TVS ಗೇಮ್ ಚೇಂಜರ್ ಆಗಿ ಬದಲಾದ 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್!

ಭಾರತದಲ್ಲಿ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚಿನ ದಿನದಲ್ಲಿ ಅದರ 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಗೇಮ್ ಚೇಂಜರ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಸದ್ಯ, ಜೂನ್ ತಿಂಗಳ (2023) ಮಾರಾಟ ವರದಿ ಪ್ರಕಟಗೊಂಡಿದ್ದು, ಕಂಪನಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ವಿವರವನ್ನು ನೋಡುವ ಮೊದಲು ಕಂಪನಿಯ ಸೇಲ್ಸ್ ನ ಒಟ್ಟಾರೆ ಅಂಕಿಅಂಶದ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಜೂನ್(2023)ನಲ್ಲಿ ಟಿವಿಎಸ್ ಒಟ್ಟು (ಟೂ ವೀಲರ್, ಥ್ರೀ ವೀಲರ್) 3,16,411 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (3,08,501 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 3% ಪ್ರಗತಿ ಕಂಡಿದೆ.

TVS

ಕಂಪನಿಯು ಒಟ್ಟಾರೆ ದ್ವಿಚಕ್ರ ವಾಹನ ಮಾರಾಟದಲ್ಲಿಯೂ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಜೂನ್ ತಿಂಗಳಲ್ಲಿ 304,401 ಯುನಿಟ್ ಬೈಕ್ ಹಾಗೂ ಸ್ಕೂಟರ್ ಸೇಲ್ ಮಾಡಿದೆ. 2022ರ ಇದೇ ಅವಧಿಯಲ್ಲಿ 2,93,715 ಯುನಿಟ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 4% ಧನಾತ್ಮಕ ಪ್ರಗತಿ ಸಾಧಿಸಿದೆ. ಮುಖ್ಯವಾಗಿ ದೇಶೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಸೇಲ್ ಹೇರಳವಾಗಿ ಅಧಿಕಗೊಂಡಿದೆ.

ಕಂಪನಿಯು ಜೂನ್(2023)ನಲ್ಲಿ 2,35,833 ಯುನಿಟ್ ದ್ವಿಚಕ್ರ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಿ, ವರ್ಷದಿಂದ ವರ್ಷದಿಂದ ವರ್ಷಕ್ಕೆ ಶೇಕಡ 22% ಅಭಿವೃದ್ಧಿ ಕಂಡಿದೆ. 2022ರ ಜೂನ್ ತಿಂಗಳಲ್ಲಿ 1,93,090 ಯುನಿಟ್ ಟೂ ವೀಲರ್ ಸೇಲ್ ಮಾಡಲು ಶಕ್ತವಾಗಿತ್ತು. ಇದನ್ನು ಗಮನಿಸಿದಾಗ, ಕಳೆದ ತಿಂಗಳು ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಮಾರಾಟ ಅತ್ಯುತ್ತಮವಾಗಿ ಇತ್ತು ಎಂದು ಸುಲಭವಾಗಿ ಹೇಳಬಹುದು.

ಕೇಂದ್ರ ಸರ್ಕಾರ, ಜೂನ್ ತಿಂಗಳಿಂದ ಜಾರಿಗೆ ಬರುವಂತೆ FAMEII ಸಬ್ಸಿಡಿಯನ್ನು ಪರಿಷ್ಕರಣೆ ಮಾಡಿತ್ತು. ಅದರ ಭಾಗವಾಗಿ ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳು, ತಮ್ಮ ವಿವಿಧ ಮಾದರಿ ಬೆಲೆಯನ್ನು ಏರಿಕೆ ಮಾಡಿದವು. ಅದಕ್ಕೆ ಟಿವಿಎಸ್ ಕಂಪನಿಯು ಏನು ಹೊರತಾಗಿರಲಿಲ್ಲ. ಇದರಿಂದ ಕಂಪನಿಯ 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಒಂದಷ್ಟು ಪೆಟ್ಟು ಬಿತ್ತು.

