ಏನ್ ಡಿಮಾಂಡ್ ಅಂತೀರಾ! ಭಾರತ ಬಿಡಿ, ಅಂತರಾಷ್ಟ್ರೀಯ ಮಾರುಕಟ್ಟೆಗೆ TVS RONIN

ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿ ಉತ್ತಮ ಮಾರಾಟವನ್ನು ಕಾಣುತ್ತಿರುವ TVS RONIN ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅಲ್ಲಿನ ಗ್ರಾಹಕರನ್ನು ಸೆಳೆಯಲು TVS ಮೋಟಾರ್ ಕಂಪನಿಯು ತನ್ನ ಮೊದಲ 'ಆಧುನಿಕ ರೆಟ್ರೋ' ಮೋಟಾರ್‌ಸೈಕಲ್ ಟಿವಿಎಸ್ ರೋನಿನ್ ಅನ್ನು ಇದೀಗ ಇಂಡೋನೇಷಿಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

TVS RONIN ಇಂಡೋನೇಷ್ಯಾದಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. TVS RONIN SS (ಸಿಂಗಲ್ ಟೋನ್ ಸಿಂಗಲ್ ಚಾನೆಲ್ ABS), ಮತ್ತು TVS RONIN TD (ಟ್ರಿಪಲ್ ಟೋನ್ ಡ್ಯುಯಲ್ ಚಾನೆಲ್ ABS). ಇದು ಜುಲೈ 2023 ರ ತಿಂಗಳ ದ್ವಿತಿಯಾರ್ಧದಲ್ಲಿ ಇಂಡೋನೇಷ್ಯಾದ ಆಯ್ದ TVS ಮೋಟಾರ್ ಔಟ್‌ಲೆಟ್‌ಗಳಲ್ಲಿ ಲಭ್ಯವಿರುತ್ತದೆ.

tvs-ronin-launched-indonesia-market

ಈ TVS RONIN ಬೈಕ್ ಕಂಪನಿಯ ಮೊದಲ 'ಆಧುನಿಕ-ರೆಟ್ರೋ' ಮೋಟಾರ್‌ಸೈಕಲ್ ಆಗಿದ್ದು, ಇದಕ್ಕೆ ಅನ್‌ಸ್ಕ್ರಿಪ್ಟ್ ಮೋಟಾರ್ ಸೈಕಲ್ ಎಂದು ಅಡಿಬರಹವನ್ನು ನೀಡಿದೆ. ಅಂದರೇ ಯಾವುದೇ ಒಂದು ಮಿಡ್ ರೇಂಜ್ ಬೈಕ್ ಆಗಿರಲಿ ಆಫ್ ರೋಡ್ ಅಥವಾ ಸಿಟಿ ರಸ್ತೆಗಳಿಗಾಗಿ ನಿರ್ಮಿಸಲಾಗುತ್ತದೆ. ಆದರೆ ಈ ಬೈಕ್ ಅನ್ನು ಯಾವ ರಸ್ತೆಗಳಲ್ಲಾದರೂ ಓಡಿಸಬಹುದು ಎಂಬುದು ಕಂಪನಿಯ ಉದ್ದೇಶವಾಗಿದೆ.

ಕಂಪನಿಯ ಟಿವಿಎಸ್ ರೋನಿನ್ ಅನ್ನು ಹೊಸ ತಲೆಮಾರಿನ ಉತ್ಸಾಹಕರನ್ನು ಉತ್ತೇಜಿಸಲು ತಂತ್ರಜ್ಞಾನ ಮತ್ತು ಉತ್ತಮ ಸವಾರಿ ಅನುಭವದೊಂದಿಗೆ ವಿನ್ಯಾಸಗೊಳಿಸಲಾಗಿದೆ. 225cc ಮೋಟಾರ್‌ಸೈಕಲ್ 160 Kg ತೂಗುತ್ತದೆ. 20.4 PS ಪವರ್ ಹಾಗೂ 19.93 Nm ಟಾರ್ಕ್ ಜೊತೆಗೆ ಅದರ ವಿಭಾಗದಲ್ಲಿ ಉತ್ತಮ ಪವರ್ ಹೊರಹಾಕುತ್ತದೆ.

