TVS: ನೂತನ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ಬಿಡುಗಡೆ, iQube ಬ್ರದರ್ ಇದು!
ದೇಶದಲ್ಲಿ ಟಿವಿಎಸ್ ಮೋಟಾರ್ (TVS Motor) ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ನಾಳೆ (ಆಗಸ್ಟ್ 23) ದುಬೈನಲ್ಲಿ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅನಾವರಣಗೊಳಿಸಲಿದೆ. ಸದ್ಯ, ಟಿವಿಎಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೊಸ ಇ-ಸ್ಕೂಟರ್‌ನ ಮತ್ತೊಂದು ಟೀಸರ್ ಬಿಡುಗಡೆಗೊಳಿಸಿದೆ.
ಈ ಟೀಸರ್ನಲ್ಲಿ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ ಟಿಎಫ್‌ಟಿ ಸ್ಕ್ರೀನ್‌ನ್ನು ತೋರಿಸಲಾಗಿದೆ. ಸ್ಕ್ರೀನ್ ನೋಡಿದ ತಕ್ಷಣ 'Xonic' ಕಣ್ಣಿಗೆ ಬೀಳುತ್ತದೆ. ಬಹುಶಃ ಇದೊಂದು ರೈಡಿಂಗ್ ಮೋಡ್ ಆಗಿರಬಹುದು ಎಂದು ಹೇಳಲಾಗಿದೆ. ಜೊತೆಯಲ್ಲಿ ವಾರ್ನಿಂಗ್ ಲೈಟ್ ಸ್ಕ್ರೀನ್ ಬಲ ಭಾಗದಲ್ಲಿ ಕಾಣಸಿಗುತ್ತದೆ. ಎಡ ಭಾಗದಲ್ಲಿ ಎನರ್ಜಿ ಹಾಗೂ ಟೈಮ್ ಅನ್ನು ನಾವು ನೋಡಬಹುದು.

ಇದರೊಟ್ಟಿಗೆ, ಬ್ಯಾಟರಿಯಲ್ಲಿ ಶೇಕಡ 60% ಚಾರ್ಜ್ ಇದ್ದು, ಅದರಲ್ಲಿ 63 ಕಿಮೀ ಓಡಿಸಬಹುದು ಎಂಬ ಮಾಹಿತಿಯನ್ನು ಟೀಸರ್ನಲ್ಲಿ ತೋರಿಸುವ ಟಿಎಫ್‌ಟಿ ಸ್ಕ್ರೀನ್ ಹೊಂದಿರುವುದನ್ನು ಕಾಣಬಹುದು. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ 105 kmph ಟಾಪ್ ಸ್ವೀಡ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಯಾವುದೇ ಖಚಿತ ಮಾಹಿತಿ ದೊರೆತ್ತಿಲ್ಲ.
ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಟಿವಿಎಸ್ ಕಂಪನಿಯ ನೂತನ ಎಲೆಕ್ಟ್ರಿಕ್ ಸ್ಕೂಟರ್, 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಕ್ರಿಯೋನ್ (Creon) ಸ್ಕೂಟರ್ ವಿನ್ಯಾಸವನ್ನು ಆಧರಿಸಿರಲಿದೆ. ಇದರಲ್ಲಿ ಬಳಕೆ ಮಾಡಿರುವ ಮೋಟಾರ್, 15 hp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ನೀರಿಕ್ಷೆಯಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 90 ಕಿಮೀ ವರೆಗೆ ರೇಂಜ್ ನೀಡಬಹುದು ಎಂದು ಹೇಳಲಾಗಿದೆ.
