TVS iQube: ಭಾರತೀಯರಿಗೆ ಟಿವಿಎಸ್ ಐಕ್ಯೂಬ್ ಅಂದ್ರೆ ಪ್ರೀತಿ, ಕಂಪನಿಯ ಮಾರಾಟ ಹೆಚ್ಚಾಯ್ತು!

ಟಿವಿಎಸ್ ಮೋಟಾರ್ (TVS Motor), ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಳೆದ ತಿಂಗಳು (ಸೆಪ್ಟೆಂಬರ್) ತನ್ನ ಒಟ್ಟಾರೆ ಮಾರಾಟದಲ್ಲಿ ಶೇಕಡ 6% ಪ್ರಗತಿ ಸಾಧಿಸಿದ್ದು, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ ನಲ್ಲಿಯೂ 4 ಪಟ್ಟು ಬೆಳೆವಣಿಗೆ ಕಂಡಿದೆ.

ಟಿವಿಎಸ್ ಕಂಪನಿಯು ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಿದ 3.79 ಲಕ್ಷ ಯುನಿಟ್‌ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಕಳೆದ ತಿಂಗಳು (2023) 4.02 ಲಕ್ಷ ಬೈಕ್ ಮತ್ತು ಸ್ಕೂಟರ್‌ಗಳನ್ನು ಮಾರಿದೆ. ಅದರಲ್ಲಿ 3.86 ಲಕ್ಷ ಯುನಿಟ್‌ ದ್ವಿಚಕ್ರ ವಾಹನಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಸೇಲ್ ಮಾಡಿದ್ದು, ಉಳಿದವುಗಳನ್ನು ರಫ್ತು ಮಾಡಿದೆ. ಅಲ್ಲಿಯೂ ಶೇಕಡ 8% ಬೆಳವಣಿಗೆ ಸಾಧಿಸಿದೆ.

TVS iQube: ಭಾರತೀಯರಿಗೆ ಟಿವಿಎಸ್ ಐಕ್ಯೂಬ್ ಅಂದ್ರೆ ಪ್ರೀತಿ, ಕಂಪನಿಯ ಮಾರಾಟ ಹೆಚ್ಚಾಯ್ತು!

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ ಮೋಟಾರ್‌ಸೈಕಲ್‌ ವಿಭಾಗದಲ್ಲಿ ಟಿವಿಎಸ್, ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಕಳೆದ ತಿಂಗಳು 1.86 ಲಕ್ಷ ಯುನಿಟ್ ಬೈಕ್ ಗಳನ್ನೂ ಮಾರಾಟ ಮಾಡಿದೆ. ಇತ್ತೀಚೆಗೆ, ಮೋಟಾರ್‌ಸೈಕಲ್‌ ಲೈನ್ಅಪ್ ಬಲಪಡಿಸಲು ಕಂಪನಿಯು ಅಪಾಚೆ ಆರ್‌ಟಿಆರ್ 310 ಬೈಕ್ ಲಾಂಚ್ ಮಾಡಿತ್ತು. ಇದು, ರೂ.2.43 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.

ಟಿವಿಎಸ್ ಮೋಟರ್‌, ಸ್ಕೂಟರ್‌ ಮಾರಾಟದಲ್ಲಿಯೂ ಒಳ್ಳೆಯ ಪ್ರಗತಿಯನ್ನು ಕಂಡಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು 1.55 ಲಕ್ಷ ಯುನಿಟ್‌ ಸೇಲ್ ಮಾಡಿ, ಶೇಕಡ 8% ಅಭಿವೃದ್ಧಿ ಸಾಧಿಸಿದೆ. ಸ್ಕೂಟರ್ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಕಂಪನಿಯು ರೂ.2.50 ಲಕ್ಷ ಎಕ್ಸ್ ಶೋರೂಂ ಬೆಲೆಗೆ 'ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಲಾಂಜ್ ಬಿಡುಗಡೆ ಮಾಡಿತ್ತು. ಇದು, 140 ಕಿಮೀ ಕ್ರಮಿಸುವ ಸಾಮರ್ಥ್ಯ ಪಡೆದಿದೆ.

