ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ: ರೂ.55,555ಕ್ಕೆ Yulu Wynn ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ವಿಶೇಷತೆಗಳೇನು?

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲೂ ಈ ವಿಭಾಗದಲ್ಲಿ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿವೆ. ಸದ್ಯ, ಬೆಂಗಳೂರಿನ 'ಯುಲು' ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಇ-ಸ್ಕೂಟರ್‌ವೊಂದನ್ನು ಲಾಂಚ್ ಮಾಡಿದೆ.

ಯುಲು (Yulu) ಕಂಪನಿ, ವೈನ್ (Wynn) ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.55,555 ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಗೊಳಿಸಿದ್ದು, ರೂ.999 ಮುಂಗಡ ಹಣ ಪಾವತಿಸಿ, ಬುಕಿಂಗ್ ಮಾಡಬಹುದು. ಲಾಂಚ್ ಆಫರ್ ಕೆಲವೇ ದಿನಗಳವರೆಗೆ ಇರಲಿದೆ. ಆ ನಂತರ, ಇದರ ಬೆಲೆ ರೂ.64,999 ಆಗಲಿದ್ದು, ಮೇ ಮಧ್ಯ ಭಾಗದಲ್ಲಿ ವಿತರಣೆ ಆರಂಭವಾಗಲಿದೆ. ಸದ್ಯ, ಯುಲು ವೈನ್ ಇ-ಸ್ಕೂಟರ್ ಬೆಂಗಳೂರಿನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ: ರೂ.55,555ಕ್ಕೆ Yulu Wynn ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ವಿಶೇಷತೆಗಳೇನು?

ವೈಯಕ್ತಿಯ ಬಳಕೆಗಾಗಿ ಯುಲು ವೈನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 'ಬಜಾಜ್‌' ಕಂಪನಿ ಮಾಲೀಕತ್ವದ ಚೇತಕ್ ಟೆಕ್ನಾಲಜೀಸ್ ಲಿಮಿಟೆಡ್ (CTL) ಅಭಿವೃದ್ಧಿಪಡಿಸಿದೆ. ಈ ಸ್ಕೂಟರ್ ಓಡಿಸಲು ಯಾವುದೇ ರೀತಿಯ ಡ್ರೈವಿಂಗ್ ಲೈಸೆನ್ಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಇದರಿಂದಾಗಿ ಈ ಸ್ಕೂಟರ್‌ನ್ನು ಹೆಚ್ಚಿನ ಮಂದಿ ಲೈಕ್ ಮಾಡಬಹುದು.

ಈ ಸ್ಕೂಟರ್‌ನಲ್ಲಿ 984.3 Wh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಸಂಪೂರ್ಣ ಚಾರ್ಜಿನಲ್ಲಿ 68 km ರೇಂಜ್ ನೀಡಲಿದೆ. ಇದರಲ್ಲಿ ಬಳಕೆ ಮಾಡಿರುವ ಮೋಟರ್ ಹಬ್ ಮೌಂಟೆಡ್ ಯುನಿಟ್ ಆಗಿದ್ದು, 25km/h ಟಾಪ್ ಸ್ವೀಡ್ ಹೊಂದಿದೆ. ಕಂಪನಿಯು ಮುಲ್ಟಿಪಲ್ ಮೊಬಿಲಿಟಿ ಪಾಕ್ ಅನ್ನು ಕೊಡುತ್ತಿದ್ದು, ಅದರ ಚಂದಾದಾರಿಕೆ ಶುಲ್ಕ ರೂ.499 ರಿಂದ 899 ಇದ್ದು, ಇದರಿಂದ ಪ್ರತಿ ಕಿ.ಮೀ ಕ್ರಮಿಸಲು 70 ವೆಚ್ಚವಾಗಲಿದೆ.

ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ: ರೂ.55,555ಕ್ಕೆ Yulu Wynn ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ವಿಶೇಷತೆಗಳೇನು?

ಯುಲು ವೈನ್ ಎಲೆಕ್ಟ್ರಿಕ್ ಸ್ಕೂಟರ್ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದು, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಡ್ಯುಯಲ್ ಸ್ಪ್ರಿಂಗ್‌ ಸಸ್ಪೆಷನ್ ಸೆಟಪ್ ಹೊಂದಿದೆ. ಜೊತೆಗೆ ಫ್ರಂಟ್, ರೇರ್, 110ಎಂಎಂ ಡ್ರಮ್ ಬ್ರೇಕ್ ಪಡೆದಿದ್ದು, 12 ಇಂಚಿನ ಅಲಾಯ್ ವೀಲ್ಸ್, ಫ್ರಂಟ್ 60/100, ರೇರ್ 80/80 ಅಳತೆಯ ಟೈಯರ್ಸ್ ಹೊಂದಿದೆ.

ನೂತನ ಯುಲು ವೈನ್ ಎಲೆಕ್ಟ್ರಿಕ್ ಸ್ಕೂಟರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 1,630 ಎಂಎಂ ಉದ್ದ, 670 ಎಂಎಂ ಅಗಲ ಹಾಗೂ 1,200 ಎಂಎಂ ಉದ್ದದ ವೀಲ್ ಬೇಸ್ ಹೊಂದಿದೆ. ಸಿಂಗಲ್ ಸೀಟ್ ಹೊಂದಿರುವ ಈ ಸ್ಕೂಟರ್ ನ ಸೀಟ್ ಹೈಟ್ 740 ಇದ್ದು, ಸರಿ ಸುಮಾರು 100 ಕಿಲೋಗ್ರಾಂ ಸಾಗಿಸುವಷ್ಟು ಸಾಮರ್ಥ್ಯವನ್ನು ಪಡೆದಿದೆ.

ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ: ರೂ.55,555ಕ್ಕೆ Yulu Wynn ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ವಿಶೇಷತೆಗಳೇನು?

ಯುಲು, ಅತ್ಯಂತ ಕಡಿಮೆ ಬೆಲೆಗೆ ಡ್ರೈವಿಂಗ್ ಲೈಸೆನ್ಸ್ ಹಾಗೂ ನೋಂದಣಿ ಅಗತ್ಯವಿಲ್ಲದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ್ದು, ಇದು ಹೆಚ್ಚಿನ ಮಂದಿಗೆ ಇಷ್ಟವಾಗಬಹುದು. ಜೊತೆಗೆ ಕಡಿಮೆ ಟಾಪ್ ಸ್ವೀಡ್ ಹೊಂದಿರುವುದು ಬೇಸರ ತರಿಸಬಹುದು. ಆದರೆ, ನಗರ ಪ್ರದೇಶದ ಸಂಚಾರ ದಟ್ಟಣೆಗೆ ಇರುವ ರಸ್ತೆಗಳಲ್ಲಿ ಓಡಿಸಲು ಸೂಕ್ತವಾಗಿದ್ದು, ಇದರಿಂದ ಈ ಸ್ಕೂಟರ್ ಮಾರಾಟ ಪ್ರಮಾಣ ದ್ವಿಗುಣವಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Saturday, April 29, 2023, 12:00 [IST]
English summary
Yulu wynn electric scooter launched range specs details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+