TVS iQube: ತುಂಬಾ ಕಡಿಮೆ ಬೆಲೆಗೆ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್?
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಟಿವಿಎಸ್ (TVS) ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ (iQube)ಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದು, ಶೀಘ್ರವೇ ಕಡಿಮೆ ಬೆಲೆಯ ಐಕ್ಯೂಬ್ ಸ್ಕೂಟರ್ ನೂತನ ರೂಪಾಂತರ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ಸದ್ಯ, ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಟಿವಿಎಸ್ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ಹೊಸ ರೂಪಾಂತರವನ್ನು ಅತ್ಯಂತ ಕಡಿಮೆ ಬೆಲೆಗೆ ಲಾಂಚ್ ಮಾಡಲು ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದೆ. ಆದರೆ, ಕಂಪನಿ ಕಡೆಯಿಂದ ಆ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಸಿಗುವ ಎಥರ್, ಬಜಾಜ್ ಮತ್ತು ಓಲಾ ಕಂಪನಿ ಇ-ಸ್ಕೂಟರ್ ಗಳಿಗೆ ಹೋಲಿಸಿದರೆ, ಟಿವಿಎಸ್ ಐಕ್ಯೂಬ್ ಬೆಲೆ ಕಡಿಮೆಯಿದೆ.

ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಕಂಪನಿಗಳು ಅದರ ಬ್ಯಾಟರಿಗೆ ಗರಿಷ್ಠ ಹಣವನ್ನು ವ್ಯಯಿಸಬೇಕು. ಇದರಿಂದಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿರುತ್ತದೆ. ಕೇಂದ್ರ ಸರ್ಕಾರ FAME 2 ಸಬ್ಸಿಡಿಯನ್ನು ಪರಿಷ್ಕರಣೆ ಮಾಡಿದ ಹಿನ್ನೆಲೆ, ದೇಶದಲ್ಲಿ ಇ - ಸ್ಕೂಟರ್ ಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಾರೆ.
ಇದಕ್ಕೆ ಪರಿಹಾರ ಹುಡುಕುವ ಕೆಲಸಕ್ಕೆ ಟಿವಿಎಸ್ ಮುಂದಾಗಿದ್ದು, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ನೂತನ ವೇರಿಯೆಂಟ್ ನಲ್ಲಿ ಸಣ್ಣ ಬ್ಯಾಟರಿ ಪ್ಯಾಕ್ ಉಪಯೋಗಿಸುವ ಮೂಲಕ ಗ್ರಾಹಕರಿಗೆ ಖರೀದಿ ವೆಚ್ಚವನ್ನು ಕಡಿಮೆಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಜೊತೆಗೆ ಈಗಿರುವ ಐಕ್ಯೂಬ್ ರೂಪಾಂತರಗಳ ಆಕರ್ಷಕ ವೈಶಿಷ್ಟ್ಯಗಳು, ಹೊಸ ರೂಪಾಂತರದಲ್ಲಿ ಒಂದಷ್ಟು ಇಲ್ಲದಿರಬಹುದು. ಮುಖ್ಯವಾಗಿ TFT ಡಿಸ್ಪ್ಲೇ ಚಿಕ್ಕದಿರಬಹುದು. ಈ ಬಗ್ಗೆ ಮುಂಬರುವ ದಿನಗಳಲ್ಲಿ ತಿಳಿಯಲಿದೆ.
ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್ ರೂ.1,23,776 ಮತ್ತು ಐಕ್ಯೂಬ್ ಎಸ್ ವೇರಿಯೆಂಟ್ ರೂ.1,38,883 (ದೆಹಲಿ) ಬೆಲೆಯಲ್ಲಿ ಹೊಂದಿದೆ. ಇವೆರೆಡು ರೂಪಾಂತರಗಳು 3.04 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 km ರೇಂಜ್ ನೀಡುತ್ತವೆ. 75 km/h ಟಾಪ್ ಸ್ವೀಡ್ ಹೊಂದಿವೆ.
ಟಿವಿಎಸ್ ಐಕ್ಯೂಬ್ ಸ್ಕೂಟರ್ ಬ್ಯಾಟರಿ ಪ್ಯಾಕ್, 0-80% ಚಾರ್ಜ್ ಆಗಲು 4 ಗಂಟೆ 30 ನಿಮಿಷಬೇಕು. ಇದಿಷ್ಟೇ ಅಲ್ಲದೆ, ಈ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರನ್ನು ಆಕರ್ಷಿಸುವ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುವಾಗಿ ದೊಡ್ಡದಾದ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ರೈಡಿಂಗ್ ಅಂಕಿಅಂಶ, ಬ್ಯಾಟರಿ ರೇಂಜ್ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇ ಕನೆಕ್ಟ್ ಮಾಡಬಹುದು.
ಟಿವಿಎಸ್ ಕಳೆದ ಜೂನ್ ತಿಂಗಳು, 14,462 ಯುನಿಟ್ ಐಕ್ಯೂಬ್ ಇ-ಸ್ಕೂಟರ್ ಮಾರಾಟ ಮಾಡಿ, ಮೇ ತಿಂಗಳಿಗೆ ಹೋಲಿಸಿದರೆ, FAME 2 ಸಬ್ಸಿಡಿ ಪರಿಣಾಮ ಕೊಂಚ ಹಿನ್ನೆಡೆ ಅನುಭವಿಸಿತು. ಇದೀಗ, ಸಣ್ಣ ಬ್ಯಾಟರಿ ಪ್ಯಾಕ್ ನ ಐಕ್ಯೂಬ್ ಹೊಸ ರೂಪಾಂತರವನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದು ಗ್ರಾಹಕರಿಗೆ ನೀರಿಕ್ಷೆ ಹೆಚ್ಚಾಗುವಂತೆ ಮಾಡಿದ್ದು, ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ತೆರೆಬೀಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications