TVS Sales: ಮಾರ್ಚ್ ತಿಂಗಳ ಮಾರಾಟದಲ್ಲಿ ಟಿವಿಎಸ್ ದಾಖಲೆ ನಿರ್ಮಾಣ

TVS ಮೋಟಾರ್ ಕಂಪನಿಯು ತನ್ನ ಹೊಸ ಉತ್ಪನ್ನಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ವಿದೇಶಿ ರಫ್ತನ್ನು ಒಳಗೊಂಡಂತೆ ಒಟ್ಟಾರೆ ಉತ್ತಮ ಬೆಳವಣಿಗೆ ಸಾಧಿಸಿದೆ. ಮಾರ್ಚ್ 2022 ರಲ್ಲಿ ಮಾರಾಟವಾಗಿದ್ದ 3,07,954 ಯುನಿಟ್‌ಗಳಿಗಿಂತ ಈಗ ಮಾರ್ಚ್ 2023 ರಲ್ಲಿ 3,17,152 ಯೂನಿಟ್‌ಗಳಿಗೆ ಏರಿಕೆಯಾಗುವ ಮೂಲಕ ಶೇ3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ದ್ವಿಚಕ್ರ ವಾಹನ:
ಮಾರ್ಚ್ 2022 ರಲ್ಲಿ 2,92,918 ಯುನಿಟ್‌ಗಳು ಮಾರಾಟವಾಗಿದ್ದರೇ, ಮಾರ್ಚ್ 2023 ರಲ್ಲಿ 3,07,559 ಯುನಿಟ್‌ಗಳು ಮಾರಾಟವಾಗಿದ್ದು, ಒಟ್ಟು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ5 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಹಾಗೆಯೇ ದೇಶೀಯ ದ್ವಿಚಕ್ರ ವಾಹನ ಮಾರಾಟವು ಶೇ 22 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮೋಟಾರ್‌ಸೈಕಲ್ ವಿಭಾಗದಲ್ಲಿ ಮಾರ್ಚ್ 2022 ರಲ್ಲಿ ಮಾರಾಟವಾದ 1,60,522 ಯುನಿಟ್‌ಗಳಿಗೆ ಹೋಲಿಸಿದರೆ ಮಾರ್ಚ್ 2023 ರಲ್ಲಿ 141,250 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ.

TVS Sales: ಮಾರ್ಚ್ ತಿಂಗಳ ಮಾರಾಟದಲ್ಲಿ ಟಿವಿಎಸ್ ದಾಖಲೆ ನಿರ್ಮಾಣ

ಸ್ಕೂಟರ್ ಮಾರಾಟವು ಶೇ5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮಾರ್ಚ್ 2022 ರಲ್ಲಿ ಮಾರಾಟವಾದ 94,747 ಯುನಿಟ್‌ಗಳಿಂದ 2023 ಮಾರ್ಚ್‌ನಲ್ಲಿ 1,28,817 ಕ್ಕೆ ಏರಿಕೆಯಾಗಿದೆ. TVS iQube ಎಲೆಕ್ಟ್ರಿಕ್ ಸ್ಕೂಟರ್ ಮಾರ್ಚ್ 2022 ರಲ್ಲಿ ಮಾರಾಟವಾದ 1,799 ಯುನಿಟ್‌ಗಳ ಮಾರಾಟಕ್ಕೆ ಹೋಲಿಸಿದರೆ ಮಾರ್ಚ್ 2023 ರಲ್ಲಿ 15,364 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಕಂಪನಿಯ ಒಟ್ಟು ರಫ್ತುಗಳು ಮಾರ್ಚ್ 2022 ರಲ್ಲಿ 109,724 ಯುನಿಟ್‌ಗಳಾಗಿದ್ದರೆ ಮಾರ್ಚ್ 2023 ರಲ್ಲಿ 75,037 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ.

ಕಂಪನಿಯ ದ್ವಿಚಕ್ರ ವಾಹನ ರಫ್ತುಗಳು ಮಾರ್ಚ್ 2023 ರಲ್ಲಿ 66,779 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದ್ದರೇ, ಮಾರ್ಚ್ 2022 ರಲ್ಲಿ 95,962 ಯುನಿಟ್‌ಗಳು ರಫ್ತಾಗಿದ್ದವು. ಕಂಪನಿಯ ತ್ರಿಚಕ್ರ ವಾಹನಗಳ ಮಾರಾಟವು ಮಾರ್ಚ್ 2022 ರಲ್ಲಿ 15,036 ಮಾರಾಟವಾಗಿದ್ದ ಯುನಿಟ್‌ಗಳಿಗೆ ಹೋಲಿಸಿದರೆ ಮಾರ್ಚ್ 2023 ರಲ್ಲಿ 9,593 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿವೆ. ಒಟ್ಟಾರೆ ನೋಡಿಕೊಂಡರೆ ಟಿವಿಎಸ್ ಕಂಪನಿಯು ತನ್ನ ವಾರ್ಷಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಬಹುದು.

