಜನಪ್ರಿಯಗೊಂಡಿದೆ.

ಪ್ರಸ್ತುತ, ಟಿವಿಎಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಟೀಸರ್ ವಿಡಿಯೋದಲ್ಲಿ ಸ್ಮಾರ್ಟ್‌ವಾಚ್ ಕನೆಕ್ಟಿವಿಟಿಯನ್ನು ತೋರಿಸಿದೆ. ಇದು, ರಿಮೋರ್ಟ್ ಎಂಟ್ರಿ, ವೆಹಿಕಲ್ ಲಾಕ್, ಅನ್‌ಲಾಕ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ನೀರಿಕ್ಷೆಯಿದೆ. ಕಂಪನಿಯು ನೂತನ ಸ್ಕೂಟರ್‌ನ ಭ್ಯಾಟರಿ ಪ್ಯಾಕ್, ರೇಂಜ್, ಮೋಟಾರ್ ಹಾಗೂ ಪವರ್ ಉತ್ಪಾದನೆ ಸಂಬಂಧ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲ್ಲ.

ನೂತನ ಎಲೆಕ್ಟ್ರಿಕ್ ಸ್ಕೂಟರ್, LED ಹೆಡ್ ಲ್ಯಾಂಪ್ ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವ ನೀರಿಕ್ಷೆಯಿದೆ. ಇದು, ಬಹುತೇಕ, ಗರಿಷ್ಠ ರೇಂಜ್ ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿರುವುದರಿಂದ ಐಕ್ಯೂಬ್ ಸ್ಕೂಟರ್‌ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು. ಸರಿ ಸುಮಾರು ರೂ.1.5 ಲಕ್ಷದಿಂದ ರೂ.1.7 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಬಹುದು. ಓಲಾ ಎಸ್1 ಪ್ರೊ, ಎಥರ್ 450ಎಕ್ಸ್ ಸ್ಕೂಟರ್‌ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

ಇತ್ತೀಚೆಗೆ, ಟಿವಿಎಸ್ ಕಂಪನಿಯು ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ಹೊಸ ರೂಪಾಂತರವನ್ನು ಕಡಿಮೆ ಬೆಲೆಗೆ ಬಿಡುಗಡೆಗೊಳಿಸಲಿದೆ ಎಂದು ಮೂಲಗಳು ಹೇಳಿವೆ. ಇದರಲ್ಲಿ ಸಣ್ಣ ಬ್ಯಾಟರಿ ಪ್ಯಾಕ್ ಉಪಯೋಗಿಸುವ ಸಾಧ್ಯತೆಯಿದೆ. ಆ ಕಾರಣಕ್ಕೆ ಬೆಲೆಯು ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಈಗಿರುವ ಮಾದರಿಗೆ ಹೋಲಿಸಿದರೆ ಕೆಲವು ಫೀಚರ್ಸ್ ಅನ್ನು ಕಳೆದುಕೊಳ್ಳುವ ನೀರಿಕ್ಷೆಯೂ ಇದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬಗ್ಗೆ ಮಾತನಾಡುವುದಾದರೆ, ಇದು ಎರಡು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಅವುಗಳೆಂದರೆ, ಐಕ್ಯೂಬ್ ಹಾಗೂ ಐಕ್ಯೂಬ್ ಎಸ್. ಇವೆರೆಡು ಕ್ರಮವಾಗಿ ರೂ. ರೂ.1,13,721 ಮತ್ತು ರೂ.1,21,674 ದರವನ್ನು ಹೊಂದಿವೆ. ಆದರೆ, ಟಾಪ್ ಎಂದ ಮಾದರಿ ಐಕ್ಯೂಬ್ ST ಈವೆರೆಗೂ ಬಿಡುಗಡೆಗೊಂಡಿಲ್ಲ.

ಕೆಲವೇ ದಿನಗಳ ಹಿಂದೆ, ಟಿವಿಎಸ್ ಕಂಪನಿ 150,000 ಯುನಿಟ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿ, ಬಹುದೊಡ್ಡ ಸಾಧನೆಯನ್ನು ಮಾಡಿತ್ತು. ಈ ಐಕ್ಯೂಬ್ ಇ-ಸ್ಕೂಟರ್ ರೂಪಾಂತರಗಳ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಇವು 3.04 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 ಕಿಲೋಮೀಟರ್ ರೇಂಜ್ ನೀಡಲಿವೆ. 75 km/h ಟಾಪ್ ಸ್ವೀಡ್ ಹೊಂದಿವೆ. ಇವುಗಳ ಬ್ಯಾಟರಿ 0-80% ಚಾರ್ಜ್ ಆಗಲು 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, August 17, 2023, 10:43 [IST]
English summary
Tvs creon based new electric scooter teased details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+