ಕಾರಿನಲ್ಲಿರುವ ಫೀಚರ್ ಹೊಸ ಆಕ್ಟಿವಾದಲ್ಲಿ: ಎಲೆಕ್ಟ್ರಿಕ್ ಮಾದರಿಯೂ ಅತಿ ಶೀಘ್ರದಲ್ಲಿ ಮಾರುಕಟ್ಟೆಗೆ!
125cc ಸ್ಕೂಟರ್ ಸೆಗ್ಮೆಂಟ್‌ನಲ್ಲಿ ದಿನಕ್ಕೊಂದು ಮಾಡೆಲ್‌ನಂತೆ ಲಾಂಚ್ ಆಗುತ್ತಿವೆ. ನಾನಾ ಆಧುನಿಕ ತಂತ್ರಜ್ಞಾನದೊಂದಿಗೆ ಸ್ಕೂಟರ್‌ಗಳು ಮಾರುಕಟ್ಟೆಗೆ ಬರುತ್ತಿದ್ದರೂ, ಕಾಂಪಿಟೇಷನ್‌ಗಳು ಸಿಕ್ಕಾಪಟ್ಟೆ ಜಾಸ್ತಿಯಾಗುತ್ತಿದ್ದರೂ, ಯಾವುದಕ್ಕೂ ಅಂಜದೆ, ಕಲ್ಲಿನಂತೆ ನಿಂತು ಸ್ಪರ್ಧೆ ಒಡ್ಡುತ್ತಿರುವ ಸ್ಕೂಟರ್ ಹೋಂಡಾ ಆಕ್ಟೀವಾ. ವರ್ಷ ಕಳೆದಂತೆ ಒಂದೊಂದೇ ಚಿಕ್ಕ ಚಿಕ್ಕ ಅಪ್‌ಡೇಟ್‌ಗಳನ್ನು ಪಡೆಯುತ್ತಾ ಬಂದಿದೆ. ಇದೇ ಸೆಗ್ಮೆಂಟ್‌ನಲ್ಲಿರುವ ಇತರ ಸ್ಕೂಟರ್‌ಗಳ ರೀತಿಯಲ್ಲಿ ಅಷ್ಟೊಂದು ಅಡ್ವಾನ್ಸ್ಡ್ ಫೀಚರ್‌ಗಳಿಲ್ಲದಿದ್ದರೂ, 2024 ಆಕ್ಟೀವಾದಲ್ಲಿರುವ ಒಂದು ಫೀಚರ್ ಎಲ್ಲರ ಗಮನ ಸೆಳೆಯುತ್ತಿದ್ದು, ಇದು ಈ ಸ್ಕೂಟರ್‌ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಹೌದು, ಹೋಂಡಾ ಸ್ಕೂಟರ್‌ನಲ್ಲಿ 125cc ಫುಲ್ ಎಂಜಿನ್ ಇದ್ದರೂ ಈ ಸ್ಕೂಟರ್ ಸುಮಾರು 50 ಮೀ ವರೆಗೂ ಮೈಲೇಜ್ ನೀಡುವುದು ದೊಡ್ಡ ವಿಷಯವೇ ಸರಿ. ಆದರೆ ನಾವು ಇಲ್ಲಿ ಹೇಳ ಹೊರಟಿರುವ ಪೀಚರ್ ಇದಲ್ಲ. ಹೊಸ ಆಕ್ಟೀವಾ ಟಾಪ್ ಮಾದರಿಯಲ್ಲಿ ನಿಮಗೆ ಸ್ಮಾರ್ಟ್ ಕೀ ಆಪ್ಷನ್ ಸಿಗುತ್ತದೆ.

ಈ ವೇರಿಯಂಟ್‌ನಲ್ಲಿ (2024 Honda Activa) ಸ್ಮಾರ್ಟ್ ಫೈಟರ್ ಮತ್ತು ಸ್ಮಾರ್ಟ್ ಕೀ ರೀತಿಯಲ್ಲಿನ ಸ್ಮಾರ್ಟ್ ಅನ್‌ಲಾಕ್ ಫೀಚರ್‌ಗಳನ್ನು ನೀವು ಕಾಣಬಹುದಾಗಿದೆ. ಇದು ಈ ಸ್ಕೂಟರ್‌ನ ರೈಡಿಂಗ್ ಅನುಭವವನ್ನು ಮತ್ತಷ್ಟು ಆಹ್ಲಾದಕರವಾಗಿಸುತ್ತದೆ. ಇದರ ಸಹಾಯದಿಂದ ನೀವು ಸ್ಕೂಟರ್ ಅನ್ನು ಪಾರ್ಕ್ ಮಾಡಿದ್ದರೆ ಸುಮಾರು 20 ಟರ್ ದೂರದಿಂದಲೇ ಸ್ಕೂಟರ್‌ನ ಬ್ಲಿಂಕ್ ಮಾಡಬಹುದಾಗಿದೆ.