TVS iQube: ಭಾರತೀಯರಿಗೆ ಟಿವಿಎಸ್ ಐಕ್ಯೂಬ್ ಅಂದ್ರೆ ಪ್ರೀತಿ, ಕಂಪನಿಯ ಮಾರಾಟ ಹೆಚ್ಚಾಯ್ತು!

ಸದ್ಯ, ಕಂಪನಿಯೂ ದೇಶದಲ್ಲಿ ಯಶಸ್ವಿಯಾಗಿ ಮಾರಾಟ ಮಾಡುತ್ತಿರುವ ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್ ಸೇಲ್ಸ್ ವಿವರವನ್ನು ನೋಡುವುದಾದರೆ, ಕಳೆದ ವರ್ಷದ ಸೆಪ್ಟೆಂಬರ್‌ಗೆ (4,923 ಯುನಿಟ್‌) ಹೋಲಿಸಿದರೆ, ಈ ವರ್ಷ 20,356 ಯುನಿಟ್‌ ಮಾರಾಟ ಮಾಡಿ, ನಾಲ್ಕು ಪಟ್ಟು ಬೆಳವಣಿಗೆ ಸಾಧಿಸಿದೆ. ಈ ಮೂಲಕ ಟಿವಿಎಸ್ ಐಕ್ಯೂಬ್ ಭಾರತೀಯರ ನೆಚ್ಚಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿ ಹೊರಹೊಮ್ಮಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಎರಡು ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ಐಕ್ಯೂಬ್ ಹಾಗೂ ಐಕ್ಯೂಬ್ ಎಸ್. ಈ ಸ್ಕೂಟರ್, ರೂ.1,13 ಲಕ್ಷ ಪ್ರಾರಂಭಿಕ ಬೆಲೆಯನ್ನು ಹೊಂದಿದ್ದು, ರಾಜ್ಯದಿಂದ ರಾಜ್ಯಕ್ಕೆ ಅದು ಬೇರೆಯಾಗುತ್ತದೆ. ಇದರಲ್ಲಿ 3.04 kWh ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 100 ಕಿಲೋಮೀಟರ್ ರೇಂಜ್ ನೀಡುತ್ತದೆ.

ಐಕ್ಯೂಬ್ ಇ- ಸ್ಕೂಟರ್, 75 km/h ಟಾಪ್ ಸ್ವೀಡ್ ಹೊಂದಿದ್ದು, ಇದರಲ್ಲಿರುವ ಬ್ಯಾಟರಿ, ಶೇಕಡ 0 - 80% ಚಾರ್ಜ್ ಆಗಲು 4.30 ನಿಮಿಷಗಳು ಸಾಕು. ಫುಲ್ - ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೈಡಿಂಗ್ ಒಳಗೊಂಡಂತೆ ಹಲವು ವಿವರಗಳಿಗಾಗಿ ಬ್ಲೂಟೂತ್ ಮೂಲಕ ಸ್ಮಾರ್ಟ್‌ ಫೋನ್‌ನೊಂದಿಗೆ ಡಿಸ್‌ಪ್ಲೇ ಸಂಪರ್ಕಿತಗೊಳಿಸಬಹುದು.

ಇನ್ನು, ಒಟ್ಟಾರೆ ಮಾರಾಟದಲ್ಲಿ ಟಿವಿಎಸ್ ಮೋಟಾರ್ ಕಳೆದ ತಿಂಗಳು ಉತ್ತಮವಾಗಿಯೇ ಪ್ರಗತಿ ಸಾಧಿಸಿದೆ. ಅದರಲ್ಲಿಯೂ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗೆ ದಿನ ದಿನಕ್ಕೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತಿರುವುದು ಕಂಪನಿಗೆ ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಗಳು ಬರಲಿದ್ದು, ಟಿವಿಎಸ್ ಟೂ ವೀಲರ್ ಗಳಿಗೆ ಹೆಚ್ಚಿನ ಡಿಮ್ಯಾಂಡ್ ಬರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 3, 2023, 10:52 [IST]
English summary
Tvs iqube sales 4 times increase september details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+