90ರ ದಶಕದ ಹಾಟ್‌ ಫೇವರೆಟ್ Yamaha RD350 ರೀ ಎಂಟ್ರಿ ಸಾಧ್ಯತೆ: ಯಮಹಾ ದೊಡ್ಡ ಮಟ್ಟದಲ್ಲಿ ಪ್ಲಾನ್

ಭಾರತ ಸೇರಿದಂತೆ ಹಲವಾರು ಜಾಗತಿಕ ಮಾರುಕಟ್ಟೆಗಳಲ್ಲಿ ರೆಟ್ರೊ ಶೈಲಿಯ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೆಲವು ಕಂಪನಿಗಳು ತಮ್ಮ ಬಹುಬೇಡಿಕೆಯ ರೆಟ್ರೋ ಮಾದರಿಗಳ ಹೆಸರಿನಲ್ಲಿ ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಿದರೆ, ಅನೇಕ ಬ್ರಾಂಡ್‌ಗಳು ಹಳೆಯ ಸಾಂಪ್ರದಾಯಿಕ ಮಾದರಿಗಳನ್ನು ಅದೇ ಡಿಸೈನ್‌ನಲ್ಲಿ ತರಲು ಮುಂದಾಗುತ್ತಿದ್ದಾರೆ.

ಯಮಹಾ ಕೂಡ ಇತ್ತೀಚೆಗೆ ಜಪಾನ್‌ನಲ್ಲಿ RZ350 ಮತ್ತು RZ250 ಗಾಗಿ ಟ್ರೇಡ್‌ ಮಾರ್ಕ್‌ಗಳನ್ನು ಸಲ್ಲಿಸಿರುವುದು ತಿಳಿದುಬಂದಿದೆ. ಇವು Yamaha RD350 ಸ್ಥಾನವನ್ನು ಬರ್ತಿ ಮಾಡಲಿವೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಯಮಹಾಗೆ ಬಹುದೊಡ್ಡ ಮಾರುಕಟ್ಟೆ ಇರುವುದರಿಂದ ರೆಟ್ರೊ ಬೈಕ್‌ಗಳ ಕ್ರೇಜ್ ಅನ್ನು ಪರಿಗಣಿಸಿ, ಯಮಹಾ ಭಾರತದಲ್ಲಿ RZ350 ಮತ್ತು RZ250 ಅನ್ನು ಪರಿಚಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.

Yamaha RD350

90ರ ದಶಕದ ಯುವಕರ ಹಾಟ್‌ ಫೆವರೆಟ್: 80 ಮತ್ತು 90 ರ ದಶಕದಲ್ಲಿ RD350 ಭಾರತದಲ್ಲಿ ಲಭ್ಯವಿತ್ತು. ಅದರ ಶ್ರೇಷ್ಠ ವಿನ್ಯಾಸ ಮತ್ತು ಪವರ್‌ಫುಲ್ ಪರ್ಫಾಮೆನ್ಸ್‌ನಿಂದಲೇ ಹೆಚ್ಚು ಜನಪ್ರಿಯವಾಗಿತ್ತು. ಇಂದಿಗೂ ಸಹ RD350 ಚಾಲನೆಯಲ್ಲಿರುವುದನ್ನು ಕಾಣಬಹುದು. ದೇಶದ ಹಲವಾರು ಭಾಗಗಳಲ್ಲಿ ವಿವಿಧ ಆರ್‌ಡಿ ಕ್ಲಬ್‌ಗಳು ಇಂದಿಗೂ ಇವೆ ಎಂದರೆ ಇದರ ಕ್ರೇಜ್ ಯಾವ ಮಟ್ಟಿಗೆ ಇದೆ ಎಂದು ಅರ್ಥ ಮಾಡಿಕೊಳ್ಳಿ.

ಇಂತಹ ಅಚ್ಚಳಿಯದ ಅಭಿಮಾನಿಗಳನ್ನು ಹೊಂದಿರುವ RD350 ಭಾರತೀಯ ಮಾರುಕಟ್ಟೆಗೆ ಮರಳಿದರೆ ಆಶ್ಚರ್ಯವೇನಿಲ್ಲ. ಏಕೆಂದರೆ ಯಮಹಾ ಈಗಾಗಲೇ ಭಾರತದಲ್ಲಿ ಹೆಚ್ಚಿನ ಸಾಮರ್ಥ್ಯದ ಬೈಕ್ ಗಳನ್ನು ಪರಿಚಯಿಸಲು ನೋಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಯಮಹಾ ಇತ್ತೀಚೆಗೆ R3, R7, MT03, MT07 ಮತ್ತು MT09 ಅನ್ನು ಡೀಲರ್ ಈವೆಂಟ್ ಒಂದರಲ್ಲಿ ಪ್ರದರ್ಶಿಸಿತ್ತು.

