TVS: ಟಿವಿಎಸ್ ಕಂಪನಿಯಿಂದ ಹೊಸ ಬೈಕ್ ಟೀಸರ್ ಬಿಡುಗಡೆ, ಹಲ್‌ಚಲ್ ಸೃಷ್ಟಿ!

ದೇಶದಲ್ಲಿ ಟಿವಿಎಸ್ (TVS) ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮುಂಬರಲಿರುವ ಹೊಚ್ಚ ಹೊಸ ಪ್ರೀಮಿಯಂ ಮೋಟಾರ್‌ಸೈಕಲ್ ಟೀಸರ್ ಬಿಡುಗಡೆಗೊಳಿಸಿದೆ. ಇದು, ಸಖತ್ ಹಲ್‌ಚಲ್ ಸೃಷ್ಟಿಸಿದೆ. ಈ ಟೀಸರ್ ವಿಡಿಯೋದಲ್ಲಿ ತೋರಿಸುವ ದೃಶ್ಯಗಳು ನೂತನ ಅಪಾಚೆ ಆರ್‌ಟಿಆರ್ 310 ಬೈಕ್‌ನದ್ದು ಎನ್ನಲಾಗಿದೆ.

ಟಿವಿಎಸ್ ಕಂಪನಿ ಈ ಟೀಸರ್ ನಲ್ಲಿ ನೂತನ ಮೋಟಾರ್‌ಸೈಕಲ್ ಕುರಿತ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಲ್ಲ. ಸ್ಪ್ಲಿಟ್ ಸೀಟ್ ಲೇಔಟ್ ಜೊತೆಗೆ ಸೈಪ್-ಅಪ್ ಪಿಲಿಯನ್ ಸೀಟ್ ದೃಶ್ಯಗಳನ್ನು ಮಾತ್ರ ತೋರಿಸಿದೆ. ಇದು ಭಾರತದ ಮಾರುಕಟ್ಟೆಯಲ್ಲಿ ಮುಂಬರಲಿಯುವ ಟಿವಿಎಸ್ ಅಪಾಚೆ ಆರ್‌ಟಿಆರ್ 310 (TVS Apache RTR 310) ಮೋಟಾರ್‌ಸೈಕಲ್‌ ಎಂದು ಹಲವು ಆಟೋಮೊಬೈಲ್ ತಜ್ಞರು ಹೇಳುತ್ತಿದ್ದಾರೆ. ಆದರೆ, ಖಚಿತತೆ ಇಲ್ಲ.

TVS: ಟಿವಿಎಸ್ ಕಂಪನಿಯಿಂದ ಹೊಸ ಬೈಕ್ ಟೀಸರ್ ಬಿಡುಗಡೆ, ಹಲ್‌ಚಲ್ ಸೃಷ್ಟಿ!

ನೂತನ ಅಪಾಚೆ ಆರ್‌ಟಿಆರ್ 310 ಬೈಕ್‌ನ್ನು ಟಿವಿಎಸ್ ಕಂಪನಿಯು ಸೆಪ್ಟೆಂಬರ್ 6 ರಂದು ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಾಗತಿಕವಾಗಿ ಪರಿಚಯಿಸಲಿದೆ. ಈ ಮೋಟಾರ್‌ಸೈಕಲ್, ಸದ್ಯ ದೇಶದಲ್ಲಿ ಖರೀದಿಗೆ ಸಿಗುವ ಅಪಾಚೆ ಆರ್‌ಆರ್ 310 ಬೈಕ್‌ನಂತೆಯೇ ಚಾಸಿಸ್ ಆಧರಿಸಿರುವ ನೀರಿಕ್ಷೆಯಿದೆ. ಆದರೆ, ವಿನ್ಯಾಸ, ವೈಶಿಷ್ಟ್ಯದ ವಿಚಾರದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್‌, ಮುಸ್ಕ್ಯುಲರ್ ಫ್ಯುಯೆಲ್ ಟ್ಯಾಂಕ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್ ಸಿಸ್ಟಮ್ ಸೇರಿದಂತೆ ಸಾಕಷ್ಟು ಸ್ಟೈಲಿಂಗ್ ಫೀಚರ್ಸ್ ಹೊಂದಿರುವ ನೀರಿಕ್ಷೆಯಿದೆ. ಇದರೊಟ್ಟಿಗೆ ಫ್ರಂಟ್ USD ಫೋರ್ಕ್ಸ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆದಿರಲಿದ್ದು, ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆ ಹಾಗೂ ಡ್ಯುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಮುಂಬರಲಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್, 313 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ರಿವರ್ಸ್ ಇನ್‌ಲೈನ್ಡ್ ಎಂಜಿನ್ ಹೊಂದಿರುವ ನೀರಿಕ್ಷೆಯಿದ್ದು, 33 bhp ಗರಿಷ್ಠ ಪವರ್ ಮತ್ತು 27.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಬಹುದು. ಆದರೆ, ಗೇರ್ ಬಾಕ್ಸ್ ಆಯ್ಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ಅಪಾಚೆ ಆರ್‌ಆರ್ 310 (TVS Apache RR 310) ಬೈಕ್‌ ಬೆಂಗಳೂರಿನಲ್ಲಿ ರೂ.3,45,476 ಆನ್-ರೋಡ್ ಬೆಲೆಯಲ್ಲಿ ಸಿಗುತ್ತದೆ. ಇದರ, 312.2 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್, 33.5 bhp ಗರಿಷ್ಠ ಪವರ್ ಹಾಗೂ 27.3 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಬೈಕ್, 33.1 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ, ಫುಲ್ LED ಲೈಟಿಂಗ್, ಬ್ಲೂಟೂತ್ ಕನೆಕ್ಟ್ದ್ TFT ಡಿಸ್ಪ್ಲೇ, 11 ಲೀಟರ್ ಸಾಮರ್ಥ್ಯದ ಪ್ಯೂಯೆಲ್ ಟ್ಯಾಂಕ್ ಅನ್ನು ಒಳಗೊಂಡಿದೆ. ಡಬಲ್ ಡಿಸ್ಕ್ ಬ್ರೇಕ್, ಡ್ಯುಯಲ್-ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), 17 ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿದೆ.

ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್‌ಗೆ ಭಾರತದಲ್ಲಿ ಕೀವೇ ಕೆ300ಆರ್, ಬಿಎಂಡಬ್ಲ್ಯೂ ಜಿ310 RR, ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650, ಕೆಟಿಎಂ RC 390 ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಕೆಲವೇ ದಿನಗಳಲ್ಲಿ ಟಿವಿಎಸ್ ಕಂಪನಿ ನೂತನವಾಗಿ ಪ್ರೀಮಿಯಂ ಮೋಟಾರ್‌ಸೈಕಲ್ ಬಿಡುಗಡೆಗೊಳಿಸಲಿದ್ದು, ದೇಶೀಯ ಗ್ರಾಹಕರಿಗೆ ಅದರ ಮೇಲೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, August 21, 2023, 16:56 [IST]
English summary
Tvs teases new motorcycle possibly apache rtr 310 launch soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+