TVS ಮೆಟ್ರೋ ಪ್ಲಸ್ 110 ಬಿಡುಗಡೆ: ಸ್ಟಾರ್ ಸಿಟಿ ಪ್ಲಸ್ ಬೈಕ್‌ಗೆ ಹೋಲುತ್ತೆ!

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್ ರೆಡಿ ಮಾಡಿರುವ ಸ್ಕೂಟರ್ ಹಾಗೂ ಬೈಕ್‌ಗಳು ಲಕ್ಷಾಂತರ ಗ್ರಾಹಕರನ್ನು ಸೆಳೆದಿವೆ. ತನ್ನ ಅತ್ಯುನ್ನತ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಟಿವಿಎಸ್, ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿದೆ. ಅದರಲ್ಲಿ ಬಾಂಗ್ಲಾದೇಶವು ಪ್ರಮುಖವಾಗಿದೆ.

ಟಿವಿಎಸ್ ಕಂಪನಿಯು, ನವೀಕರಿಸಿದ ಮೆಟ್ರೋ ಪ್ಲಸ್ 110 ಅನ್ನು ಬಾಂಗ್ಲಾದೇಶದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮೆಟ್ರೋ ಪ್ಲಸ್‌ನ ಅಪ್ಡೇಟೆಡ್ ಸ್ಟೈಲಿಂಗ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಹೊಸ ತಲೆಮಾರಿನ ಖರೀದಿದಾರರನ್ನು ಆಕರ್ಷಿಸಬಹುದು. ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಈ ಬೈಕ್ ಪೂರೈಸಲಿದೆ ಎಂದು ಅಂದಾಜಿಸಲಾಗಿದೆ. ನೂತನ ಮೆಟ್ರೋ ಪ್ಲಸ್‌ ಭಾರತದ ಮಾರುಕಟ್ಟೆಯಲ್ಲಿ ಸೇಲ್ ಆಗುತ್ತಿರುವ ಸ್ಟಾರ್ ಸಿಟಿ ಪ್ಲಸ್ ಬೈಕ್‌ಗೆ ಬಹುತೇಕ ಹೋಲುತ್ತದೆ. ಇಲ್ಲಿ ಎರಡು ಬೈಕ್‌ಗಳ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.

TVS ಮೆಟ್ರೋ ಪ್ಲಸ್ 110 ಬಿಡುಗಡೆ: ಸ್ಟಾರ್ ಸಿಟಿ ಪ್ಲಸ್ ಬೈಕ್‌ಗೆ ಹೋಲುತ್ತೆ!

ಹೊಸ ಮೆಟ್ರೋ ಪ್ಲಸ್, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಬೈಕ್‌ನ ರೀ-ಬ್ಯಾಡ್ಜ್ ಆವೃತ್ತಿಯಾಗಿದೆ ಎಂದು ಹೇಳಬಹುದು. ಇದು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡ್ಯುಯಲ್-ಟೋನ್ ಕಲರ್ ಸೇರಿದಂತೆ ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಈ ನೂತನ ಟಿವಿಎಸ್ ಮೆಟ್ರೋ ಪ್ಲಸ್‌ನ ಬೆಲೆಗಳು 1.25 ಲಕ್ಷ ಟಾಕಾ (ಬಾಂಗ್ಲಾದೇಶದ ರೂಪಾಯಿ)ದಿಂದ ಆರಂಭವಾಗಲಿದೆ. ಇದನ್ನು ಭಾರತದ ರೂಪಾಯಿಗೆ ಹೋಲಿಸಿದರೆ ಸರಿಸುಮಾರು 1 ಲಕ್ಷ ರೂ ಎಕ್ಸ್ ಶೋರೂಂ ಬೆಲೆ ಇರಲಿದೆ.

