ಭಾರತದಲ್ಲಿ ಬಿಡುಗಡೆಯಾಗಲಿದೆ ಚೀನಾದ ಬಹುನೀರಿಕ್ಷಿತ ಐಷಾರಾಮಿ ಸ್ಕೂಟರ್
ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳು ಪ್ರಾಬಲ್ಯವನ್ನು ಮೆರೆಯುತ್ತಿವೆ. ಅದಕ್ಕೆ ತಕ್ಕಂತೆ ಹಲವು ಕಂಪನಿಗಳು ವಿನೂತನ ವೈಶಿಷ್ಟ್ಯದ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಇದೀಗ ಚೀನಾದ ಝೊಂಟೆಸ್ ಶೀಘ್ರದಲ್ಲೇ ಐಷಾರಾಮಿ 350D ಸ್ಕೂಟರ್‌ನ್ನು ಲಾಂಚ್ ಮಾಡಲಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಕಳೆದ ತಿಂಗಳು ದೆಹಲಿಯಲ್ಲಿ ಮುಕ್ತಾಯಗೊಂಡ ಆಟೋ ಎಕ್ಸ್‌ಪೋದಲ್ಲಿ 'ಝೊಂಟೆಸ್' ಕಂಪನಿ 350 ಸಿಸಿ (Zontes 350D) ಮ್ಯಾಕ್ಸಿ-ಸ್ಕೂಟರ್‌ನ್ನು ಅನಾವರಣ ಮಾಡಿತ್ತು. ಅದೇ ಸ್ಕೂಟರ್ ಅನ್ನು ಯುರೋಪ್ ಮಾರುಕಟ್ಟೆಯಲ್ಲಿ ಅಂದರೆ, ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಈ ಸ್ಕೂಟರ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಕಿವೇ (Keeway) ಬಿಎಂಡಬ್ಲ್ಯೂ ಸಿ 400 GT ಸ್ಕೂಟರ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ.

ಈ ನೂತನ ಝೊಂಟೆಸ್ 350D ಸ್ಕೂಟರ್ ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಅತ್ಯಾಧುನಿಕವಾಗಿದೆ. ಮುಂಭಾಗ ಆಕರ್ಷಕ LED ಹೆಡ್‌ಲ್ಯಾಂಪ್ ಹೊಂದಿದ್ದು, ದೂರದ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಅಡ್ಜಸ್ಟ್ಏಬಲ್ ವಿಂಡ್‌ಸ್ಕ್ರೀನ್ ಪಡೆದಿದೆ. TFT ಇನ್ಸ್ಟ್ರುಮೆಂಟ್ ಡಿಸ್ಪ್ಲೇ, TPMS (ಟೈರ್-ಪ್ರೆಜರ್ ಮಾನಿಟರಿಂಗ್ ಸಿಸ್ಟಮ್), ಟ್ರಾಕ್ಷನ್ ಕಂಟ್ರೋಲ್, ಕೀಲೆಸ್ ಸ್ಟಾರ್ಟ್-ಸ್ಟಾಪ್, ಎಲೆಕ್ಟ್ರಾನಿಕ್ ಕೀ, ಲಾಕ್ ಹಾಗೂ 2 ಫಾಸ್ಟ್ ಚಾರ್ಜಿಂಗ್ USB ಪಾಯಿಂಟ್‌ಗಳನ್ನು ಹೊಂದಿದೆ.
ಝೊಂಟೆಸ್ 350D ಸ್ಕೂಟರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 349 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 36 hp ಪವರ್ ಹಾಗೂ 38 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, ಈ ಸ್ಕೂಟರ್, 2,025 ಎಂಎಂ ಉದ್ದ ಹಾಗೂ 780 ಎಂಎಂ ಅಗಲವಿದೆ. ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್)ನೊಂದಿಗೆ ಫ್ರಂಟ್, ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, 15 ಇಂಚಿನ ಅಲಾಯ್ ವೀಲ್ಸ್ ಪಡೆದುಕೊಂಡಿದೆ.
ಇಕೋ ಮತ್ತು ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್ ಆಯ್ಕೆಗಳನ್ನು ಈ ಸ್ಕೂಟರ್ ಹೊಂದಿದ್ದು, ಭಾರತದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಆದರೆ, ಯಾವಾಗ ಎಂಬ ಬಗ್ಗೆ ಕಂಪನಿ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದೊಂದು ಐಷಾರಾಮಿ ಸ್ಕೂಟರ್ ಆಗಿರುವುದರಿಂದ ಸುಮಾರು 3 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದ್ದು, ಉತ್ತಮ ಕಾರ್ಯಕ್ಷಮತೆ ಖಂಡಿತ ಗ್ರಾಹಕರಿಗೆ ಇಷ್ಟವಾಗುತ್ತದೆ ಎಂದು ಕಂಪನಿ ನಂಬಿದೆ.
ಸದ್ಯ, ಝೊಂಟೆಸ್ 350D ಸ್ಕೂಟರ್, ಬಿಎಂಡಬ್ಲ್ಯೂ ಸಿ 400 GTಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಬಿಎಂಡಬ್ಲ್ಯೂ ಸಿ 400 ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ರೂ.10,74,904 ಆನ್ -ರೋಡ್ ಬೆಲೆಯಲ್ಲಿ ಸಿಗಲಿದೆ. 350 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದ್ದು, 33.5 bhp ಪವರ್, 35.25 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 12.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ.
ನೂತನ ಬಿಎಂಡಬ್ಲ್ಯೂ ಸಿ 400 GT ಸ್ಕೂಟರ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್)ನೊಂದಿಗೆ ಡುಯೆಲ್ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ. ಬರೋಬ್ಬರಿ 214 ಕೆಜಿ ತೂಕವಿದೆ. LED ಹೆಡ್‌ಲೈಟ್, LED ಟರ್ನ್ ಇಂಡಿಕೇಟರ್, ಕೀ ಲೆಸ್, 6.5-ಇಂಚಿನ TFT ಸ್ಕ್ರೀನ್, ಬ್ಲೂಟೂತ್ ಸೇರಿದಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಐಷಾರಾಮಿ ಸ್ಕೂಟರ್ ಆಗಿರುವುದರಿಂದ ಬಹುತೇಕ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








