TVS Raider 125: ಹೊಸ ರೂಪಾಂತರ ಅಗ್ಗದ ಬೆಲೆಯಲ್ಲಿ ಬಿಡುಗಡೆ.. ಆದ್ರೆ ಮತ್ತೊಂದು ಸ್ಥಗಿತ

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ ಜನಪ್ರಿಯತೆ ಗಳಿಸಿದೆ. ಇದೀಗ, ಭಾರತದ ಗ್ರಾಹಕರಿಗಾಗಿ ರೈಡರ್ 125 ಬೈಕ್‌ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಲಾಂಚ್ ಆಗಿದೆ. ಆ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ಸದ್ಯ, ಟಿವಿಎಸ್ ರೈಡರ್ 125 ಬೈಕ್‌ನ ನೂತನ 'ಸಿಂಗಲ್ ಸೀಟ್' ಬೇಸ್ ವೇರಿಯೆಂಟ್ ರೂ.93,719 ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿದೆ. ಆದರೆ, ಡ್ರಮ್ ಬ್ರೇಕ್ ವೇರಿಯೆಂಟ್ ಮಾರಾಟವನ್ನು ಕಂಪನಿ ಸ್ಥಗಿತಗೊಳಿಸಿರುವುದು ಗ್ರಾಹಕರಿಗೆ ಬೇಸರ ತರಿಸಿದ್ದು, ರೈಡರ್ 125 ಬೈಕ್‌ನ ಮತ್ತೊಂದು ಸ್ಪಿಲ್ಟ್ ಸೀಟ್ ರೂಪಾಂತರ ರೂ.94,719 ದರದಲ್ಲಿ ಖರೀದಿಗೆ ಲಭ್ಯವಿದೆ.

TVS Raider 125: ಹೊಸ ರೂಪಾಂತರ ಅಗ್ಗದ ಬೆಲೆಯಲ್ಲಿ ಬಿಡುಗಡೆ.. ಆದ್ರೆ ಮತ್ತೊಂದು ಸ್ಥಗಿತ

ಟಿವಿಎಸ್ ರೈಡರ್ 125 ಬೈಕ್‌ನ ಟಾಪ್ ಎಂಡ್ ರೂಪಾಂತರ Smart Xonnect, ರೂ.1 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಸಿಗಲಿದೆ. ಇದು ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಮುಖವಾಗಿ 5 ಇಂಚಿನ TFT ಸ್ಕ್ರೀನ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ರೈಡ್ ಮೋಡ್ಸ್, ವಾಯ್ಸ್ ಕಮಾಂಡ್ಸ್, ಕಾಲ್ ಅಲರ್ಟ್ಸ್, ಮೆಸೇಜ್ ನೋಟಿಫಿಕೇಶನ್ ಹಾಗೂ ಮ್ಯೂಸಿಕ್ ಕಂಟ್ರೋಲ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಪಡೆದಿದೆ.

ನೂತನ ಟಿವಿಎಸ್ ರೈಡರ್ 125 ಬೈಕ್‌ನ ಬ್ರೇಕಿಂಗ್ ಸಿಸ್ಟಮ್, ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಇದು ಫ್ರಂಟ್ ಟೆಲಿಸ್ಕೋಪಿಕ್, ರೇರ್ ಮೊನೊ ಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ನೋಡುವುದಾದರೆ, ಫ್ರಂಟ್ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ರೇರ್ 130 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

TVS Raider 125: ಹೊಸ ರೂಪಾಂತರ ಅಗ್ಗದ ಬೆಲೆಯಲ್ಲಿ ಬಿಡುಗಡೆ.. ಆದ್ರೆ ಮತ್ತೊಂದು ಸ್ಥಗಿತ

ಈ ಬೈಕ್‌ನ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, 124.8 ಸಿಸಿ ಸಿಂಗಲ್ ಸಿಲಿಂಡರ್ SOHC ಎಂಜಿನ್ ಹೊಂದಿದ್ದು, ಇದು 7,500 rpmನಲ್ಲಿ 11.2 bhp ಗರಿಷ್ಠ ಪವರ್ ಹಾಗೂ 6,000 rpmನಲ್ಲಿ11.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.

ಟಿವಿಎಸ್ ರೈಡರ್ 125 ಬೈಕ್‌, ಕೇವಲ 5.9 ಸೆಕೆಂಡುಗಳಲ್ಲಿ 60km/h ವೇಗವನ್ನು ಪಡೆಯಲಿದ್ದು, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 123 ತೂಕವಿದೆ. ಸಿಂಗಲ್ ಸೀಟ್ ರೂಪಾಂತರ ಕೆಲವೇ ಸ್ಟ್ರೈಕಿಂಗ್ ರೆಡ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. Smart Xonnect ರೂಪಾಂತರ ಫಿರಿ ಯೆಲ್ಲೋ, ವಿಕೆಡ್ ಬ್ಲ್ಯಾಕ್ ಬಣ್ಣದಲ್ಲಿ ಸಿಗಲಿದೆ.

ಒಟ್ಟಾರೆ, ಕೈಗೆಟುಕುವ ಬೆಲೆಯಲ್ಲಿ ಟಿವಿಎಸ್ ರೈಡರ್ 125 ಬೈಕ್‌ನ ಸಿಂಗಲ್ ಸೀಟ್ ರೂಪಾಂತರ ಬಿಡುಗಡೆಯಾಗಿದೆ. ಹೆಚ್ಚು ಆಕರ್ಷಕ ಲುಕ್ ಹೊಂದಿರುವ ಈ ಬೈಕ್, ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಲಿದೆ. ಬೇಸರದ ಸಂಗತಿಯೆಂದರೆ ಡ್ರಮ್ ಬ್ರೇಕ್ ವೇರಿಯೆಂಟ್ ಮಾರಾಟವನ್ನು ಕಂಪನಿ ಸ್ಥಗಿತಗೊಳಿಸಿದೆ. ಮುಂಬರುವ ದಿನಗಳಲ್ಲಿ ನೂತನ ಬೈಕ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, April 15, 2023, 13:30 [IST]
English summary
Tvs raider 125 single seat variant launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+