ಭಾರೀ ವೇಗದಲ್ಲಿ ಮುನ್ನುಗುತ್ತಿದೆ ಟಿವಿಎಸ್ iQube: ಅದನ್ನು ತಡೆಯೋಕೇ ಸಾಧ್ಯವೇ..!

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಇಂಧನ ದರ ಹೆಚ್ಚಳವಾಗಿದ್ದು, ಗ್ರಾಹಕರು ನಿಧಾನವಾಗಿ ಇವಿ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಅದರಂತೆ ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ.

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ಮೋಟೊಕಾರ್ಪ್, ದೇಶೀಯ ಮಾರುಕಟ್ಟೆಯಲ್ಲಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡಿದಾಗಿನಿಂದಲ್ಲೂ ಈವರೆಗೆ ಬರೋಬ್ಬರಿ 50,000 ಯುನಿಟ್‌ ಮಾರಾಟ ಮಾಡಿ, ದಾಖಲೆ ನಿರ್ಮಾಣ ಮಾಡಿದೆ. ಈ ಬಗ್ಗೆ ಸ್ವತಃ ಕಂಪನಿಯೇ ಘೋಷಿಸಿದೆ. ದೇಶಾದ್ಯಂತ ಮಾರಾಟ ಜಾಲದಲ್ಲಿನ ವಿಸ್ತರಣೆಯಿಂದ ಈ ಮಟ್ಟದ ಪ್ರಗತಿಯನ್ನು ಸಾಧಿಸಿದೆ. ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ, ವೈಶಿಷ್ಟ್ಯಗಳು ಹಾಗೂ ರೇಂಜ್ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಪನಿ ಮಾಡಿದ್ದು, ಇದು ಈ ಸ್ಕೂಟರ್ ಖರೀದಿಸುವಂತೆ ಗ್ರಾಹಕರನ್ನು ಪ್ರೇರೇಪಿಸಿದೆ.

ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ST. ಮೊದಲ ಎರಡು ರೂಪಾಂತರಗಳು ಪ್ರಸ್ತುತ ಮಾರಾಟಕ್ಕೆ ಲಭ್ಯವಿದೆ. ಆದರೆ, iQube ST ರೂಪಾಂತರದ ಮಾರಾಟ ಇನ್ನೂ ಆರಂಭವಾಗಿಲ್ಲ. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ ರೂ.1,12,231 ಇದೆ. ಸದ್ಯ ಮಿಡ್-ಲೆವೆಲ್ ರೂಪಾಂತರವಾಗಿರುವ ಐಕ್ಯೂಬ್ ಎಸ್ ಬೆಲೆ ರೂ.1,20,184 ಇದ್ದು, ಈ ಸ್ಕೂಟರ್ 7 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಫ್ರಂಟ್ ಡಿಸ್ಕ್ ಮತ್ತು ರೇರ್ ಡ್ರಮ್ ಬ್ರೇಕ್ ಅನ್ನು ಹೊಂದಿದೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, 4.56 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಐಕ್ಯೂಬ್ ST ರೂಪಾಂತರದಲ್ಲಿ ಬಳಸಲಾಗಿದೆ. ಇದು ಸಂಪೂರ್ಣ ಚಾರ್ಜಿನಲ್ಲಿ 145 ಕಿಮೀ ರೇಂಜ್ ನೀಡಲಿದೆ. 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಎಂಟ್ರಿ ಲೆವೆಲ್ ಐಕ್ಯೂಬ್, ಮತ್ತು ಮಿಡ್-ಲೆವೆಲ್ ಐಕ್ಯೂಬ್ ಎಸ್ ರೂಪಾಂತರದಲ್ಲಿ ಬಳಸಲಾಗಿದೆ. ಇದು ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ ನೀಡಲಿದೆ.

