Yamaha ಪ್ರಿಯರೇ ಫೆ.13 ರಂದು ಹೊಸ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಮೂರು ಬೈಕ್‌ಗಳ ಬಿಡುಗಡೆ
ಯಮಹಾ ಮೋಟಾರ್ ಇಂಡಿಯಾ ಫೆಬ್ರವರಿ 13, 2023 ರಂದು ಹೊಸ ದ್ವಿಚಕ್ರ ವಾಹನಗಳ ಗುಂಪನ್ನು ಪರಿಚಯಿಸಲಿದೆ. ಕಂಪನಿಯು ನವೀಕರಿಸಿದ R15 V4, MT 15 ಮತ್ತು FZ-X ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇವು ಮುಂಬರುವ BS6 ಹಂತ-2 ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸಿ ಕೆಲವು ಹೊಸ ಹೈಟೆಕ್ ವೈಶಿಷ್ಟ್ಯಗಳನ್ನು ಪಡೆಯಲಿವೆ.
2023 Yamaha R15, MT 15: ಹೊಸತೇನಿದೆ?
2023 ಯಮಹಾ R15 ಹೊಸ TFT ಸ್ಕ್ರೀನ್ ಅನ್ನು ಬ್ಲೂಟೂತ್ ಸಂಪರ್ಕ ವ್ಯವಸ್ಥೆಯೊಂದಿಗೆ ಪಡೆಯುತ್ತದೆ. ಆದರೆ ಪ್ರಸ್ತುತ ಮಾದರಿಯು LCD ಕ್ಲಸ್ಟರ್ ಹೊಂದಿದೆ. ಯಮಹಾದ MT 15 ಹೊಸ ಡ್ಯುಯಲ್-ಚಾನೆಲ್ ABS ರೂಪಾಂತರವನ್ನು ಪಡೆಯುತ್ತದೆ. ಎರಡೂ ಮೋಟಾರ್‌ಸೈಕಲ್‌ಗಳು OBD 2-ಕಂಪ್ಲೈಂಟ್ 155cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಲಿದ್ದು, ಇವು 18.1 bhp ಮತ್ತು 14.2 Nm ಟಾರ್ಕ್ ಅನ್ನು ಹೊರಹಾಕುತ್ತವೆ. ಇವು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತವೆ.

2023 Yamaha FZ-X: ಏನನ್ನು ನಿರೀಕ್ಷಿಸಬಹುದು?
Yamaha FZ-X ಡ್ಯುಯಲ್-ಚಾನೆಲ್ ABS ನೊಂದಿಗೆ ಹೊಸ ರೂಪಾಂತರವನ್ನು ಪಡೆಯುವ ಸಾಧ್ಯತೆಯಿದೆ. ಈ ನವೀಕರಣದ ಹೊರತಾಗಿ, ಇದು ಹೊಸ ಬಣ್ಣಗಳು ಮತ್ತು OBD 2-ಕಾಂಪ್ಲೈಂಟ್ 149cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಪಡೆಯುತ್ತದೆ. ಇದು 12.2 bhp ಮತ್ತು 13.3 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
2023 Yamaha R15, MT 15, FZ-X: ಭಾರತದಲ್ಲಿ ಬೆಲೆ
Yamaha R15 ಪ್ರಸ್ತುತ ರೂ. 1.80 ಲಕ್ಷದಿಂದ ರೂ. 1.93 ಲಕ್ಷ ಎಕ್ಸ್ ಶೋ ರೂಂ, MT 15 ರೂ. 1.65 ಲಕ್ಷದಿಂದ ರೂ. 1.67 ಲಕ್ಷ ಎಕ್ಸ್ ಶೋ ರೂಂ, FZ-X ರೂ. 1.34 ಲಕ್ಷ ಎಕ್ಸ್ ಶೋ ರೂಂ ಬೆಲೆಗಳನ್ನು ಹೊಂದಿವೆ. ಮುಂಬರುವ Yamaha ಶ್ರೇಣಿಯು ಪ್ರಸ್ತುತ ಬೆಲೆಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತವೆ ಎಂದು ನಿರೀಕ್ಷಿಸಬಹುದು.

