TVS iQube: ಭಾರೀ ಸಂಖ್ಯೆಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ, ನಂಬರ್ 1ಗೆ ಇನ್ನೊಂದೆ ಹೆಜ್ಜೆ!

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ಕಂಪನಿಯಾಗಿದೆ. ಅದರ ಸ್ಕೂಟರ್ ಹಾಗೂ ಬೈಕ್‌ಗಳು ಆಕರ್ಷಕ ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಗೆ ದೊರೆಯುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ಅಕ್ಟೋಬರ್ (2023) ತಿಂಗಳ ಮಾರಾಟ ವರದಿ ಪ್ರಕಟಗೊಂಡಿದೆ.

ದಸರಾ ಹಬ್ಬವಿದ್ದ ಕಾರಣ, ಟಿವಿಎಸ್ ಒಟ್ಟಾರೆ (ದ್ವಿಚಕ್ರ ಹಾಗೂ ತ್ರಿಚಕ್ರ) ಮಾರಾಟದಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. 2022ರ ಅಕ್ಟೋಬರ್ ತಿಂಗಳಲ್ಲಿ ಸೇಲ್ ಮಾಡಿದ 360,288 ಯುನಿಟ್‌ಗಳಿಗೆ ಹೋಲಿಸಿದರೆ, ಕಳೆದ ತಿಂಗಳು 434,714 ಯುನಿಟ್‌ ಮಾರಾಟಗೊಳಿಸಿ, ಶೇಕಡ 21% ಬೆಳವಣಿಗೆ ಸಾಧಿಸಿದೆ. ಈಗ, ಪ್ರತಿಯೊಂದು ವಾಹನಗಳ ಮಾರಾಟ ವಿವರವನ್ನು ತಿಳಿಯೋಣ.

TVS iQube: ಭಾರೀ ಸಂಖ್ಯೆಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ, ನಂಬರ್ 1ಗೆ ಇನ್ನೊಂದೆ ಹಜ್ಜೆ!

ಟಿವಿಎಸ್ ಮೋಟಾರ್ ಒಟ್ಟು ದ್ವಿಚಕ್ರ ವಾಹನ ಮಾರಾಟದಲ್ಲಿ ಅಕ್ಟೋಬರ್ (2023) ತಿಂಗಳು 420,610 ಯುನಿಟ್ ಮಾರಾಟ ಮಾಡಿ, ಹೋದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ (344,630 ಯುನಿಟ್) ಶೇಕಡ 22% ಪ್ರಗತಿ ಕಂಡಿದೆ. ದೇಶೀಯ ದ್ವಿಚಕ್ರ ವಾಹನ ಮಾರಾಟದಲ್ಲೂ ಭಾರೀ ಬೆಳವಣಿಗೆ ಸಾಧಿಸಿದೆ.

2022ರ ಅಕ್ಟೋಬರ್ ತಿಂಗಳಲ್ಲಿ ಸೇಲ್ ಮಾಡಿದ 275,934 ಯುನಿಟ್‌ಗೆ ಹೋಲಿಸಿದರೆ, ಕಳೆದ ತಿಂಗಳು 344,957 ಮಾರಾಟ ಮಾಡಿ, ಶೇಕಡ 25% ಪ್ರಗತಿ ಕಂಡಿದೆ. ಪ್ರತ್ಯೇಕವಾಗಿ ಮೋಟಾರ್ ಸೈಕಲ್ಸ್ (Motorcycles) ಮಾರಾಟದ ಬಗ್ಗೆ ಮಾತನಾಡುವುದಾದರೆ, ಈ ಅಕ್ಟೋಬರ್ ತಿಂಗಳು 201,965 ಯುನಿಟ್ ಮಾರಾಟ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (164,568 ಯುನಿಟ್) ಶೇಕಡ 23% ಪ್ರಗತಿ ಸಾಧಿಸಿದೆ.

TVS iQube: ಭಾರೀ ಸಂಖ್ಯೆಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ, ನಂಬರ್ 1ಗೆ ಇನ್ನೊಂದೆ ಹಜ್ಜೆ!

ಸ್ಕೂಟರ್ಸ್ (Scooters) ಮಾರಾಟದ ಬಗ್ಗೆ ಹೇಳುವುದಾದರೆ, 2022ರ ಅಕ್ಟೋಬರ್‌ನಲ್ಲಿ 135,190 ಯುನಿಟ್ ಮಾರಾಟ ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ, ಕಳೆದ ತಿಂಗಳು 165,135 ಸೇಲ್ ಮಾಡಿದ್ದು, ಶೇಕಡ 22% ಬೆಳವಣಿಗೆ ಸಾಧಿಸಿದೆ. ಟಿವಿಎಸ್ ಕಂಪನಿಯ ರಫ್ತು ಕೂಡ ಉತ್ತಮವಾಗಿದ್ದು, ಈ ಅಕ್ಟೋಬರ್ (2023) ತಿಂಗಳು 87,952 ಯುನಿಟ್ ಎಕ್ಸ್ಪೋರ್ಟ್ ಮಾಡಿ, ಶೇಕಡ 6% ಬೆಳವಣಿಗೆ ಕಂಡಿದೆ.

ಟಿವಿಎಸ್ ತ್ರಿಚಕ್ರ ವಾಹನ (ಆಟೋ) ಮಾರಾಟದಲ್ಲೂ ಭರ್ಜರಿಯಾಗಿ ಯಶಸ್ವಿಯಾಗಿದೆ. ಹೋದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಅಕ್ಟೋಬರ್ ತಿಂಗಳು 15,658 ಯುನಿಟ್ ಸೇಲ್ ಮಾಡಿದೆ. 2022ರ ಇದೇ ಅವಧಿಯಲ್ಲಿ 14,104 ಯುನಿಟ್ ಮಾರಾಟ ಮಾಡಿತ್ತು.

ಟಿವಿಎಸ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿದೆ. ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ (iQube) ಅನ್ನು ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಕಳೆದ ತಿಂಗಳು 20,153 ಯುನಿಟ್ ಇ - ಸ್ಕೂಟರ್ ಮಾರಾಟ ಮಾಡಿದೆ. 2022ರ ಅಕ್ಟೋಬರ್‌ನಲ್ಲಿ ಕೇವಲ 8,103 ಯುನಿಟ್ ಸೇಲ್ ಮಾಡಿತ್ತು. ಟಿವಿಎಸ್ ಐಕ್ಯೂಬ್ ಮಾರಾಟ ವೇಗವೂ ಇದೇ ರೀತಿಯಲ್ಲಿ ಮುಂದುವರಿದರೆ, ನಂಬರ್ 1 ಆಗುವುದು ಗ್ಯಾರಂಟಿ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಿವಿಎಸ್ ಐಕ್ಯೂಬ್ ಬೆಂಗಳೂರಿನಲ್ಲಿ ರೂ.1,41,533 ಆನ್-ರೋಡ್ ಬೆಲೆಯಲ್ಲಿ ಲಭ್ಯವಿದ್ದು, ಎರಡು ರೂಪಾಂತರ ಆಯ್ಕೆಯಲ್ಲಿ ದೊರೆಯುತ್ತದೆ. ಇದರಲ್ಲಿ 3.04 kWh ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, 100 ಕಿಲೋಮೀಟರ್ ರೇಂಜ್ ಕೊಡುತ್ತದೆ. 75 km/h ಟಾಪ್ ಸ್ವೀಡ್ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳೊಂದಿಗೆ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 2, 2023, 11:59 [IST]
English summary
Tvs sales october 2023 iqube electric scooter trendsetter 20153 unit sold
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+