ಕೆಲವೇ ದಿನಗಳ ಹಿಂದೆ, ಟಿವಿಎಸ್ ಕಂಪನಿ, ಟಿಎಫ್‌ಟಿ ಸ್ಕ್ರೀನ್ - ಸ್ಮಾರ್ಟ್‌ವಾಚ್‌ಗೆ ಕನೆಕ್ಟ್ ಆಗಿರುವ ಟೀಸರ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಇದು, ರಿಮೋರ್ಟ್ ಎಂಟ್ರಿ, ವೆಹಿಕಲ್ ಲಾಕ್ ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿರುವ ಸಾಧ್ಯತೆಯಿದೆ. ಈಗಾಗಲೇ ಟಿಎಫ್‌ಟಿ ಸ್ಕ್ರೀನ್ ಹೊಂದಿರುವ ಓಲಾ ಎಸ್1 ಇ-ಸ್ಕೂಟರ್ ಮಾರುಕಟ್ಟೆಯಲ್ಲಿ ಕಮಲ್ ಮಾಡುತ್ತಿದೆ. ಅದಕ್ಕೆ ಫೈಟ್ ನೀಡಲು ಟಿವಿಎಸ್ ತನ್ನ ಹೊಸ ಸ್ಕೂಟರ್‌ನಲ್ಲಿಯು ಟಿಎಫ್‌ಟಿ ಸ್ಕ್ರೀನ್ ಪರಿಚಯಿಸಲಿದೆ.
ಟಿವಿಎಸ್ ಕಂಪನಿ, ಬಿಡುಗಡೆಗೊಳಿಸಲು ಹೊರಟಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಬಣ್ಣ, ಬ್ಯಾಟರಿ ಪ್ಯಾಕ್ ಸೇರಿದಂತೆ ಯಾವುದರ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ, ಗರಿಷ್ಠ ರೇಂಜ್ ನೊಂದಿಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆ ಕಾರಣಕ್ಕೆ ಪ್ರಸ್ತುತ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೋಲಿಸಿದರೆ, ಬೆಲೆ ಕೊಂಚ ಹೆಚ್ಚರಬಹುದು ಎನ್ನಲಾಗಿದ್ದು, ಸರಿ ಸುಮಾರು ರೂ.1.5 ಲಕ್ಷ ಆರಂಭಿಕ ದರಕ್ಕೆ ಸಿಗಬಹುದು.
ಟಿವಿಎಸ್ ಕಂಪನಿ, ತನ್ನ ಗಮನವನ್ನು ಎಲೆಕ್ಟ್ರಿಕ್ ಸ್ಕೂಟರ್ ಮೇಲೆಯೇ ಹರಿಸಿಲ್ಲ. ಪ್ರೀಮಿಯಂ ಮೋಟಾರ್‌ಸೈಕಲ್ ನತ್ತವೂ ನೆಟ್ಟಿದೆ. ಅಪಾಚೆ ಆರ್‌ಟಿಆರ್ 310 ಬೈಕ್‌ನದ್ದು ಎಂದು ಹೇಳಲಾಗಿರುವ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಇದರಲ್ಲಿ ನೂತನ ಮೋಟಾರ್‌ಸೈಕಲ್ ಬಗ್ಗೆ ಪ್ರತಿಯೊಂದು ವಿವರವನ್ನು ತೋರಿಸಿಲ್ಲ. ಕೇವಲ ಸ್ಪ್ಲಿಟ್ ಸೀಟ್ ಲೇಔಟ್ ಕುರಿತ ಕೆಲವೊಂದು ದೃಶ್ಯಗಳನ್ನು ಮಾತ್ರ ತೋರಿಸಲಾಗಿದೆ.
ಮುಂಬರಲಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯುವುದಾದರೆ, ಇದು, ಮುಸ್ಕ್ಯುಲರ್ ಫ್ಯುಯೆಲ್ ಟ್ಯಾಂಕ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್ ಸಿಸ್ಟಮ್, USD ಫೋರ್ಕ್ಸ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿರುವ ನೀರಿಕ್ಷೆಯಿದೆ. ಜೊತೆಯಲ್ಲಿ 313 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ರಿವರ್ಸ್ ಇನ್‌ಲೈನ್ಡ್ ಎಂಜಿನ್ ಪಡೆದಿರುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications