ಟಿವಿಎಸ್‌ ಯೂರೋಗ್ರಿಪ್‌ ರೋಡ್‌ಹೌಂಡ್: ಇಲ್ಲಿದೆ ಪರ್ಫಾಮೆನ್ಸ್‌ ಟೈರ್‌ನ‌ ರಿವ್ಯೂ ವಿಡಿಯೋ

ಇತ್ತೀಚೆಗಷ್ಟೇ ಟಿವಿಎಸ್‌ ಮಾರುಕಟ್ಟೆಗೆ ತಂದಿದ್ದ ಟಿವಿಎಸ್‌ ಯೂರೋಗ್ರಿಪ್‌ ರೋಡ್‌ಹೌಂಡ್‌ ಟೈರ್‌ ವಿಶೇಷವಾಗಿ ಪರ್ಫಾಮರನ್ಸ್‌ ಅನ್ನು ಇಷ್ಟ ಪಡುವವರಿಗೋಸ್ಕರ ಸಿದ್ದಗೊಳಿಸಿರುವ ಟೈರ್ ಎಂದರೆ ತಪ್ಪಾಗಲಾರದು. ಈ ಕುರಿತಾಗಿ ಡ್ರೈವ್‌ಸ್ಪಾರ್ಕ್‌ ತಂಡ ಖುದ್ದಾಗಿ ಮಧುರೈನಲ್ಲಿರುವ ಕರಿ ಮೋಟಾರ್‌ ಸ್ಪೀಡ್‌ವೇ ನಲ್ಲಿ ಈ ಟೈರ್‌ನ ಅನುಭವವನ್ನು ಪಡೆದು ಬಂದಿದೆ.

ಕರಿ ಮೋಟಾರ್‌ ಸ್ಪೀಡ್‌ವೇನಲ್ಲಿ ನಮ್ಮ ತಂಡದಲ್ಲಿದ್ದ ವೇದಾಂತ್‌ ಮತ್ತು ಗಿರಿ ಮಣಿ ಈ ಟೈರ್‌ ಅನ್ನು ಬೇರೆ ಬೇರೆ ಬೈಕ್‌ಗಳಲ್ಲಿ ಹಾಕಿ ಪರೀಕ್ಷಿಸಿದ್ದರು. ಇದರಲ್ಲಿ ಹೋಂಡಾ, ಕವಾಸಕಿ, ಬೆನೆಲ್ಲಿ ಮತ್ತು ಹಾರ್ಲೆ ಡೇವಿಡ್‌ಸನ್‌ ಬೈಕ್‌ಗಳು ಸಹ ಸೇರಿಕೊಂಡಿದ್ದವು. ಇವೆಲ್ಲದರ ಕುರಿತು ನಮ್ಮ ತಂಡ ನಡೆಸಿದ ಪರಿಶೀಲನೆಯ ರಿವ್ಯೂವ್‌ ವಿಡಿಯೋವನ್ನು ನಾವು ಕನ್ನಡ ಡ್ರೈವ್‌ಸ್ಪಾರ್ಕ್ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ವಿಡಿಯೋ ನೋಡಿ.

ಟಿವಿಎಸ್‌ ಯೂರೋಗ್ರಿಪ್‌ ಒಂದು ಕ್ವಾಡ್ ಕಂಪೌಂಡ್‌ ರೇಡಿಯಲ್‌ ಟೈರ್‌ ವಿನ್ಯಾಸವನ್ನು ಹೊಂದಿದ್ದು ಕಾರ್ನರಿಂಗ್‌ ಮಾಡುವ ಸಮಯದಲ್ಲಿ ಹೆಚ್ಚಿನ ಗ್ರಿಪ್‌ ನೀಡಲಿದೆ. ಕ್ವಾಡ್‌ ಕಂಪೌಂಡ್‌ಗಳ ಸಹಯಾದಿಂದ ಈ ಟೈರ್‌ ಹೆಚ್ಚಿನ ರೋಡ್‌ಗ್ರಿಪ್‌, ದೀರ್ಘ ಬಾಳಿಕೆ ಮತ್ತು ಉತ್ತಮ ವಿನ್ಯಾಸವನ್ನು ಹೊಂದಿದ್ದು, ಇದು ರಸ್ತೆ ಅಥವಾ ಟ್ರ್ಯಾಕ್ ಈ ಎರಡೂ ಕಡೆ ಬೈಕ್‌ ಸವಾರಿಯ ವೇಳೆ ಕಾರ್ನರಿಂಗ್‌ ಮಾಡುವ ಬೈಕ್ ಸವಾರರಿಗೆ ವರದಾನವಾಗಿ ಪರಿಣಮಿಸಲಿದೆ ಎಂದು ತಿಳಿದು ಬಂದಿದೆ.

ಟಿವಿಎಸ್‌ ಯೂರೋಗ್ರಿಪ್‌ ರೋಡ್‌ಹೌಂಡ್‌ ಮುಂಭಾಗದಲ್ಲಿ ಒಂದು ಸೈಜ್‌ ಆಯ್ಕೆ ಮತ್ತು ಹಿಂಭಾಗದಲ್ಲಿ ಎರಡು ಸೈಜ್‌ನ ಆಯ್ಕೆಯಲ್ಲಿ ಬರುತ್ತವೆ. ಈ ಟೈರ್‌ನ ಬೆಲೆಯನ್ನು ಗಮನಿಸುವುದಾದರೆ 120/70 ಸೈಜ್‌ನ ಟೈರ್‌ಗೆ 12,999 ರೂಪಾಯಿಗಳು, 160/60 ಸೈಜ್‌ನ ಟೈರ್‌ನ ಬೆಲೆ ಸುಮಾರು 14,999 ಮತ್ತು 180/55 ಸೈಜ್‌ನ ಟೈರ್‌ ಬೆಲೆ ಸುಮಾರು 16,999 ರೂಪಾಯಿಗಳು.

TVS Eurogrip Roadhound Review

ಈ ಟೈರ್‌ ಅನ್ನು ಯಾವುದೇ ಬೈಕ್‌ನಲ್ಲಿ ಹಾಕಿ ಪರೀಕ್ಷಿಸಿದಾಗಲೂ ನಾವು ಗಮನಿಸಿದ ಪ್ರಮುಖ ಅಂಶವೇನೆಂದರೆ ಇದು ಎಲ್ಲಾ ಬೈಕ್‌ಗಳಲ್ಲೂ ಏಕ ರೀತಿಯ ಪರ್ಫಾಮೆನ್ಸ್‌ ಅನ್ನು ನೀಡಿತ್ತು ಎಂಬುದು. ಈ ಟೈರ್‌ಗಳು ಬೇಗನೇ ವಾತಾವರಣಕ್ಕೆ ಒಗ್ಗಿಕೊಂಡು ಉತ್ತಮ ರೀತಿಯಲ್ಲಿ ಪರ್ಫಾಮೆನ್ಸ್‌ ಅನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, July 27, 2023, 16:26 [IST]
English summary
Tvs eurogrip roadhound review video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+