ಇನ್ನು ಕಂಪನಿಯು ಆಕ್ಟೀವಾ ಸ್ಕೂಟರ್‌ನ ಎಲೆಕ್ಟ್ರಿಕ್ ಮಾದರಿಯನ್ನು ಸಹ ಮಾರುಕಟ್ಟೆಗೆ ಅತಿ ಶೀಘ್ರದಲ್ಲಿಯೇ ತರಲಿದೆ ಎಂದು ಹೇಳಲಾಗುತ್ತದೆ. ಮುಂಬರಲಿರುವ ಹೊಸ ಎಲೆಕ್ಟ್ರಿಕ್ ಆಕ್ಟೀವಾ ಇವಿ ಸ್ಕೂಟರ್, 3.78 ಕಿಲೋವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಸಿಂಗಲ್ ಚಾರ್ಜ್‌ನಲ್ಲಿ 140 ಕಿ.ಮೀ ನಿಂದ 160 ಕಿ.ಮೀ ರೇಂಜ್ ನೀಡಲಿದೆ. ಈ ಸ್ಕೂಟರ್‌ನಲ್ಲಿ 12 ಇಂಚಿನ ಅಲಾಯ್ ವೀಲ್‌ಗಳನ್ನು ಸಹ ನೀಡಲಾಗುವುದು.

ಈ ಸ್ಕೂಟರ್‌ನ ಅತ್ಯುತ್ತಮ ರೇಂಜ್‌ನೊಂದಿಗೆ, ಇಂಧನ ಚಾಲಿತ ಆಕ್ಟಿವಾಗೆ ಹೋಲಿಸಿದರೆ ಗ್ರಾಹಕರು ಸಾಕಷ್ಟು ಹಣ ಉಳಿಸಬಹುದು. ಇದರ ಟಾಪ್ ಸ್ಪೀಡ್ ಗಂಟೆಗೆ 65 ಕಿ.ಮೀ ಇರಬಹುದು ಎನ್ನಲಾಗಿದ್ದು, ನಂತರದ ದಿನಗಳಲ್ಲಿ ಅಪ್‌ಡೇಟ್ ಮಾಡಲಾಗುವುದು. ಈ ಸ್ಕೂಟರ್‌ನಲ್ಲಿ ನಿಮಗೆ ಡಿಜಿಟಲ್ ಡಿಸ್ಪ್ಲೇ ನೀಡಲಾಗುತ್ತಿದ್ದು, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಬ್ಯಾಟರಿ ರೇಂಜ್ ಇತ್ಯಾದಿಗಳನ್ನು ಕಾಣಬಹುದು.
ಇದರೊಂದಿಗೆ, ಈ ಸ್ಕೂಟರ್ ನಲ್ಲಿ ಬ್ಲೂಟೂತ್ ಸಂಪರ್ಕ, ಫೋನ್ ಚಾರ್ಜ್ ಮಾಡಲು ಯುಎಸ್‌ಬಿ ಪೋರ್ಟ್ ಜೊತೆಗೆ ಮ್ಯೂಸಿಕ್ ಕಂಟ್ರೋಲ್ ಸಿಸ್ಟಮ್ ಅನ್ನು ಸಹ ಒದಗಿಸಲಾಗುತ್ತಿದೆ. ಜಪಾನಿನ ದ್ವಿಚಕ್ರ ವಾಹನ ತಯಾರಕರು ಈಗಾಗಲೇ ಸ್ಥಿರ ಬ್ಯಾಟರಿ, ಮೋಟಾರ್‌ಗಳು, ನಿಯಂತ್ರಕಗಳು, ಚಾರ್ಜರ್‌ಗಳು ಸೇರಿದಂತೆ ಇವಿ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಅನ್ನು ಸಲ್ಲಿಸಿದ್ದಾರೆ.
ಹೊಸ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ (Honda Activa Electric Scooter) ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಎಥರ್ 450X, ಓಲಾ ಮತ್ತು ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ. ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್, ಪ್ಲಾಟ್‌ಫಾರ್ಮ್ ಇ ಎಂಬ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದನ್ನು ವಿವಿಧ ಬ್ಯಾಟರಿ ಆರ್ಕಿಟೆಕ್ಚರ್ ಮತ್ತು ಇನ್‌ಸ್ಟಾಲೇಶನ್‌ನೊಂದಿಗೆ ಮುಂಬರುವ ಅನೇಕ ಎಲೆಕ್ಟ್ರಿಕ್ ಮಾದರಿಗಳಿಗೆ ಬಳಸಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