ಟಿವಿಎಸ್, ಜೂನ್(2023)ನಲ್ಲಿ 14,462 ಯುನಿಟ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿತು. ಅದರ ಹಿಂದಿನ ಮೇ ತಿಂಗಳಿಗೆ ಹೋಲಿಸಿದರೆ (17,953 ಯುನಿಟ್) ಶೇಕಡ 19.4% ಇಳಿಕೆಯಾಗಿದೆ. ಆದರೆ, 2022ರ ಜೂನ್ ನಲ್ಲಿ ಕೇವಲ 4,667 ಯುನಿಟ್ ಸೇಲ್ ಮಾಡಿತ್ತು. ಇದನ್ನು ಗಮನಿಸಿದರೆ, ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣ ಹಲವು ಪಟ್ಟು ಅಧಿಕಗೊಂಡಿದೆ.

ಈಗಾಗಲೇ, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಜನರ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿರುವುದರಿಂದ ಮುಂಬರುವ ಹಬ್ಬಗಳ ಸೀಸನ್ ವೇಳೆಗೆ ಈ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ಅಷ್ಟಾಗಿ ತಟ್ಟುವುದಿಲ್ಲ. ಜೊತೆಗೆ ಐಕ್ಯೂಬ್ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿರುವುದರಿಂದ ಬಹುತೇಕರು ಅದನ್ನು ಖರೀದಿಸಬಹುದು ಎಂಬುದು ತಜ್ಞರ ಲೆಕ್ಕಾಚಾರವಾಗಿದೆ. ಸದ್ಯ, ದೆಹಲಿಯಲ್ಲಿ ಐಕ್ಯೂಬ್ ರೂ.1,23,184 ಹಾಗೂ ಐಕ್ಯೂಬ್ ಎಸ್ ರೂಪಾಂತರ ರೂ.1,38,289 ಬೆಲೆಯಲ್ಲಿ ದೊರೆಯುತ್ತದೆ.

ಇವೆರೆಡು ರೂಪಾಂತರಗಳು 3.04 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 100 km ರೇಂಜ್ ನೀಡುತ್ತದೆ. ಕಂಪನಿಯು ಗರಿಷ್ಠ (145 km) ರೇಂಜ್ ನೀಡುವ ಐಕ್ಯೂಬ್ ST ಸ್ಕೂಟರ್ ಅನ್ನು ಕೆಲವೇ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಐಕ್ಯೂಬ್ ಹಾಗೂ ಐಕ್ಯೂಬ್ ಎಸ್ ರೂಪಾಂತರಗಳು 75 km/h ಟಾಪ್ ಸ್ವೀಡ್ ಹೊಂದಿದ್ದು, TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು, ಕಂಪನಿಯು ನಾನಾ ಕಾರಣಗಳಿಗೆ ವಿದೇಶಗಳಿಗೆ ರಫ್ತು ಮಾಡುವ ವಾಹನ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ. ಅದು ಮುಂಬರುವ ದಿನಗಳಲ್ಲಿ ಸುಧಾರಿಸುವ ಸಾಧ್ಯತೆಯಿದೆ. ಒಟ್ಟಾರೆ, ಟಿವಿಎಸ್ ಕಂಪನಿ ಮಾರಾಟದಲ್ಲಿ ಉತ್ತಮವಾಗಿ ಪ್ರಗತಿಯನ್ನು ಕಂಡಿದ್ದು, ಅದರಲ್ಲೂ ಬೆಲೆ ಹೆಚ್ಚಳವಾಗಿ ಐಕ್ಯೂಬ್ ಸೇಲ್ ಕೊಂಚ ಇಳಿಕೆಯಾಗಿದ್ದು, ಅದು ಅಭಿವೃದ್ಧಿ ಕಾಣಲಿದೆ ಎಂಬ ವಿಶ್ವಾಸದಲ್ಲಿ ಟಿವಿಎಸ್ ಇದೆ.

Article Published On: Tuesday, July 4, 2023, 15:56 [IST]
English summary
Tvs overall sales growth in june iqube sales significant hit details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+