ಜಪಾನ್‌ನಲ್ಲಿ ಯಮಹಾ ಟ್ರಿಸಿಟಿ 125 ಮತ್ತು 155 ಬಿಡುಗಡೆ... ಭಾರತಕ್ಕೆ ಯಾವಾಗ?
ಯಮಹಾ ತನ್ನ ತವರು ನೆಲವಾದ ಜಪಾನ್‌ನಲ್ಲಿ ಟ್ರಿಸಿಟಿ 125 ಮತ್ತು ಟ್ರಿಸಿಟಿ 155 ಅನ್ನು ಬಿಡುಗಡೆ ಮಾಡಿದೆ. ಎರಡೂ ಮೂರು-ಚಕ್ರ ವಾಹನಗಳು ಸಾಕಷ್ಟು ಆಸಕ್ತಿದಾಯಕ ಪ್ಯಾಕೇಜ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಸದ್ಯ ಇವು ಯುರೋಪ್ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಭಾರತದಲ್ಲೂ ಬಿಡುಗಡೆಯಾಗಲಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಎರಡೂ ಟ್ರಿಸಿಟಿ ಅವಳಿ ಸ್ಕೂಟರ್‌ಗಳನ್ನು ಒಂದೇ ವಿನ್ಯಾಸವನ್ನು ಹೊಂದಿದ್ದು, ಮೇಲಿನ ಎಲ್ಇಡಿ ಡಿಆರ್ಎಲ್‌ಗಳ ಜೊತೆಗೆ ಸೆಂಟರ್- ಸೆಟ್ ಎಲ್ಇಡಿ ಹೆಡ್ಲೈಟ್ ಅನ್ನು ಪಡೆಯುತ್ತವೆ. LCD ಇನ್‌ಸ್ಟ್ರೂಮೆಂಟ್ ಕನ್ಸೋಲ್ ಅನ್ನು ಆವರಿಸುವ ಟ್ರಾನ್ಸ್ಪರೆಂಟ್ ಮಾಸ್ಕ್ ಸೆಟಪ್ ತುಂಬಾ ಆಕರ್ಷಣೀಯವಾಗಿ ಕಾಣುತ್ತದೆ. ಯಮಹಾ ಟ್ರಿಸಿಟಿ 125 ಮತ್ತು 155 ಅನ್ನು ಸ್ಕೂಪ್ ಮಾಡಿದ ಸಿಂಗಲ್ ಸೀಟ್ ಮತ್ತು ಸೈಡ್ ಪ್ಯಾನೆಲ್ ಇಂಟಿಗ್ರೇಟೆಡ್ ಗ್ರ್ಯಾಬ್ ರೈಲ್‌ನೊಂದಿಗೆ ಸಜ್ಜುಗೊಳಿಸಲಾಗಿದೆ.

ಚಿಕ್ಕ ಮಾದರಿಯು 125cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಮೋಟಾರ್ ಅನ್ನು ಹೊಂದಿದ್ದು, 12.06 bhp ಮತ್ತು 11.2 Nm ಟಾರ್ಕ್ ಅನ್ನು ಹೊರ ಹಾಕುತ್ತದೆ. ಟ್ರಿಸಿಟಿ 155 ಪ್ರಸ್ತುತ R15 V4 ನಲ್ಲಿರುವ ಅದೇ ಎಂಜಿನ್ ಅನ್ನು ಬಳಸುತ್ತದೆ. ಇದು VVA ಜೊತೆಗೆ 155 cc ಸಿಂಗಲ್- ಸಿಲಿಂಡರ್ ಲಿಕ್ವಿಡ್- ಕೂಲ್ಡ್ ಮೋಟಾರ್ ಅನ್ನು ಹೊಂದಿದ್ದು, 14.88 bhp ಮತ್ತು 14 Nm ಟಾರ್ಕ್ ಅನ್ನು ಹೊರಹಾಕುತ್ತದೆ.
ಇನ್ನು R15 ಮಾದರಿಯು 18.1 bhp ಪವರ್ ಅನ್ನು ಹೊರಹಾಕುತ್ತದೆ (ತಿಳುವಳಿಕೆಗಾಗಿ). ಅಂದರೆ ಇದರರ್ಥ ಸ್ಕೂಟರ್‌ಗೆ ತಕ್ಕಂತೆ ಟ್ರಿಸಿಟಿ 155 ಮೋಟರ್ ಅನ್ನು ಡಿಟ್ಯೂನ್ ಮಾಡಲಾಗಿದೆ. ಎರಡೂ ಮಾದರಿಗಳು ಅಟೋ ಸ್ಟಾಪ್/ಸ್ಟಾರ್ಟ್ ಸಿಸ್ಟಮ್ ಜೊತೆಗೆ ಬರುತ್ತವೆ. ಎರಡೂ ಮಾದರಿಗಳು ಎಲ್ಇಡಿ ಇಲ್ಯುಮಿನೇಷನ್, ಕೀಲೆಸ್ ಫಂಕ್ಷನ್ ಮತ್ತು ಸ್ಮಾರ್ಟ್ಫೋನ್-ಹೊಂದಾಣಿಕೆಯ ಕನ್ಸೋಲ್ ಅನ್ನು ಪಡೆಯುತ್ತವೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಡ್ಯುಯಲ್ ರಿಯರ್ ಶಾಕ್‌ಗಳನ್ನು ಪಡೆದಿವೆ.

ಬ್ರೇಕಿಂಗ್ ಹಾರ್ಡ್‌ವೇರ್ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು 14-ಇಂಚಿನ ಮುಂಭಾಗದ ಅಲಾಯ್‌ಗಳು ಮತ್ತು 13-ಇಂಚಿನ ಹಿಂಭಾಗದ ಘಟಕದಲ್ಲಿ ಅಳವಡಿಸಲಾಗಿದೆ. ಜಪಾನ್‌ನಲ್ಲಿ, ಯಮಹಾ ಟ್ರಿಸಿಟಿ 125 JPY 4,95,000 (ಸುಮಾರು Rs 3.10 ಲಕ್ಷ ರೂ.) ಮತ್ತು 155cc ರೂಪಾಂತರದ ಬೆಲೆ JPY 5,56,500 (ಅಂದಾಜು Rs 3.54 ಲಕ್ಷ ರೂ.) ಇದೆ. ಎರಡೂ ಮಾದರಿಗಳು ಗಮನಾರ್ಹವಾಗಿ ಬೆಲೆಗಳನ್ನು ಪಡೆದಿದ್ದು, ಈಗಲೇ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ.
ಯಮಹಾ ಯುರೋಪ್ ಮಾರುಕಟ್ಟೆಯಲ್ಲಿ ಟ್ರಿಸಿಟಿ ತ್ರೀ ವೀಲರ್‌ನ ನವೀಕರಿಸಿದ ಆವೃತ್ತಿಯನ್ನು ಈಗಾಗಲೇ ಪರಿಚಯಿಸಿದೆ. ಟ್ರಿಸಿಟಿ 125, 2014 ರಿಂದ ಯುರೋಪ್‌ನಾದ್ಯಂತ ಮಾರಾಟದಲ್ಲಿದೆ. ಕಳೆದ ಹಲವು ವರ್ಷಗಳಿಂದ ಇದು ನಿಕಾನ್ ತ್ರೀ ವೀಲರ್‌ನಂತೆಯೇ ಅನನ್ಯ ಗ್ರಾಹಕ ಶ್ರೇಣಿಯನ್ನು ಹೊಂದಿದೆ. 2022 ಮಾದರಿಯಲ್ಲಿ, 125cc ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್, ಯುರೋ 5 ಮಾನದಂಡಗಳನ್ನು ಪೂರೈಸಿ ಅಲ್ಲಿನ ಮಾರುಕಟ್ಟೆಯಲ್ಲಿ ಯಶಸ್ವಿ ಮಾರಾಟ ಸಾಧಿಸುತ್ತಿದೆ.

ಯುರೋಪ್ ಗ್ರಾಹಕರಿಗೆ ಅನುಗುಣವಾಗಿ ವೇರಿಯಬಲ್ ವಾಲ್ವ್ ಆಕ್ಟಿವೇಶನ್ ಮತ್ತು ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಜೊತೆಗೆ, ಪವರ್‌ಟ್ರೇನ್ ಯಮಹಾದ ಬ್ಲೂ ಕೋರ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಡ್ಯುಯಲ್ ಫ್ರಂಟ್ ವೀಲ್‌ಗಳೊಂದಿಗೆ ಎಲ್‌ಎಂಡಬ್ಲ್ಯೂ (ಲೀನಿಂಗ್ ಮಲ್ಟಿ ವೀಲ್) ಅಕರ್‌ಮ್ಯಾನ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಈ ವಿನ್ಯಾಸದಿಂದಾಗಿಯೇ ಈ ಸ್ಕೂಟರ್ ಇತರ ಮಾದರಿಗಳಿಗಿಂತ ಭಿನ್ನವಾಗಿರುತ್ತದೆ. ಅಲ್ಲದೇ ಇತರ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಸ್ಟೆಬಿಲಿಟಿ ಹೆಚ್ಚಾಗಿರುತ್ತದೆ.
ಉತ್ತಮ ರೈಡಿಂಗ್ ಗುಣಮಟ್ಟಕ್ಕಾಗಿ ಜಪಾನಿನ ತಯಾರಕರು ಹಿಂದಿನ ಟ್ವಿನ್ ಅಬ್ಸಾರ್ಬರ್ ಗಳನ್ನು ಸಹ ಪ್ರಮಾಣಿತವಾಗಿ ನೀಡಿದ್ದಾರೆ. ಮುಂಭಾಗದಲ್ಲಿ 2022 ಯಮಹಾ ಟ್ರಿನಿಟಿ 125 ಡ್ಯುಯಲ್ 220 ಎಂಎಂ ಫ್ರಂಟ್ ಡಿಸ್ಕ್ ಯೂನಿಟ್ ಮತ್ತು ಸಿಂಗಲ್ 230 ಎಂಎಂ ರಿಯರ್ ಡಿಸ್ಕ್ ಅನ್ನು ಹೊಂದಿದೆ. ಇವು ವಾಹನ ನಿಯಂತ್ರಣಕ್ಕೆ ಬಹುಮುಖ್ಯ ಪಾತ್ರ ವಹಿಸುತ್ತವೆ. ಇನ್ನು ಡಿಸೈನ್‌ನಲ್ಲೂ ತುಂಬಾ ಆಕರ್ಷಣಿಯ ಹಾಗೂ ವಿಭಿನ್ನವಾಗಿರುವುದರಿಂದ ಮಾರಾಟವು ಹೆಚ್ಚಾಗಿದೆ.


Click it and Unblock the Notifications