TVS Sales: ಮಾರ್ಚ್ ತಿಂಗಳ ಮಾರಾಟದಲ್ಲಿ ಟಿವಿಎಸ್ ದಾಖಲೆ ನಿರ್ಮಾಣ

ನಾಲ್ಕನೇ ತ್ರೈಮಾಸಿಕ ಮಾರಾಟದ ಕಾರ್ಯಕ್ಷಮತೆ FY 2022-23:
2022-23 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ, ಕಂಪನಿಯ ದ್ವಿಚಕ್ರ ವಾಹನಗಳು 8.40 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. 2021-22 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 8.15 ಲಕ್ಷ ಯುನಿಟ್‌ಗಳು ನೋಂದಾಯಿಸಲ್ಪಟ್ಟಿವೆ. 2021-22 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 0.42 ಯುನಿಟ್‌ಗಳ ವಿರುದ್ಧ 2022-23 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ತ್ರಿಚಕ್ರ ವಾಹನವು 0.29 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ.

ಆರ್ಥಿಕ ವರ್ಷ 21-22ರ ಮೂರನೇ ತ್ರೈಮಾಸಿಕದಲ್ಲಿ 3.15 ಲಕ್ಷ ಯುನಿಟ್‌ಗಳಿಗೆ ಹೋಲಿಸಿದರೆ ಒಟ್ಟು ರಫ್ತುಗಳು ಪ್ರಸಕ್ತ ತ್ರೈಮಾಸಿಕದಲ್ಲಿ 1.85 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿವೆ. ಹೊಸೂರು, ಮೈಸೂರು ಮತ್ತು ನಲಗಢ ಮತ್ತು ಇಂಡೋನೇಷ್ಯಾದ ಕರವಾಂಗ್‌ನಲ್ಲಿ ನಾಲ್ಕು ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳೊಂದಿಗೆ ಸಸ್ಟೈನಬಲ್ ಮೊಬಿಲಿಟಿ ಮೂಲಕ ಕಂಪನಿ ಪ್ರಗತಿ ಸಾಧಿಸುತ್ತಿದೆ. ವೈಯಕ್ತಿಕ ಇ-ಮೊಬಿಲಿಟಿ ಜಾಗದಲ್ಲಿ ಟಿವಿಎಸ್ ಅಂಗಸಂಸ್ಥೆಗಳಾದ, ಸ್ವಿಸ್ ಇ-ಮೊಬಿಲಿಟಿ ಗ್ರೂಪ್ (SEMG) ಮತ್ತು EGO ಮೂವ್‌ಮೆಂಟ್ ಸ್ವಿಟ್ಜರ್ಲೆಂಡ್‌ನ ಇ-ಬೈಕ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ.

TVS Sales: ಮಾರ್ಚ್ ತಿಂಗಳ ಮಾರಾಟದಲ್ಲಿ ಟಿವಿಎಸ್ ದಾಖಲೆ ನಿರ್ಮಾಣ

ದೇಶದಲ್ಲಿ ಟಿವಿಎಸ್ ಮೋಟಾರ್‌ ಸೈಕಲ್‌ಗಳು ಉತ್ತಮ ಬೇಡಿಕೆ ಪಡೆದಿವೆ. ಮುಖ್ಯವಾಗಿ ಸ್ಕೂಟರ್ ವಿಭಾದಲ್ಲಿ ಟಿವಿಎಸ್ ಜುಪಿಟರ್ ಪ್ರಮುಖ ಮಾರಾಟಗಾರನಾಗಿ ನಿಂತಿದೆ. ಹಾಗೆಯೇ ಟಿವಿಎಸ್ ಆಟೋಗಳು ಕೂಡ ಇತ್ತೀಚೆಗೆ ಉತ್ತಮವಾಗಿ ಮಾರಾಟವಾಗುತ್ತಿವೆ. ಇನ್ನು ಕಂಪನಿಯು ಜುಪಿಟರ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಮಾದರಿಯಾಗಿ ಪರಿಚಯಿಸುವ ಪ್ರಯತ್ನದಲ್ಲಿದೆ ಎಂದು ಇತ್ತಿಚೆಗೆ ವರದಿಯಾಗಿತ್ತು. ಮುಂದಿನ ದಿನಗಳಲ್ಲಿ ಇದು ಹೋಂಡಾ ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Sunday, April 2, 2023, 14:00 [IST]
English summary
Tvs march 2023 sales report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+