ವಿನ್ಯಾಸ ದೃಷ್ಟಿಯಿಂದ ಐಕ್ಯೂಬ್‌ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಕರ್ಷಕ ಲುಕ್ ಹೊಂದಿದೆ ಎಂದು ಹೇಳಬಹುದು. ಇದು ಹ್ಯಾಂಡಲ್‌ಬಾರ್ ಕೌಲ್‌ನಲ್ಲಿ U- ಆಕಾರದ LED DRL ಜೊತೆಗೆ ಸಿಲ್ಕ್ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಅನ್ನು ಹೊಂದಿದೆ. ಇಷ್ಟೇ ಅಲ್ಲದೆ, ವಿಶಾಲವಾದ ಫುಟ್‌ಬೋರ್ಡ್, ದೊಡ್ಡದಾದ ಸ್ಟೋರೇಜ್ ಕಂಪಾರ್ಟ್‌ಮೆಂಟ್ ಹಾಗೂ ಲಗೇಜ್ ಹುಕ್ ಅನ್ನು ಪಡೆದಿದ್ದು, USB ಚಾರ್ಜಿಂಗ್ ಸಾಕೆಟ್ ಹೊಂದಿದ್ದು, ಇವು ಗ್ರಾಹಕರನ್ನು ಖಂಡಿತ ಆಕರ್ಷಿಸಲಿವೆ.

ಟಿವಿಎಸ್ ಐಕ್ಯೂಬ್‌ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಇದು ಫುಲ್-ಎಲ್ಇಡಿ ಲೈಟಿಂಗ್ ಜೊತೆಗೆ ಫುಲ್-ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ಜೊತೆಗೆ ರೈಡಿಂಗ್ ಅಂಕಿಅಂಶಗಳು, ರಿಮೋಟ್ ಬ್ಯಾಟರಿ ರೇಂಜ್ ಮತ್ತು ಜಿಯೋ ಫೆನ್ಸಿಂಗ್‌ನಂತಹ ವಿವಿಧ ಮಾಹಿತಿಗಳನ್ನು ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇಯನ್ನು ಕನೆಕ್ಟ್ ಮಾಡಬಹುದು. ಇನ್-ಕಾಮಿಂಗ್ ಕಾಲ್, ಮೆಸೇಜ್ ನೋಟಿಫಿಕೇಶನ್ ಅನ್ನು ಕೂಡ ತೋರಿಸುತ್ತದೆ. ಸುಲಭ ಪಾರ್ಕಿಂಗ್‌ಗಾಗಿ Q-ಪಾರ್ಕ್ ವೈಶಿಷ್ಟ್ಯವನ್ನು ಹೊಂದಿದೆ.

ಟಿವಿಎಸ್ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ತಿಂಗಳಿಗೆ 9,000 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಸಂಖ್ಯೆಯನ್ನು ದುಪಟ್ಟುಗೊಳಿಸಲು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಅಗ್ಗದ ಆವೃತ್ತಿಯನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ U546 ಎಂಬ ಕೋಡ್ ಕೊಟ್ಟಿದ್ದು, ಟಿವಿಎಸ್ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಜನವರಿ 2024 ರಿಂದ ಆರಂಭಿಸುವ ಸಾಧ್ಯತೆ ಇದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಿಂಗಳಿಗೆ 25,000 ಯುನಿಟ್ ಉತ್ಪಾದಿಸಲು ಚಿಂತನೆ ನಡೆದಿಸಿದೆ ಎಂದು ವರದಿಯಾಗಿದೆ.

ಸದ್ಯ ದೇಶದ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿ ಟಾಪ್ ಎಂಡ್ ರೂಪಾಂತರವಾದ ಟಿವಿಎಸ್ ಐಕ್ಯೂಬ್‌ ST ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಸಿಗಲಿದೆ. ಇದು 4 ಗಂಟೆ 6 ನಿಮಿಷಗಳಲ್ಲಿ ಇದರ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲಿದ್ದು, ಬರೋಬ್ಬರಿ 143 ಕಿಲೋಮೀಟರ್ ರೇಂಜ್ ನೀಡಲಿದ್ದು, 82 km/h ಟಾಪ್ ಸ್ವೀಡ್ ಹೊಂದಿದೆ. ಕಂಪನಿಯು ಈ ಸ್ಕೂಟರ್ ಆರಂಭಿಕ ಬೆಲೆಯನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ, 1.25 ಲಕ್ಷ ಪ್ರಾರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿದೆ.

Most Read Articles

Kannada
Read more on ಟಿವಿಎಸ್ tvs
English summary
Tvs iqube crosses 50000 unit sales details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X