ವೇಗದಲ್ಲಿ ಮುನ್ನುಗ್ಗುತ್ತಿದೆ ಟಿವಿಎಸ್: ದೊಡ್ಡ ಮಟ್ಟಕ್ಕೇರುತ್ತಿದೆ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್
ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಿವಿಎಸ್ ಫೆಬ್ರವರಿ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ್ದು, ಕೊಂಚ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ (2022) ಫೆಬ್ರವರಿಯ ಒಟ್ಟಾರೆ ಮಾರಾಟಕ್ಕೆ (281,714 ಯುನಿಟ್) ಹೋಲಿಸಿದರೆ, 2023ರ ಫೆಬ್ರವರಿಯಲ್ಲಿ 276,150 ಯುನಿಟ್ ಸೇಲ್ ಮಾಡಿದೆ.
ಫೆಬ್ರವರಿ 2022ರಲ್ಲಿ ಮಾರಾಟ ಮಾಡಿದ ಒಟ್ಟು 173,198 ಯುನಿಟ್ ಪ್ರಯಾಣಿಕ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ಕಳೆದ ತಿಂಗಳು (ಫೆಬ್ರವರಿ 2023) 221,402 ಯುನಿಟ್ ಮಾರಾಟ ಮಾಡಲು ಯಶಸ್ವಿಯಾಗಿದ್ದು, 28% ಮಾರಾಟ ಪ್ರಗತಿಯನ್ನು ಸಾಧಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ 126,243 ಯುನಿಟ್ ಮೋಟಾರ್ ಸೈಕಲ್ ಮಾರಾಟ ಮಾಡಿದ್ದು, ಗ್ರಾಹಕರನ್ನು ಸೆಳೆಯಲು ವಿಫಲವಾಗಿದೆ. ಏಕೆಂದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ 143,523 ಯುನಿಟ್ ಸೇಲ್ ಮಾಡಿತ್ತು.

ಸ್ಕೂಟರ್ ವಿಭಾಗದಲ್ಲಿ ಅತ್ಯುತ್ತಮ (21%) ಮಾರಾಟ ಬೆಳವಣಿಗೆಯನ್ನು ದಾಖಲಿಸಿದ್ದು, ಕಳೆದ ವರ್ಷಕ್ಕೆ (86,616 ಯುನಿಟ್) ಹೋಲಿಸಿದರೆ ಈ ವರ್ಷ 104,825 ಯುನಿಟ್ ಸೇಲ್ ಮಾಡಿದೆ. ಆದರೆ, ಟಿವಿಎಸ್ ಪ್ರಯಾಣಿಕ ವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡುವುದರಲ್ಲೂ ಹೇಳಿಕೊಳ್ಳುವ ಪ್ರಗತಿಯನ್ನು ಸಾಧಿಸಿಲ್ಲ. 2022ರ ಫೆಬ್ರವರಿಗೆ (107,574 ಯುನಿಟ್) ಹೋಲಿಕೆ ಮಾಡಿದರೆ ಕಳೆದ ತಿಂಗಳು 53,405 ಯುನಿಟ್ ರಫ್ತು ಮಾಡಿದೆ.
ದ್ವಿಚಕ್ರ ವಾಹನಗಳ ರಫ್ತು ಕೂಡ ವ್ಯಾಪಕವಾಗಿ ಕುಸಿತ ದಾಖಲಿಸಿದೆ. 2023ರ ಫೆಬ್ರವರಿಯಲ್ಲಿ ಕೇವಲ 45,624 ಯುನಿಟ್ ರಫ್ತು ಮಾಡಲು ಯಶಸ್ವಿಯಾಗಿದೆ. ಆದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಸಂಖ್ಯೆ 94,427ಯುನಿಟ್ ಇತ್ತು. ಅಲ್ಲದೆ, ಮೂರು ಚಕ್ರದ ಮಾರಾಟದಲ್ಲೂ ಇಳಿಕೆ ಕಂಡಿದೆ. 2022ರ ಫೆಬ್ರವರಿಗೆ (14,089 ಯುನಿಟ್) ಹೋಲಿಸಿದರೆ, ಕೇವಲ 9,124 ಯುನಿಟ್ ಮಾರಾಟ ಮಾಡಲು ಯಶಸ್ವಿಯಾಗಿದೆ. ಜೊತೆಗೆ ಅಪಾಚೆ ಬೈಕುಗಳು ಜಾಗತಿಕವಾಗಿ 5 ಮಿಲಿಯನ್ ಮಾರಾಟವಾಗಿದ್ದು, ದಾಖಲೆ ನಿರ್ಮಾಣವಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳು ಪ್ರಾಬಲ್ಯವನ್ನು ಮೆರೆಯುತ್ತಿವೆ. ಆದರಲ್ಲಿ ಟಿವಿಎಸ್ ಕಂಪನಿಯು ಹಿಂದೆ ಬಿದ್ದಿಲ್ಲ. ಅದರ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಗ್ರಾಹಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇಷ್ಟಪಟ್ಟು ಖರೀದಿಸುತ್ತಿದ್ದಾರೆ ಎಂದು ಹೇಳಬಹುದು. ದೇಶಾದ್ಯಂತ 100ಕ್ಕೂ ಹೆಚ್ಚು ನಗರಗಳಲ್ಲಿ ಈ ಸ್ಕೂಟರ್ ಕೊಂಡುಕೊಳ್ಳಹುದು. 2022ರ ಫೆಬ್ರವರಿಗೆ (2,238) ಹೋಲಿಸಿದರೆ, ಈ ವರ್ಷ ಬರೋಬ್ಬರಿ 15,522 ಯುನಿಟ್ ಮಾರಾಟ ಮಾಡಿ ಉತ್ತಮ ಪ್ರಗತಿ ದಾಖಲಿಸಿದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್, ರೂ.1,12,231 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಎರಡು ರೂಪಾಂತರ ಹಾಗೂ ಏಳು ಬಣ್ಣಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಐದು ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದ್ದು, 100 Km ರೇಂಜ್ ನೀಡಲಿದ್ದು, 78 Kmph ಟಾಪ್ ಸ್ವೀಡ್ ಹೊಂದಿದೆ. ಈ ಸ್ಕೂಟರ್, ಓಲಾ ಎಸ್1, ಎಥರ್ 450 ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ.
ಟಿವಿಎಸ್ ದೇಶೀಯ ಮಾರುಕಟ್ಟೆಯಲ್ಲಿ ಅಪಾಚೆ, ರೈಡರ್, ರೋನಿನ್ ಬೈಕುಗಳನ್ನು ಮಾರಾಟ ಮಾಡುತ್ತಿದೆ. ಜೊತೆಗೆ NTORQ ಜುಪಿಟರ್ ಸ್ಕೂಟರ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಈ ಮಾರಾಟ ವರದಿಯನ್ನು ಗಮನಿಸಿದಾಗ ಬೈಕ್ ಮಾರಾಟವು ಕೊಂಚ ಮಟ್ಟಿಗೆ ಕುಸಿತ ಕಂಡಿದೆ. ಆದರೆ, ಸ್ಕೂಟರ್ ವಿಭಾಗದಲ್ಲಿ ಅತ್ಯುತ್ತಮ ಪ್ರಗತಿಯನ್ನು ದಾಖಲಿಸಿರುವುದು ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಹಬ್ಬದ ಸೀಸನ್ ಇರುವುದರಿಂದ ಸೇಲ್ಸ್ ಸುಧಾರಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications