TVS Jupiter EV ಮಾಹಿತಿ ಸೋರಿಕೆ... ಆಕ್ಟಿವಾ ಇವಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಎಂಟ್ರಿ
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ವೇಗಗೊಳ್ಳುತ್ತಿದೆ. ಭವಿಷ್ಯದಲ್ಲಿ ಇಂಧನ ಚಾಲಿತ ವಾಹನಗಳು ಕಣ್ಮರೆಯಾದರು ಆಶ್ಚರ್ಯವೇನಿಲ್ಲ. ಸದ್ಯ ಹೊಸ ಕಂಪನಿಗಳಾದ ಓಲಾ, ಎಥರ್‌ನಂತಹ ಬ್ರಾಂಡ್‌ಗಳು ಎಲೆಕ್ಟ್ರಿಕ್ ವಿಭಾಗವನ್ನು ಆಳುತ್ತಿವೆ. ಆದರೆ ದಶಕಗಳ ಇತಿಹಾಸವಿರುವ ಬ್ರಾಂಡ್‌ಗಳು ಇವಿ ವಿಭಾಗದಲ್ಲಿ ಗುರ್ತಿಸಿಕೊಳ್ಳಲು ತುಸು ಪರದಾಡುತ್ತಿವೆ.
ಸದ್ಯ ಟಿವಿಎಸ್, ಬಜಾಜ್ ಮತ್ತು ಹೀರೋ ಮೋಟೋಕಾರ್ಪ್‌ನಂತಹ ಪ್ರಮುಖ ದ್ವಿಚಕ್ರ ವಾಹನ ಕಂಪನಿಗಳು ಪ್ರಸ್ತುತ ತಮ್ಮ ಎಲೆಕ್ಟ್ರಿಕ್ ಪೋರ್ಟ್‌ಫೋಲಿಯೊದಲ್ಲಿ ಒಂದೊಂದು ಉತ್ಪನ್ನವನ್ನು ಹೊಂದಿವೆ. ಇವು ಓಲಾ, ಎಥರ್‌ನಂತಹ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಟೆಕ್ ಹಾಗೂ ರೇಂಜ್‌ನಲ್ಲಿ ಹಿಂದಿವೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸಿದರೆ ತೀರ್ವ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಇದನ್ನು ಈಗಾಗಲೇ ಗಂಭಿರವಾಗಿ ಪರಿಗಣಿಸಿರುವ ಹೋಂಡಾ ಕಂಪನಿಯು ಆಕ್ಟೀವಾ ಇವಿಯನ್ನು ತರಲು ಯೋಜನೆ ರೂಪಿಸಿಕೊಂಡಿದೆ.

TVS ಕೂಡ ತನ್ನ ಐಕ್ಯೂಬ್ ಇವಿಯನ್ನು ಹೊರತುಪಡಿಸಿ, ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತರಲು ಸಿದ್ಧವಾಗಿರುವ ಕುರಿತು ಮಾಹಿತಿ ಸೋರಿಕೆಯಾಗಿದೆ. 5kW ನಿಂದ 25kW ವ್ಯಾಪ್ತಿಯಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ನೋಡುತ್ತಿದೆ. ಈ ಹೊಸ ಉತ್ಪನ್ನಗಳನ್ನು ಮುಂದಿನ 18 ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು. ಟಿವಿಎಸ್ ಯೋಜನೆಗಳ ಕುರಿತು ಕಂಪನಿಯ ಸಿಇಒ ಕೆಎನ್ ರಾಧಾಕೃಷ್ಣನ್ ಅವರು ಇತ್ತೀಚಿನ ಸಮ್ಮೇಳನದಲ್ಲಿ ಬಹಿರಂಗಪಡಿಸಿದ್ದರು.
