TVS ಐಕ್ಯೂಬ್: 10 ದಿನ, 1000 ಸ್ಕೂಟರ್ ವಿತರಣೆ.. ಏನ್ ತಾಕತ್!

ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೊಡ್ಡ ಮಟ್ಟದಲ್ಲಿ ಜನಪ್ರಿತೆಯನ್ನು ಗಳಿಸುತ್ತಿವೆ. ಅದರಲ್ಲೂ ಟಿವಿಎಸ್ (TVS) ಮೋಟಾರ್ ಕಂಪನಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಗ್ರಾಹಕರು ಲೈಕ್ ಮಾಡುತ್ತಿದ್ದಾರೆ. ಸದ್ಯ, ಐಕ್ಯೂಬ್ ಮಾರಾಟವನ್ನು ದ್ವಿಗುಣಗೊಳಿಸಲು ಕಂಪನಿಯು ಮೆಗಾ ಡೆಲಿವರಿ ಮ್ಯಾರಥಾನ್‌ ಪ್ರಾರಂಭಿಸಿದೆ.

ಅದರ ಭಾಗವಾಗಿ 10 ದಿನಗಳಲ್ಲಿ 10 ಪ್ರಮುಖ ನಗರಗಳಲ್ಲಿ ಬರೋಬ್ಬರಿ 1,000 ಐಕ್ಯೂಬ್ ಸ್ಕೂಟರ್ ವಿತರಿಸಲು ತೀರ್ಮಾನಿಸಿದೆ. ಸೋಮವಾರ ನವದೆಹಲಿಯಲ್ಲಿ 100 ಗ್ರಾಹಕರಿಗೆ ಸ್ಕೂಟರ್ ಹಸ್ತಾಂತರಿಸಿ, ಕಾರ್ಯಕ್ರಮಕ್ಕೆ ಟಿವಿಎಸ್ ಚಾಲನೆ ನೀಡಿದ್ದು, ಮುಂದಿನ ದಿನದಲ್ಲಿ ದೇಶದ ಇನ್ನುಳಿದ ನಗರಗಳಲ್ಲಿ ತನ್ನ ಖರೀದಿದಾರರಿಗೆ ಸ್ಕೂಟರ್ ತಲುಪಿಸುವ ಕೆಲಸದಲ್ಲಿ ನಿರತವಾಗಿದೆ. ಈ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಪರ್ಧೆಯಲ್ಲಿ ತಾನು ಇದ್ದೇನೆ ಎಂದು ಹೇಳಲು ಹೊರಟಿದೆ.

TVS ಐಕ್ಯೂಬ್: 10 ದಿನ, 1000 ಸ್ಕೂಟರ್ ವಿತರಣೆ.. ಏನ್ ತಾಕತ್!

ಕೆಲವೇ ದಿನಗಳ ಹಿಂದಷ್ಟೇ ಟಿವಿಎಸ್ ಕಂಪನಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಬಿಡುಗಡೆಯಾದಾಗಿನಿಂದ (2020) ಈವರೆಗೆ 1,00,000 ಯುನಿಟ್ ಸ್ಕೂಟರ್ ಸೇಲ್ ಮಾಡಿ, ದಾಖಲೆ ನಿರ್ಮಿಸಿದೆ. ಇತ್ತೀಚೆಗೆ ಐಕ್ಯೂಬ್ ಸ್ಕೂಟರ್ ಮಾದರಿಗಳನೆಲ್ಲ AIS156 ಹಂತ 2 ಮಾನದಂಡಗಳಿಗೆ ಅನುಗುಣವಾಗಿ ಕಂಪನಿ ನವೀಕರಿಸಿದೆ. ಹೋದ ಏಪ್ರಿಲ್ ತಿಂಗಳಲ್ಲೂ 6,227 ಯುನಿಟ್ ಸ್ಕೂಟರ್ ಮಾರಾಟ ಮಾಡಿದೆ.

ಮೊದಲಿಗೆ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಹಾಗೂ ರೇಂಜ್ ಬಗ್ಗೆ ಮಾತನಾಡೋಣ. ಈ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಎರಡು ರೂಪಾಂತರದಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಐಕ್ಯೂಬ್ ಹಾಗೂ ಐಕ್ಯೂಬ್ S. ಇವು 3.04 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 100 km ರೇಂಜ್ ನೀಡಲಿವೆ. ಮುಂಬರಲಿವ ಟಾಪ್ ಎಂಡ್ ಐಕ್ಯೂಬ್ ST ವೇರಿಯೆಂಟ್ 145 km ರೇಂಜ್ ಕೊಡಲಿದೆ.

ಈ ಸ್ಕೂಟರ್, 75 km/h ಟಾಪ್ ಸ್ವೀಡ್ ಹೊಂದಿದ್ದು, 4 ಗಂಟೆ 30 ನಿಮಿಷದಲ್ಲಿ ಇದರ ಬ್ಯಾಟರಿ 0-80% ಚಾರ್ಜ್ ಆಗುತ್ತದೆ. ವೈಶಿಷ್ಟ್ಯಗಳ ಬಗ್ಗೆ ತಿಳಿಯುವುದಾದರೆ, TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೈಡಿಂಗ್ ಅಂಕಿಅಂಶಗಳು, ಬ್ಯಾಟರಿ ರೇಂಜ್ ಬಗ್ಗೆ ಮಾಹಿತಿ ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇಯನ್ನು ಕನೆಕ್ಟ್ ಮಾಡಬಹುದು. ಇದಿಷ್ಟೇ ಅಲ್ಲದೆ, ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳಿವೆ.

ಬೆಲೆ ವಿಚಾರಕ್ಕೆ ಬಂದರೆ, ಟಿವಿಎಸ್ ಐಕ್ಯೂಬ್, ಕಂಪನಿಯ ಇತರೆ ಪೆಟ್ರೋಲ್ ಚಾಲಿತ ಮಾದರಿಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕ ಬೆಲೆಯನ್ನು ಪಡೆದಿದೆ ಎಂದು ಹೇಳಬಹುದು. ಐಕ್ಯೂಬ್ ರೂ.1,13,721, ಐಕ್ಯೂಬ್ S ರೂ.1,21,674 ದರವನ್ನು ಹೊಂದಿದೆ. ಆದರೆ, ಟಾಪ್ ಎಂಡ್ ಮಾದರಿ ಐಕ್ಯೂಬ್ ST ರೂಪಾಂತರ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಜೊತೆಗೆ ಐಕ್ಯೂಬ್ ಮಾದರಿಗಳು ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಒಟ್ಟಾರೆ, ವೇಗವಾಗಿ ಐಕ್ಯೂಬ್ ಸ್ಕೂಟರ್ ವಿತರಣೆ ಮಾಡಿ, ತನ್ನ ಮಾರಾಟವನ್ನು ದ್ವಿಗುಣಗೊಳಿಸಲು ಟಿವಿಎಸ್ ಕಂಪನಿ ಹೊರಟಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗೆ ಭಾರತದ ಮಾರುಕಟ್ಟೆಯಲ್ಲಿ ಓಲಾ, ಎಥರ್ ಹಾಗೂ ಹೀರೋ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಪ್ರತಿಸ್ಪರ್ಧಿಯಾಗಿವೆ. ಮುಂಬರುವ ದಿನಗಲ್ಲಿ ಐಕ್ಯೂಬ್ ಸ್ಕೂಟರ್ ಗೆ ಗ್ರಾಹಕರಿಂದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆaಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.

Article Published On: Tuesday, May 9, 2023, 10:19 [IST]
English summary
Tvs recently announced iqube mega delivery program
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+