ಏಕೆಂದರೆ ಈ ವರ್ಷದ ಏಪ್ರಿಲ್‌ನಿಂದ ಎಲ್ಲಾ ವಾಹನಗಳು BS6 ಹಂತ-2 ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ಉತ್ಪನ್ನಗಳಿಗಾಗಿ ತುಸು ಹೆಚ್ಚಿನ ವೆಚ್ಚ ತಗುಲುವುದರಿಂದ ಬೆಲೆಯನ್ನು ಕೂಡ ಹೆಚ್ಚಿಸಬಹುದು. ಜೊತೆಗೆ ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಅತ್ಯಾಧುನಿಕ ಫೀಚರ್‌ಗಳ ಜೋಡಣೆಯಿಂದ ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ. 2023 Yamaha R15, MT 15, FZ-X ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟದಲ್ಲಿವೆ.
ಇದೀಗ ಹೊಸ 2023 ನವೀಕೃತ ಮಾದರಿಗಳು ಬೇಡಿಕೆ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ. ಕಂಪನಿ ಕೂಡ ಆಧುನಿಕ ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಆಧ್ಯತೆ ನೀಡಿರುವುದಾಗಿ ತಿಳಿಸಿದ್ದು, ಬೈಕ್‌ಗಳು ಆಯಾ ವಿಭಾಗಗಳಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗೆ ತೀರ್ವ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಈ ಮೂರು ಬೈಕ್‌ಗಳು ಹೆಚ್ಚಾಗಿ ಯುವ ಜನತೆಗಾಗಿ ರೂಪಿಸಿರುವುದರಿಂದ ಪವರ್ ಹಾಗೂ ಟಾರ್ಕ್‌ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ತನ್ನ ಹಿಂದಿನ ಮಾದರಿಗಳಂತೆ ಅದೇ ಪವರ್ ಔಟ್‌ಪುಟ್ ಇರುವುದನ್ನು ಗಮನಿಸಬೇಕಾಗಿದೆ.
RX100 ಮತ್ತೆ ಬರಲಿದೆಯೇ?
RX100 ಹೆಸರಿಗೆ ಭಾರತದಲ್ಲಿ ದೊಡ್ಡ ಕ್ರೇಜ್ ಹೊಂದಿರುವುದನ್ನು ಮನಗಂಡಿರುವ ಯಮಹಾ ಕಂಪನಿ, ಅದೇ ಹೆಸರಿನಲ್ಲಿ ಮತ್ತೊಂದು ಬೈಕ್ ಅನ್ನು ಲಾಂಚ್ ಮಾಡುವ ನಿರೀಕ್ಷೆಯಿದೆ. ಆದರೆ, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಯಮಹಾ ಇಂಡಿಯಾದ ಅಧ್ಯಕ್ಷ ಇಶಿನ್ ಸಿಹಾನಾ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿ, ಯಮಹಾ ಕಂಪನಿ 'RX 100' ಬೈಕ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುತ್ತದೆ. ಇದೇ ಕಾರಣದಿಂದಾಗಿ ಬೇರೆ ಬೈಕ್‌ಗಳಿಗೆ ಈ ಹೆಸರನ್ನು ಬಳಸುತ್ತಿಲ್ಲ' ಎಂದು ಹೇಳಿದ್ದಾರೆ.
ಇದರೊಂದಿಗೆ ಯಮಹಾ RX 100 ಬೈಕ್ ಮತ್ತೆ ದೇಶೀಯ ಮಾರುಕಟ್ಟೆಯಲ್ಲಿ ಬರುವುದು ಖಚಿತವಾಗಿದೆ. ಯಮಹಾ ಕಂಪನಿ, ಹೊಸ ಬೈಕ್ ಅನ್ನು ಹಿಂದಿನ RX 100 ವಿನ್ಯಾಸದಲ್ಲಿ ಲಾಂಚ್ ಮಾಡಲಿದೆ. ಆದರೆ, ಎಂಜಿನ್ ವಿಷಯಕ್ಕೆ ಬಂದರೆ, ಹಳೆಯ 2 ಸ್ಟೋಕ್ ಎಂಜಿನ್ ಬದಲಿಗೆ ಈಗಿರುವ ಎಂಜಿನ್ ಬಳಸಿ ವಿನ್ಯಾಸಗೊಳಿಸಿ, ಗ್ರಾಹಕರಿಗೆ ಖರೀದಿಗೆ ನೀಡಬಹುದು. ಇವನ್ನೆಲ್ಲ ಗಮನಿಸಿದಾಗ ಈ ಬೈಕ್, ನೋಡಲು ಅತ್ಯಾಕರ್ಷಕವಾಗಿ ಇರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಳೆಯ ಆ ಶಬ್ದವನ್ನು ನಿರೀಕ್ಷಿಸಲು ಅಸಾಧ್ಯ.


Click it and Unblock the Notifications