ಇಷ್ಟೇಅಲ್ಲದೆ, ನೂತನ ಮೆಟ್ರೋ ಪ್ಲಸ್, ಅಲ್ಯೂಮಿನಿಯಂ ಗ್ರಾಬ್ ರೈಲ್, ಕ್ರೋಮ್ ಮಫ್ಲರ್ ಗಾರ್ಡ್ ಮತ್ತು ಸ್ಪೋರ್ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದು 109.7 ಸಿಸಿ, ಸಿಂಗಲ್-ಸಿಲಿಂಡರ್, ಫೋರ್-ಸ್ಟ್ರೋಕ್, ಏರ್-ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ 7,500rpm ನಲ್ಲಿ 8.29bhp ಗರಿಷ್ಠ ಪವರ್ ಮತ್ತು 5,000rpm ನಲ್ಲಿ 8.7Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಮತ್ತು ಮುಂಭಾಗದಲ್ಲಿ ಡಿಸ್ಕ್ ಅನ್ನು ಪಡೆದಿದೆ.

ಮೆಟ್ರೋ ಪ್ಲಸ್ ಬೈಕ್ ಬಿಡುಗಡೆ ಕುರಿತು ಟಿವಿಎಸ್ ಮೋಟಾರ್ ಕಂಪನಿಯ ಇಂಟರ್ನ್ಯಾಷನಲ್ ಬ್ಯುಸಿನೆಸ್ ಉಪಾಧ್ಯಕ್ಷ ರಾಹುಲ್ ನಾಯಕ್ ಮಾತನಾಡಿದ್ದಾರೆ. 'ನಮ್ಮ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬಾಂಗ್ಲಾದೇಶದಲ್ಲಿ ಹೊಸ ಮೆಟ್ರೋ ಪ್ಲಸ್ ಅನ್ನು ಲಾಂಚ್ ಮಾಡಿರುವುದು ಸಂತೋಷ ತಂದಿದೆ. ಆ ದೇಶದಲ್ಲಿ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಗ್ರಾಹಕರ ನೀರಿಕ್ಷೆಗಳನ್ನು ಪೂರೈಸಲು ನವೀನ ವೈಶಿಷ್ಟ್ಯಗಳನ್ನು ಈ ಬೈಕ್ ಹೊಂದಿದ್ದು, ಅವರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ರೂ.73,480 ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 3 ರೂಪಾಂತರ ಹಾಗೂ 8 ಬಣ್ಣಗಳಲ್ಲಿ ಸಿಗಲಿದ್ದು, ಟಾಪ್ ವೇರಿಯಂಟ್ ಬೆಲೆ ರೂ.77,802 ಇದೆ. ಈ ಹೊಸ ಬೈಕ್, 109.7ಸಿಸಿ BS6 ಎಂಜಿನ್‌ ಹೊಂದಿದ್ದು, ಇದು 8.08bhp ಗರಿಷ್ಠ ಪವರ್ ಮತ್ತು 8.7Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು. ಫ್ರಂಟ್ ಮತ್ತು ರೇರ್ ಎರಡು ಡ್ರಮ್ ಬ್ರೇಕ್‌ಗನ್ನು ಹೊಂದಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 115 ಕೆಜಿ ತೂಕವಿದ್ದು, 10 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಜೊತೆಗೆ ಎಲ್‌ಇಡಿ ಹೆಡ್‌ಲ್ಯಾಂಪ್, ಯುಎಸ್‌ಬಿ ಮೊಬೈಲ್ ಚಾರ್ಜರ್, ಹಿಂಭಾಗದಲ್ಲಿ 5-ಸ್ಟೇಜ್ ಅಡ್ಜಸ್ಟ್ಏಬಲ್ ಶಾಕ್ ಅಬ್ಸಾರ್ಬರ್ ಮತ್ತು ಡ್ಯುಯಲ್-ಟೋನ್ ಸೀಟ್‌, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದ್ದು, ಈ ಬೈಕ್ ಖರೀದಿಗೆ ಆಸಕ್ತಿವಹಿಸಲಿದ್ದಾರೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, January 10, 2023, 13:05 [IST]
English summary
Tvs metro plus 110 launched similar to star city plus bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+