tvs-ronin-launched-indonesia-market

ರೆಟ್ರೊ ವಿನ್ಯಾಸ ಪ್ಯಾಕೇಜ್‌ನಲ್ಲಿ ರೈನ್ ಮತ್ತು ಸಿಟಿ ABS ಮೋಡ್‌ಗಳು, ಗ್ಲೈಡ್ ಥ್ರೂ ಟೆಕ್ನಾಲಜಿ (GTT) ಮತ್ತು ಸ್ಮಾರ್ಟ್ ಬ್ಲೂಟೂತ್ ಸಂಪರ್ಕ, ವಾಯಿಸ್, ರೈಡ್ ಅಸಿಸ್ಟ್ ನಂತಹ ವಿಶಿಷ್ಟ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಮೋಟಾರ್‌ಸೈಕಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿಯೇ 'ಲಿವ್ ದಿ ಅನ್‌ಸ್ಕ್ರಿಪ್ಟೆಡ್ ಲೈಫ್' ಎಂದು ಮೋಟಾರ್‌ಸೈಕಲ್‌ ಅನ್ನು ಬಣ್ಣಿಸಲಾಗಿದೆ.

ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಿವಿಎಸ್ ಮೋಟಾರ್ ಕಂಪನಿಯ ಮುಖ್ಯಸ್ಥ ವಿಮಲ್ ಸುಂಬ್ಲಿ, ಇಂದು ಇಂಡೋನೇಷ್ಯಾದಲ್ಲಿ TVS RONIN ಅನ್ನು ಬಿಡುಗಡೆ ಮಾಡಲು ನಾವು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇವೆ. ಈ ಆಧುನಿಕ-ರೆಟ್ರೊ ಮೋಟಾರ್‌ಸೈಕಲ್‌ ದೇಶದ ಅನೇಕ ಯುವ ಸವಾರರನ್ನು ಆಕರ್ಷಾಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

tvs-ronin-launched-indonesia-market

ಅಂತರರಾಷ್ಟ್ರೀಯ ವ್ಯಾಪಾರ ಬಂಡವಾಳವನ್ನು ನಿರ್ಮಿಸಲು ಹಲವು ವರ್ಷಗಳ ಬದ್ಧತೆಯೊಂದಿಗೆ, ಟಿವಿಎಸ್ ಮೋಟಾರ್ ಕಂಪನಿಯು ಪ್ರಪಂಚದಾದ್ಯಂತದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಖರೀದಿದಾರರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತಿದೆ. ನಮ್ಮ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಮತ್ತು ನಮ್ಮ ಜಾಗತಿಕ ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನಗಳನ್ನು ನೀಡಲು ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಿದ್ದೇವೆ ಎಂದರು.

ಕಂಪನಿಯ ಅಧ್ಯಕ್ಷ, ನಿರ್ದೇಶಕರಾದ ಜೆ.ತಂಗರಾಜನ್, "ಹೊಸ ಟಿವಿಎಸ್ ರೋನಿನ್ ಬಿಡುಗಡೆಯು ಇಂಡೋನೇಷ್ಯಾದಲ್ಲಿ ಟಿವಿಎಸ್ ಮೋಟಾರ್‌ಗೆ ಮಹತ್ವದ ಮೈಲಿಗಲ್ಲು. ಇದು ಆಧುನಿಕ ತಂತ್ರಜ್ಞಾನ ಮತ್ತು ಇಂದಿನ ಯುವ ಸವಾರರಿಗಾಗಿ ಸಂಪರ್ಕಿತ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಮೋಟಾರ್‌ಸೈಕಲ್‌ನ ಬಿಡುಗಡೆಯೊಂದಿಗೆ ಆಧುನಿಕ-ರೆಟ್ರೋ ವಿಭಾಗಕ್ಕೆ ಮತ್ತಷ್ಟು ವಿಸ್ತರಿಸುತ್ತೇವೆ ಎಂದರು.

Article Published On: Monday, July 10, 2023, 17:51 [IST]
English summary
Tvs ronin launched indonesia market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+