Yamaha RD350

ಇದು ಕಂಪನಿಯು ತನ್ನ ದೊಡ್ಡ ಬೈಕ್‌ಗಳನ್ನು ಭಾರತಕ್ಕೆ ತರುವ ಉದ್ದೇಶವನ್ನು ಬಹಿರಂಗಪಡಿಸುತ್ತದೆ. ಸದ್ಯ ಭಾರತದಲ್ಲಿ ಮಧ್ಯಮ ತೂಕದ ಬೈಕ್ ವಿಭಾಗವು ಬಲವಾದ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಸದ್ಯಕ್ಕೆ, ಮಿಡಲ್ ವೇಟ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಬಹುತೇಕ ಮಾರುಕಟ್ಟೆ ಪಾಲನ್ನು ರಾಯಲ್ ಎನ್‌ಫೀಲ್ಡ್ ವಹಿಸಿಕೊಂಡಿದೆ. ಉಳಿದಂತೆ ಹೋಂಡಾ H'ness CB350, Jawa / Yezdi ಕೂಡ ಇವೆ.

ಇದೀಗ ಮಧ್ಯಮ ತೂಕದ ವಿಭಾಗಕ್ಕೆ ಪ್ರವೇಶಿಸಲು ನೋಡುತ್ತಿರುವ ಬ್ರ್ಯಾಂಡ್‌ಗಳಲ್ಲಿ ಯಮಹಾ ಕೂಡ ಇದೆ. ಭಾರತದಲ್ಲಿ ಪ್ರಸ್ತುತ 250cc FZ 25 ಮತ್ತು FZS 25 ಮಾದರಿಗಳು ಯಮಹಾ ನೀಡುತ್ತಿರುವ ಅತ್ಯಧಿಕ ಸಾಮರ್ಥ್ಯದ ಬೈಕ್‌ಗಳಾಗಿವೆ. ಮಧ್ಯಮ ತೂಕದ ವಿಭಾಗಕ್ಕೆ ಹೀರೋ-ಹಾರ್ಲಿ ಮತ್ತು ಬಜಾಜ್-ಟ್ರಯಂಫ್ ಬೈಕ್‌ಗಳು ಕೂಡ ಮುಂಬರುವ ದಿನಗಳಲ್ಲಿ ಎಂಟ್ರಿ ಕೊಡಲಿವೆ.

Yamaha RD350

ಏನೆಲ್ಲಾ ನಿರೀಕ್ಷಿಸಬಹುದು: RD350 ಅನ್ನು ಆಧುನಿಕ ಕ್ಲಾಸಿಕ್ ಆಗಿ ಮರುಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ರಾಯಲ್ ಎನ್‌ಫೀಲ್ಡ್ 350cc ಶ್ರೇಣಿ, Jawa / Yezdi, ಹೋಂಡಾ H'ness CB350 ಮತ್ತು ಮುಂಬರುವ ಬಜಾಜ್ ಟ್ರಯಂಫ್ ಮತ್ತು ಹೀರೋ ಹಾರ್ಲಿ ಬೈಕ್‌ಗಳಿಗೆ ಎದುರಾಳಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಬಹುದು ಎನ್ನಲಾಗಿದೆ.

ಮೂಲ ಯಮಹಾ RD350 347cc ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 39 bhp ಪವರ್ ಉತ್ಪಾದಿಸುತ್ತಿತ್ತು. ಇದನ್ನು 6 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿತ್ತು. 2-ಸ್ಟ್ರೋಕ್ ಸಮಾನಾಂತರ ಅವಳಿ ಮೋಟಾರ್‌ ಪರ್ಫಾಮೆನ್ಸ್‌ನಿಂದಾಗಿ ಅಪಾರ ಜನಪ್ರಿಯತೆ ಗಳಿಸಿತ್ತು. ಇದೀಗ ಮುಂಬರುವ RD350 ಅನ್ನು ಕಟ್ಟುನಿಟ್ಟಾದ ಹೊರಸೂಸುವಿಕೆ ಮಾನದಂಡಗಳಿಗೆ ಅನುಗುಣವಾಗಿ ಅಪ್‌ಗ್ರೇಡ್ ಮಾಡಬಹುದು.

Image Courtesy: Blue smoke custom

More from DriveSpark

Article Published On: Saturday, May 6, 2023, 13:45 [IST]
English summary
Yamaha rd 350 re entry indian market possibility
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+