TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 100,000 ಸೇಲ್: ಅಬ್ಬರಕ್ಕೆ ಗಡ-ಗಡ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲೂ ದೇಶೀಯ ವಾಹನ ತಯಾರಕ ಟಿವಿಎಸ್ ಕಂಪನಿಯ 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ತನ್ನದೇ ಅಭಿಮಾನಿ ಬಳಗವನ್ನು ಹೊಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮಾರಾಟದಲ್ಲಿ ಅತಿ ದೊಡ್ಡ ಮೈಲಿಗಲ್ಲನ್ನು ನಿರ್ಮಿಸಿದೆ.

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ಸ್ ವಿವರವನ್ನು ನೋಡುವುದಕ್ಕಿಂತ ಮೊದಲು ಟಿವಿಎಸ್ ಕಂಪನಿಯ ಒಟ್ಟಾರೆ ದ್ವಿಚಕ್ರ ವಾಹನ ಮಾರಾಟದ ಬಗ್ಗೆ ಒಂದಷ್ಟು ತಿಳಿಯೋಣ. ಕಳೆದ ಏಪ್ರಿಲ್ ತಿಂಗಳಲ್ಲಿ (2023) ಒಟ್ಟು 306,224 ಯುನಿಟ್ ವೆಹಿಕಲ್ ಸೇಲ್ ಮಾಡಿ, ಶೇಕಡ 4% ಪ್ರಗತಿ ಸಾಧಿಸಿದೆ. ಅದೇ 2022ರ ಏಪ್ರಿಲ್ ನಲ್ಲಿ 295,308 ಯುನಿಟ್ ಮಾರಾಟ ಮಾಡಿತ್ತು.

TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 100,000 ಸೇಲ್: ಅಬ್ಬರಕ್ಕೆ ಗಡ-ಗಡ

ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಮಾರಾಟ ಪ್ರಮಾಣದ ಬಗ್ಗೆ ನೋಡುವುದಾದರೆ, ಹೋದ ಏಪ್ರಿಲ್ (2023)ನಲ್ಲಿ 152,365 ಯುನಿಟ್ ಮೋಟಾರ್ ಸೈಕಲ್ ಸೇಲ್ ಮಾಡಿ, 10% ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷದ (2022) ಏಪ್ರಿಲ್ ತಿಂಗಳಲ್ಲಿ 139,027 ಯುನಿಟ್ ಮಾರಿತ್ತು. ಸ್ಕೂಟರ್ ಬಗ್ಗೆ ಹೇಳುವುದಾದರೆ, 2023ರ ಏಪ್ರಿಲ್ ನಲ್ಲಿ 107,496 ಯುನಿಟ್ ಸ್ಕೂಟರ್ ಮಾರಾಟ ಮಾಡಿ 5% ಪ್ರಗತಿ ಸಾಧಿಸಿದೆ (2022ರ ಏಪ್ರಿಲ್ ನಲ್ಲಿ 102,209 ಯುನಿಟ್ ಸೇಲ್ ಮಾಡಿತ್ತು).

ಇದಿಷ್ಟೇ ಅಲ್ಲದೆ, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲೂ ಹಿಂದೆ ಬಿದ್ದಿಲ್ಲ. ಇದುವರೆಗೆ 1,00,000 ಯುನಿಟ್ ಐಕ್ಯೂಬ್ ಸ್ಕೂಟರ್ ಸೇಲ್ ಮಾಡಿ, ದೊಡ್ಡ ದಾಖಲೆ ನಿರ್ಮಿಸಿದೆ. ಆದರೆ, ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು AIS156 ಹಂತ 2 ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸುತ್ತಿರುವುದರಿಂದ ಕೊಂಚ ಮಟ್ಟಿಗೆ ಮಾರಾಟದಲ್ಲಿ ಹಿಂದುಳಿದಿದೆ. ಏಪ್ರಿಲ್ (2023) ತಿಂಗಳಲ್ಲಿ 6,227 ಯುನಿಟ್ ಮಾರಿದೆ. ಈ ತಿಂಗಳು (ಮೇ) ತನ್ನ ಸೇಲ್ಸ್ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿ ಕಂಪನಿಯಿದೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ, ವೈಶಿಷ್ಟ್ಯ ಸೇರಿದಂತೆ ಇನ್ನಿತರೇ ವಿಚಾರಗಳ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಐಕ್ಯೂಬ್, ಐಕ್ಯೂಬ್ S ಹಾಗೂ ಐಕ್ಯೂಬ್ ST. ಸದ್ಯ, ಐಕ್ಯೂಬ್, ಐಕ್ಯೂಬ್ S ಸ್ಕೂಟರ್ ಗಳನ್ನು ಮಾತ್ರ ಕೊಂಡುಕೊಳ್ಳಬಹುದಾಗಿದ್ದು, ಕ್ರಮವಾಗಿ ರೂ.1,13,721 ಹಾಗೂ ರೂ.1,21,674 ದರವನ್ನು ಹೊಂದಿದೆ. ಆದರೆ, ಐಕ್ಯೂಬ್ ST ರೂಪಾಂತರ ಮಾರುಕಟ್ಟೆಗೆ ಬಂದಿಲ್ಲ.

ಟಿವಿಎಸ್ ಐಕ್ಯೂಬ್ ಹಾಗೂ ಐಕ್ಯೂಬ್ S ರೂಪಾಂತರಗಳು 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 ಕಿಲೋಮೀಟರ್ ರೇಂಜ್ ನೀಡಲಿವೆ. ಜೊತೆಗೆ 75 km/h ಟಾಪ್ ಸ್ವೀಡ್ ಹೊಂದಿದ್ದು, 4 ಗಂಟೆ 30 ನಿಮಿಷದಲ್ಲಿ ಈ ಸ್ಕೂಟರ್ ಬ್ಯಾಟರಿ 0-80% ಚಾರ್ಜ್ ಆಗುತ್ತದೆ. ಮುಂಬರಲಿವ ಟಾಪ್ ಎಂಡ್ ಐಕ್ಯೂಬ್ ST ರೂಪಾಂತರ 145 ಕಿಲೋಮೀಟರ್ ರೇಂಜ್ ನೀಡಲಿದೆ.

ನೂತನ ಟಿವಿಎಸ್ ಐಕ್ಯೂಬ್ ಸ್ಕೂಟರ್ ಕೂಡ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಫುಲ್-ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೈಡಿಂಗ್ ಅಂಕಿಅಂಶಗಳು, ರಿಮೋಟ್ ಬ್ಯಾಟರಿ ರೇಂಜ್ ನಂತಹ ಹಲವು ಮಾಹಿತಿ ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇಯನ್ನು ಕನೆಕ್ಟ್ ಮಾಡಬಹುದು. ಈ ಸ್ಕೂಟರ್, 7 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಒಟ್ಟಾರೆ, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಗಮನಿಸಿದಾಗ ಕಂಪನಿಯು ಮುಂಬರುವ ದಿನಗಳಲ್ಲಿ ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಪೈಟೋಟಿ ನೀಡುವುದು ಖಚಿತ ಎಂದು ಹೇಳಬಹುದು. ಜೊತೆಗೆ ಕೆಲವೇ ತಿಂಗಳಲ್ಲಿ ಐಕ್ಯೂಬ್ ST ಬಿಡುಗಡೆಯಾಗಲಿದ್ದು, ಅದರಿಂದ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಕಂಪನಿಗೆ ಸಾದ್ಯವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

Article Published On: Wednesday, May 3, 2023, 15:39 [IST]
English summary
Tvs iqube electric achieves sales milestone 1 lack units
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+