ಅನಾವರಣಕ್ಕೂ ಮುನ್ನ ಬಹಿರಂಗಗೊಂಡ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452
ರಾಯಲ್ ಎನ್‌ಫೀಲ್ಡ್ ತನ್ನ ಬಹುನಿರೀಕ್ಷಿತ ಮುಂಬರುವ ಹಿಮಾಲಯನ್ 452 ಮೋಟಾರ್‌ಸೈಕಲ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ. ಇದಕ್ಕೆ ಹಿಂಟ್ ನೀಡುತ್ತಾ ಇದೀಗ ಮೋಟಾರ್‌ಸೈಕಲ್ ಅನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ಕೆಲ ರೀಲ್ಸ್ ಸಖತ್ ವೈರಲ್ ಆಗಿವೆ.
ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಈಗ ಮಾರಾಟದಲ್ಲಿರುವ ಹಿಮಾಲಯನ್‌ನಲ್ಲಿರುವ ಕೆಲ ನ್ಯೂನತೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮಾರುಕಟ್ಟೆಯಲ್ಲಿ ಹೆಚ್ಚು ಶಕ್ತಿಶಾಲಿ ಅಡ್ವೆಂಚರ್ ಬೈಕ್‌ಗಳಾದ KTM 390 ಅಡ್ವೆಂಚರ್‌ಗಳ ವಿರುದ್ಧ ಸ್ಪರ್ಧಿಸಲಿದೆ. ಏಕೆಂದರೆ ಈಗ ಮಾರಾಟದಲ್ಲಿರುವ ಮಾದರಿಯ ಪವರ್ ತೀರಾ ಕಡಿಮೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು.

ಸೋರಿಕೆಯಾದ ಮಾಹಿತಿಯ ಪ್ರಕಾರ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್‌ಸೈಕಲ್ ಹೊಸ 451.65 ಸಿಸಿ, ಲಿಕ್ವಿಡ್ - ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ ಅನ್ನು 8,000rpm ನಲ್ಲಿ 39.5bhp ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಹಾಗೆಯೇ ಈ ಪವರ್‌ಟ್ರೇನ್ 36Nm ನಿಂದ 39Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ ಎಂದು ನಾವು ನಿರೀಕ್ಷಿಸಲಾಗಿದೆ.
ಹೊಸ ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ಪವರ್ ಮತ್ತು ಟಾರ್ಕ್ ಉತ್ಪಾದನೆಯನ್ನು ಗರಿಷ್ಠಗೊಳಿಸಲು, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಅನ್ನು 6 - ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಜ್ಜುಗೊಳಿಸುವ ನಿರೀಕ್ಷೆಯಿದೆ. ಅಲ್ಲದೆ, ಮಾದರಿಯು ಸುಗಮವಾದ ಡೌನ್ ಶಿಫ್ಟ್‌ಗಳಿಗಾಗಿ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ನೀಡುವ ಹೆಚ್ಚಿನ ನಿರೀಕ್ಷೆಯಿದೆ.
ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್‌ಸೈಕಲ್ ಬ್ಲೂಟೂತ್ ಕನೆಕ್ಟಿವಿಟಿ, ಆಲ್-ಎಲ್‌ಇಡಿ ಲೈಟಿಂಗ್, ಡ್ಯುಯಲ್-ಚಾನೆಲ್ ಎಬಿಎಸ್ ಟೆಕ್, ಮಲ್ಟಿಪಲ್ ರೈಡ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್) ಮತ್ತು ಹೊಸ ವೃತ್ತಾಕಾರದ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ವಿನ್ಯಾಸದ ವಿಷಯದಲ್ಲಿ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್‌ಸೈಕಲ್ ಈಗಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮೋಟಾರ್‌ಸೈಕಲ್‌ನ ಅಪ್ಪನಂತೆ ಕಾಣುತ್ತಿದ್ದು ಹೆಚ್ಚು ಆಫ್‌ರೋಡರ್ ಆಗಿ ಕಾಣುತ್ತಿದೆ. ಕೆಲವು ಗಮನಾರ್ಹ ವಿನ್ಯಾಸದ ವೈಶಿಷ್ಟ್ಯಗಳಲ್ಲಿ ಸ್ಥಿರ ಹೆಡ್‌ಲ್ಯಾಂಪ್, ದೊಡ್ಡ ಇಂಧನ ಟ್ಯಾಂಕ್, ಸ್ಪ್ಲಿಟ್ ಸೀಟ್‌ಗಳು, ಮಧ್ಯ-ಸೆಟ್ ಫುಟ್‌ಪೆಗ್‌ಗಳು ಮತ್ತು ಹೆಚ್ಚಿನವು ಸೇರಿವೆ.
ಹಾರ್ಡ್‌ವೇರ್‌ಗೆ ಬಗ್ಗೆ ಮಾತನಾಡುವುದಾರೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್ ಸೈಕಲ್ ಮುಂಭಾಗದಲ್ಲಿ USD ಫೋರ್ಕ್‌ಗಳು, ಹಿಂಭಾಗದಲ್ಲಿ ಅರೆ - ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಮತ್ತು ದೊಡ್ಡದಾದ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳಂತಹ ಪ್ರೀಮಿಯಂ ಹಾರ್ಡ್‌ವೇರ್ ಬಿಟ್‌ಗಳನ್ನು ಹೊಂದಿದೆ.
ಹೋಮೋಲೋಗೇಶನ್ ದಾಖಲೆಗಳ ಪ್ರಕಾರ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್‌ಸೈಕಲ್ 2,245mm ಉದ್ದ, 852mm ಅಗಲ ಮತ್ತು 1,510mm ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದು ಈಗ ಮಾರಾಟದಲ್ಲಿರುವ ಹಿಮಾಲಯನ್ ಮೋಟಾರ್‌ಸೈಕಲ್‌ಗಿಂತ ಹಿಮಾಲಯನ್ 452 ಅನ್ನು ದೊಡ್ಡ ಬೈಕಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








