TVS: ಪ್ರಚಂಡ ವೇಗದಲ್ಲಿ ಮುನ್ನುಗುತ್ತಿದೆ ಟಿವಿಎಸ್ ಐಕ್ಯೂಬ್, ಮೊದಲ ಸ್ಥಾನಕ್ಕೆ ಬರುತ್ತಾ?

ಭಾರತದಲ್ಲಿ ಟಿವಿಎಸ್ (TVS) ಕಂಪನಿಯ ದ್ವಿಚಕ್ರ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಜುಲೈ ತಿಂಗಳ (2023) ಮಾರಾಟ ವರದಿ ಪ್ರಕಟಗೊಂಡಿದ್ದು, ಕಂಪನಿಯು ಯಶಸ್ವಿಯಾಗಿ ತನ್ನ ಬೈಕ್ ಹಾಗೂ ಸ್ಕೂಟರ್ ಸೇಲ್ ಮಾಡಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ ಮಾರಾಟದಲ್ಲಿ ವೇಗವಾಗಿ ಮುನ್ನುಗುತ್ತಿದೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ಸ್ ವಿವರವನ್ನು ನೋಡುವ ಮೊದಲು, ಒಟ್ಟಾರೆ ಮಾರಾಟದ ಅಂಕಿಅಂಶದ ಬಗ್ಗೆ ತಿಳಿಯೋಣ. ಕಂಪನಿಯು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಮಾರಾಟದಲ್ಲಿ ಕಳೆದ ಜುಲೈ ತಿಂಗಳಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಒಟ್ಟು 3,25,977 ಯುನಿಟ್ ಮಾರಿದೆ. 2022ರ ಇದೇ ಅವಧಿಗೆ (3,14,639 ಯುನಿಟ್) ಹೋಲಿಸಿದರೆ ಶೇಕಡ 4% ಬೆಳವಣಿಗೆ ಸಾಧಿಸಿದೆ.

TVS: ಪ್ರಚಂಡ ವೇಗದಲ್ಲಿ ಮುನ್ನುಗುತ್ತಿದೆ ಟಿವಿಎಸ್ ಐಕ್ಯೂಬ್, ಮೊದಲ ಸ್ಥಾನಕ್ಕೆ ಬರುತ್ತಾ?

ಅದರಲ್ಲಿ 2022ರ ಜುಲೈ ತಿಂಗಳಲ್ಲಿ ಮಾರಾಟ ಮಾಡಿದ 2,99,658 ಯುನಿಟ್ ದ್ವಿಚಕ್ರ ವಾಹನಗಳಿಗೆ ಹೋಲಿಕೆ ಮಾಡಿದರೆ, ಹೋದ ತಿಂಗಳು 3,12,307 ಯುನಿಟ್ ಸೇಲ್ ಮಾಡಿ ಶೇಕಡ 4% ಪ್ರಗತಿ ಕಂಡಿದೆ. ಆದರೆ, ತ್ರಿಚಕ್ರ ವಾಹನ ಮಾರಾಟದಲ್ಲಿ ಕೊಂಚ ಹಿನ್ನೆಡೆ ಅನುಭವಿಸಿದ್ದು, ಕಳೆದ ಜುಲೈ ತಿಂಗಳಲ್ಲಿ 13,670 ಯುನಿಟ್ ಮಾರಾಟ ಮಾಡಲು ಶಕ್ತವಾಗಿದೆ. ಹೋದ ವರ್ಷ ಇದೇ ಅವಧಿಯಲ್ಲಿ 14,981 ಯುನಿಟ್ ತ್ರಿಚಕ್ರ ವಾಹನ ಮಾರಲು ಯಶಸ್ವಿಯಾಗಿತ್ತು.

ಇವೆಲ್ಲ ಒಟ್ಟಾರೆ ಸೇಲ್ಸ್ ಅಂಕಿಅಂಶವಾಗಿದೆ. ದೇಶೀಯ ಮಾರಾಟದ ವಿವರವನ್ನು ತಿಳಿಯುವುದಾದರೆ, ಕಂಪನಿಯು ಜುಲೈನಲ್ಲಿ (2023) 2,35,230 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಿದ್ದು, ಕಳೆದ ವರ್ಷದ ಇದೇ ಅವಧಿಗೆ (2,01,942 ಯುನಿಟ್) ಹೋಲಿಸಿದರೆ, ಶೇಕಡ 17% ಪ್ರಗತಿ ಕಂಡಿದೆ. ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಮಾರಾಟ ಉತ್ತಮವಾಗಿದ್ದರಿಂದ ಈ ಸಾಧನೆಯನ್ನು ಮಾಡಿದ್ದು, ಕ್ರಮವಾಗಿ, 153,942 ಯುನಿಟ್ ಹಾಗೂ 121,941 ಯುನಿಟ್ ಸೇಲ್ ಮಾಡಿದೆ.

ವಿದೇಶಗಳಲ್ಲಿ ಆರ್ಥಿಕತೆ ಕುಸಿತದಿಂದ ಟಿವಿಎಸ್ ವಾಹನಗಳ ರಫ್ತು ಸಹ ಕುಂಠಿತವಾಗಿದೆ. ಜುಲೈ ತಿಂಗಳು ಒಟ್ಟು 89,213 ಯುನಿಟ್ ವಾಹನ ಗಳನ್ನು ರಫ್ತು ಮಾಡಿದೆ. 2022ರ ಇದೇ ಅವಧಿಯಲ್ಲಿ 112,032 ಯುನಿಟ್ ಇತ್ತು. ದ್ವಿಚಕ್ರ ವಾಹನಗಳ ರಫ್ತು ಕೂಡ ಇಳಿಕೆಯಾಗಿದೆ. ಕಂಪನಿ ಕಳೆದ ತಿಂಗಳು 77,077 ಯುನಿಟ್ ಎಕ್ಸ್ಪೋರ್ಟ್ ಮಾಡಲು ಶಕ್ತವಾಗಿದೆ. 2022ರ ಜುಲೈನಲ್ಲಿ 97,716 ಯುನಿಟ್ ರಫ್ತು ಮಾಡಿತ್ತು.

ಟಿವಿಎಸ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ (iQube) ಮಾರಾಟದಲ್ಲಿ ಭಾರೀ ವೇಗದಲ್ಲಿ ಮುನ್ನುಗುತ್ತಿದೆ. ಇದನ್ನು ಗಮನಿಸಿದರೆ, ಕೆಲವೇ ದಿನಗಳಲ್ಲಿ ಓಲಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೂ ಬಂದರೂ ಆಶ್ಚರ್ಯಪಡುವ ಅಗತ್ಯವಿಲ್ಲ. ಕಳೆದ ತಿಂಗಳು ಬರೋಬ್ಬರಿ 13,306 ಯುನಿಟ್‌ ಐಕ್ಯೂಬ್ ಸ್ಕೂಟರ್ ಮಾರಾಟ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 6,304 ಯುನಿಟ್ ಸೇಲ್ಸ್ ಮಾಡಿತ್ತು.

ಇತ್ತೀಚೆಗೆ ಕಂಪನಿಯು 150,000 ಯುನಿಟ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿ, ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಾಣ ಮಾಡಿತ್ತು. ಟಿವಿಎಸ್ ಐಕ್ಯೂಬ್ ಮೂರು ರೂಪಾಂತರಗಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಐಕ್ಯೂಬ್, ಐಕ್ಯೂಬ್ ಎಸ್ ಹಾಗೂ ಐಕ್ಯೂಬ್ ST. ಆದರೆ, ಗರಿಷ್ಠ ರೇಂಜ್ ನೀಡುವ ಐಕ್ಯೂಬ್ ST ಬಿಡುಗಡೆಗೊಂಡಿಲ್ಲ. ಐಕ್ಯೂಬ್, ಐಕ್ಯೂಬ್ ಎಸ್ ಕ್ರಮವಾಗಿ ರೂ.1,13,721 ಹಾಗೂ ರೂ.1,21,674 ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.

ಇವೆರೆಡು ರೂಪಾಂತರಗಳ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, 3.04 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿವೆ. ಫುಲ್ ಚಾರ್ಜಿನಲ್ಲಿ 100 ಕಿಮೀ ರೇಂಜ್ ನೀಡಲಿವೆ. 75 km/h ಟಾಪ್ ಸ್ವೀಡ್ ಪಡೆಯಲಿದ್ದು, ಸುಮಾರು 4 ಗಂಟೆ 30 ನಿಮಿಷದಲ್ಲಿ ಈ ಸ್ಕೂಟರ್ ಗಳ ಬ್ಯಾಟರಿ 0-80% ಚಾರ್ಜ್ ಆಗುತ್ತವೆ. ಫುಲ್ ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, August 2, 2023, 18:33 [IST]
English summary
Tvs motor company records 4 growth sales july details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+