ಜೊತೆಗೆ ಟಿವಿಎಸ್ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹೊಸ ಪವರ್ ಟ್ರೇನ್ ಪಡೆಯಲಿವೆ ಎಂಬುದು ಕಂಪನಿಯು ಇತ್ತೀಚೆಗೆ ಸಲ್ಲಿಸಿದ ಪೇಟೆಂಟ್‌ನಿಂದ ಸ್ಪಷ್ಟವಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್‌ನ ಜನಪ್ರಿಯ ಜುಪಿಟರ್ ಎಂದು ಹೇಳಲಾಗುತ್ತಿದೆ. ಇದು ಮುಂದಿನ ವರ್ಷ ಆಕ್ಟಿವಾ ಎಲೆಕ್ಟ್ರಿಕ್‌ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಇಳಿಯಲಿದೆ. ಟಿವಿಎಸ್ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು 5kW ನಿಂದ 25kW ವ್ಯಾಪ್ತಿಯಲ್ಲಿರುವುದರಿಂದ, ಹೊಸ ಮಿಡ್-ಮೌಂಟೆಡ್ ಮೋಟರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಹೆಚ್ಚಿನ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಧ್ಯದಲ್ಲಿ ಜೋಡಿಸಲಾದ ಮೋಟಾರ್‌ಗಳೊಂದಿಗೆ ಬರುತ್ತವೆ. TVS ಬಹುಶಃ ಈ ಹೊಸ ಪವರ್‌ಟ್ರೇನ್‌ನೊಂದಿಗೆ ಹೊಸ ಶ್ರೇಣಿಯ ಕಾರ್ಯಕ್ಷಮತೆ-ಆಧಾರಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತರಲು ನೋಡುತ್ತಿದೆ. ಎಥರ್ 450X ಮತ್ತು Ola S1 Pro ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೇ ರೀತಿಯ ವ್ಯವಸ್ಥೆಗಳನ್ನು ಬಳಸುತ್ತವೆ. ಇವು ವೇಗ, ರೇಂಜ್ ಹಾಗೂ ಪರ್ಫಾಮೆನ್ಸ್‌ನಲ್ಲಿ ಈಗಾಗಲೇ ಇವಿ ವಿಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ.
ಟಿವಿಎಸ್ iQube ಕೇವಲ 4.2 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ತಲುಪುತ್ತದೆ. ಇದಕ್ಕಾಗಿ ಕಂಪನಿಯು 4.4 kW ಸೆಟಪ್ ಅನ್ನು ಹೊಂದಿದೆ. ಆದರೆ ಈಗ TVS Jupiter EV scooter ಜೊತೆಗೆ ಹೊಸ ಮಿಡ್-ಮೌಂಟೆಡ್ ಮೋಟರ್ ಒಟ್ಟಾರೆ ಉತ್ತಮ ಸವಾರಿ ಅನುಭವವನ್ನು ನೀಡಲಿದೆ. ಇದು ಮುಂಬರುವ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಆಗಲಿದೆ. ಇದನ್ನು ಜನವರಿ 2024 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಪೆಟ್ರೋಲ್ ಸ್ಕೂಟರ್ ವಿಭಾಗದಲ್ಲಿ, ಆಕ್ಟಿವಾ ಮತ್ತು ಜುಪಿಟರ್ ಭಾರತದಲ್ಲಿ ಮಾರಾಟವಾಗುವ ಟಾಪ್ 2 ಸ್ಕೂಟರ್‌ಗಳಾಗಿವೆ. ಇವೆರಡು ಇವಿ ವಿಭಾಗದಲ್ಲೂ ಪೈಪೋಟಿ ಮುಂದುವರಿಯುವ ಸಾಧ್ಯತೆಯಿದೆ. ತನ್ನ ಹೊಸ ಎಲೆಕ್ಟ್ರಿಕ್ ಮಾದರಿಗಳೊಂದಿಗೆ, ಟಿವಿಎಸ್ ವ್ಯಾಪಕ ಗ್ರಾಹಕರ ನೆಲೆಯನ್ನು ಗುರಿಯಾಗಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ, iQube ಈಗಾಗಲೇ ದೇಶದ ಟಾಪ್ 10 ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳ ಪಟ್ಟಿಯನ್ನು ಪ್ರವೇಶಿಸಿದೆ. ಇನ್ನು ಹೊಸ ಜುಪಿಟರ್ ಇವಿ ಕೂಡ ಟಿವಿಎಸ್‌ನ ಮಾರಾಟಕ್ಕೆ ಸಹಕರಿಸುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications