TVS: ಹೊಸ ವೈಶಿಷ್ಟ್ಯಗಳೊಂದಿಗೆ ಟಿವಿಎಸ್ ಜುಪಿಟರ್ ಡ್ರಮ್ ರೂಪಾಂತರ ಬಿಡುಗಡೆ.. ವಿಶೇಷತೆಗಳೇನು?

ಭಾರತದಲ್ಲಿ ಟಿವಿಎಸ್ (TVS) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇದೀಗ, ಬ್ಲೂಟೂತ್ ಕನೆಕ್ಟಿವಿಟಿಯಿರುವ ಡಿಜಿಟಲ್ ಕ್ಲಸ್ಟರ್ ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಪಡೆದು, ನವೀಕರಣಗೊಂಡಿರುವ ಜುಪಿಟರ್ ಝಡ್ಎಕ್ಸ್ ಡ್ರಮ್ ರೂಪಾಂತರವನ್ನು ಬಿಡುಗಡೆಗೊಳಿಸಿದೆ. ಇದು, ಸ್ಟಾರ್ಲೈಟ್ ಬ್ಲೂ, ಆಲಿವ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಟಿವಿಎಸ್ ಕಂಪನಿಯು 'Smart Xonnect' ವೈಶಿಷ್ಟ್ಯದೊಂದಿಗೆ ಜುಪಿಟರ್ ಡಿಸ್ಕ್ ರೂಪಾಂತರ ಮಾರಾಟದಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ಬಳಿಕ, ಡ್ರಮ್ ರೂಪಾಂತರದಲ್ಲಿ ಈ ಫೀಚರ್ ನೀಡಲು ನಿರ್ಧರಿಸಿದೆ. ಇದು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಎಸ್‌ಎಂಎಸ್ ಮತ್ತು ಕಾಲ್ ಅಲರ್ಟ್, ವಾಯ್ಸ್ ಅಸ್ಸಿಸ್ಟನ್ಸ್ ಸೇರಿದಂತೆ ವಿವಿಧ ಮಾಹಿತಿಯನ್ನು ಸವಾರನಿಗೆ ಒದಗಿಸುತ್ತದೆ.

TVS: ಹೊಸ ವೈಶಿಷ್ಟ್ಯಗಳೊಂದಿಗೆ ಟಿವಿಎಸ್ ಜುಪಿಟರ್ ಡ್ರಮ್ ರೂಪಾಂತರ ಬಿಡುಗಡೆ.. ವಿಶೇಷತೆಗಳೇನು?

ಇದರೊಟ್ಟಿಗೆ ಟಿವಿಎಸ್ ಕಂಪನಿಯು ಮೊಬೈಲ್ ಚಾರ್ಜರ್ ಸಾಕೆಟ್ ಅನ್ನು ಕೊಟ್ಟಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಭಾರತದ ಮಾರುಕಟ್ಟೆಯಲ್ಲಿ ಟಿವಿಎಸ್ ಜುಪಿಟರ್ ಝಡ್ಎಕ್ಸ್ ಡ್ರಮ್ ರೂಪಾಂತರ ರೂ. 84,468 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ, ಆಸಕ್ತ ಗ್ರಾಹಕರು, ಸಮೀಪದ ಡೀಲರ್‌ ಶಿಪ್‌ಗೆ ಭೇಟಿ ನೀಡಿ ಕೊಂಡುಕೊಳ್ಳಬಹುದು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಿವಿಎಸ್ ಜುಪಿಟರ್ ಡ್ರಮ್ ಸ್ಕೂಟರ್, ಬೆಂಗಳೂರಿನಲ್ಲಿ ರೂ.86,505 ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದರ 124.8 ಸಿಸಿ ಎಂಜಿನ್ 8.15 PS ಗರಿಷ್ಠ ಪವರ್ ಹಾಗೂ 10.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 57.27 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಪ್ರಿಸ್ಟಿನ್ ವೈಟ್, ಟೈಟಾನಿಯಂ ಗ್ರೇ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

TVS: ಹೊಸ ವೈಶಿಷ್ಟ್ಯಗಳೊಂದಿಗೆ ಟಿವಿಎಸ್ ಜುಪಿಟರ್ ಡ್ರಮ್ ರೂಪಾಂತರ ಬಿಡುಗಡೆ.. ವಿಶೇಷತೆಗಳೇನು?

