ಹೊಸ 2024 ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಬೈಕ್ ತೆಗೆದುಕೊಳ್ಳಬೇಕೇ.. ಗುರುವಾರವಷ್ಟೇ ಬಿಡುಗಡೆ, ವಿಶೇಷತೆಗಳೇನು?
ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೊಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯ ಹೊಂದಿರುವ ವಿವಿಧ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಗುರುವಾರ ನೂತನ 2024 ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಎಡಿಷನ್ (2024 Hero Xtreme 160R 4V Edition) ಬಿಡುಗಡೆಗೊಂಡಿದೆ. ಇಲ್ಲಿ ಹೊಸ ಮೋಟಾರ್‌ಸೈಕಲ್‌ನ ಪ್ರಮುಖ ವಿಶೇಷತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಲೆ: ದೇಶೀಯ ಮಾರುಕಟ್ಟೆಯಲ್ಲಿ 2024 ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಎಡಿಷನ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ರೂ.1,38,500 ಎಕ್ಸ್ ಶೋರೂಂ (ನವದೆಹಲಿ - NewDelhi) ದರವನ್ನು ಪಡೆದಿದೆ. ಗರಿಷ್ಠ ಶ್ರೇಣಿ ರೂಪಾಂತರ ಸುಮಾರು 'ಪ್ರೀಮಿಯಂ'ಗೆ ಹೋಲಿಕೆ ಮಾಡಿದರೆ ಸುಮಾರು ರೂ.2,000 ದುಬಾರಿಯಾಗಿದೆ.

ಬಣ್ಣಗಳು: ಈ ಬೈಕ್ ವಿನ್ಯಾಸ (ಡಿಸೈನ್)ದಲ್ಲಿ ಒಂದಷ್ಟು ಕಾಸ್ಮೆಟಿಕ್ ಬದಲಾವಣಿಗಳನ್ನು ಪಡೆದಿದೆ. ಕೆವ್ಲರ್ ಬ್ರೌನ್ ಎಂಬ ಹೊಸ ಬಣ್ಣದ ಆಯ್ಕೆಯನ್ನು ಒಳಗೊಂಡಿದೆ. ಹಳೆಯ ಮಾದರಿಯಂತೆ ನಿಯಾನ್ ಶೂಟಿಂಗ್ ಸ್ಟಾರ್ ಹಾಗೂ ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. ಬಾಡಿವರ್ಕ್‌ನಲ್ಲಿ ಕೂಡ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ.
ಹೊಸತೇನಿದೆ: ನೂತನ ಮೋಟಾರ್‌ಸೈಕಲ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗೂ ದೊಡ್ಡಮಟ್ಟದಲ್ಲಿ ಆದ್ಯತೆ ನೀಡಲಾಗಿದ್ದು, ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಪ್ಯಾನಿಕ್ ಬ್ರೇಕ್ ಅಲರ್ಟ್ ಸಿಸ್ಟಮ್‌ನ್ನು ಒಳಗೊಂಡಿದೆ. ಹೊಸದಾಗಿರುವ ಡ್ರ್ಯಾಗ್ ರೇಸ್ ಟೈಮರ್‌ನ್ನು ಹೊಂದಿದ್ದು, ಸವಾರರು 0-60 ಕೆಎಂಪಿಹೆಚ್ ವೇಗ ಪಡೆಯಲು ತೆಗೆದುಕೊಂಡು ಸಮಯವನ್ನು ತೋರಿಸುತ್ತದೆ.
ಕಾರ್ಯಕ್ಷಮತೆ: 2024 ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿ ಎಡಿಷನ್ 163.2 ಸಿಸಿ ಸಿಂಗಲ್ ಸಿಲಿಂಡರ್ ಏರ್/ ಆಯಿಲ್-ಕೂಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದೆ. 16.6 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 14.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್: ಈ ಬೈಕ್ ಮುಂದೆ (ಫ್ರಂಟ್) ಯುಎಸ್‌ಡಿ ಪೋರ್ಕ್ಸ್ ಮತ್ತು ಹಿಂದೆ (ರೇರ್) ಮೊನೊಶಾಕ್ ಸಸ್ಪೆನ್ಷನ್ ಪಡೆದಿದೆ. ಹ್ಯಾಂಡಲ್ ಬಾರ್ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್‌ನ್ನು ಒಳಗೊಂಡಿದೆ. 17-ಇಂಚಿನ ಅಲಾಯ್ ವೀಲ್‌ಗಳು, ಮುಂಭಾಗ 100/80-ಆರ್17 ಹಾಗೂ ಹಿಂಭಾಗ 130/70-ಆರ್17 ಅಳತೆಯ ಟೈರ್‌ಗಳನ್ನು ಹೊಂದಿದೆ.
ಪ್ರತಿಸ್ಪರ್ಧಿ ಮೋಟಾರ್‌ಸೈಕಲ್: ಹೀರೋ ಎಕ್ಸ್‌ಸ್ಟ್ರೀಮ್ 60ಆರ್ 4ವಿಗೆ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್ ದೊಡ್ಡ ಎದುರಾಳಿಯಾಗಿದೆ. ಇದು ರೂ.1.10 ಲಕ್ಷದಿಂದ ರೂ.1.29 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. 159.7 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 46.99 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