ಟಿವಿಎಸ್ ಜುಪಿಟರ್ ಝಡ್ಎಕ್ಸ್ SmartXonnect ರೂಪಾಂತರ ರೂ.91,441 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 109.7 ಸಿಸಿ ಎಂಜಿನ್ 7.88 PS ಗರಿಷ್ಠ ಪವರ್ ಹಾಗೂ 8.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 50 kmpl ಮೈಲೇಜ್ ನೀಡುತ್ತದೆ. ಜೊತೆಗೆ ಆಕರ್ಷಕ ಬಣ್ಣದ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಈ ಸ್ಕೂಟರ್ ಡಿಜಿಟಲ್ ಕ್ಲಸ್ಟರ್, ಕಿಕ್ ಮತ್ತು ಸೆಲ್ಫ್ ಸ್ಟಾರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇದರೊಟ್ಟಿಗೆ ಮುಂಭಾಗ 90/90 - 12, ಹಿಂಭಾಗ 90/90 - 12 ಅಳತೆಯ ಟ್ಯೂಬ್ ಲೆಸ್ ಟೈಯರ್ಸ್ ಆಯ್ಕೆಯನ್ನು ಒಳಗೊಂಡಿದೆ.

ಟಿವಿಎಸ್ ಮಾರಾಟ ಅಂಕಿಅಂಶವನ್ನು ನೋಡುವುದಾದರೆ, ಕಂಪನಿಯು ಅಂತರರಾಷ್ಟ್ರೀಯ ಹಾಗೂ ಭಾರತದ ಮಾರುಕಟ್ಟೆಯಲ್ಲಿ ಜುಲೈ ತಿಂಗಳು, ಒಟ್ಟು 3,25,977 ಯುನಿಟ್ (ದ್ವಿಚಕ್ರ ಹಾಗೂ ತ್ರಿಚಕ್ರ) ವಾಹನ ಮಾರಾಟ ಮಾಡಿದೆ. 2022ರ ಇದೇ ಅವಧಿಗೆ (3,14,639 ಯುನಿಟ್) ಸೇಲ್ಸ್ ಗೆ ಹೋಲಿಸಿದರೆ ಟಿವಿಎಸ್ ಶೇಕಡ 4% ಪ್ರಗತಿ ಕಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ರಫ್ತು ಕೂಡ ಕುಂಠಿತವಾಗಿದ್ದು, ಕೇವಲ 89,213 ಯುನಿಟ್ ವಾಹನ ಎಕ್ಸ್ಪೋರ್ಟ್ ಮಾಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಮಾರಾಟದಲ್ಲೂ ಉತ್ತಮ ಸಾಧನೆಯನ್ನು ಮಾಡಿದ್ದು, ಕ್ರಮವಾಗಿ, 153,942 ಹಾಗೂ 121,941 ಯುನಿಟ್ ಸೇಲ್ ಮಾಡಿದೆ. ಇನ್ನು, ಕಂಪನಿಯು ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲೂ ಒಳ್ಳೆಯ ಪ್ರಗತಿ ಕಂಡಿದ್ದು, ಹೋದ ತಿಂಗಳು 13,306 ಯುನಿಟ್‌ ಐಕ್ಯೂಬ್ ಸ್ಕೂಟರ್ ಮಾರಾಟ ಮಾಡಿ, ಓಲಾ ಸೇಲ್ಸ್ ಸಮೀಪಕ್ಕೆ ಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, August 3, 2023, 23:01 [IST]
English summary
Tvs jupiter zx drum connected tech launched details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+