ರಾಕೆಟ್ ವೇಗದಲ್ಲಿ ಮಿಂಚಲಿದೆ ಈ ಹೊಸ ಸೂಪರ್ ಬೈಕ್: 2024ರ ಕವಾಸಕಿ ವರ್ಸಿಸ್ 650 ಬಿಡುಗಡೆ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಕವಾಸಕಿ ವರ್ಸಿಸ್ 650 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ವರ್ಸಿಸ್ 650 (Kawasaki Versys 650) ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.7.77 ಲಕ್ಷ ಆಗಿದೆ.
ಕವಾಸಕಿ ಅಡ್ವೆಂಚರ್ ಟೂರರ್ ಮತ್ತು ಪರ್ಫಾಮೆನ್ಸ್ ಬೈಕುಗಳಿಂದ ಹೆಚ್ಚು ಜನಪ್ರಿಯ ಬ್ರ್ಯಾಂಡ್ ಆಗಿದೆ. 2024ರ ಕವಾಸಕಿ ವರ್ಸಿಸ್ 650 ಬೈಕ್ ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಈ ಹೊಸ ಕವಾಸಕಿ ಬೈಕ್ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಮ್ಯಾಟ್ ಡಾರ್ಕ್ ಗ್ರೇ ಎಂಬ ಎರಡೂ ಹೊಸ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್‌ಗಳನ್ನು ಒಳಗೊಂಡಿದೆ. ಈ ಬಣ್ಣಗಳೊಂದಿಗೆ ಈ ಬೈಕ್ ಆಕರ್ಷಕವಾಗಿ ಕಾಣುತ್ತಿದೆ.

ಹೆಚ್ಚುವರಿಯಾಗಿ, ವೈಟ್ ಲೈನ್ ಸೈಡ್ ಪ್ಯಾನೆಲ್‌ಗಳು ಮತ್ತು ಹೆಡ್‌ಲೈಟ್ ಕೌಲ್ ಅನ್ನು ಅಲಂಕರಿಸುತ್ತದೆ, ಅಡ್ವೆಂಚರ್ ಬೈಕಿನ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಈ ಕಾಸ್ಮೆಟಿಕ್ ನವೀಕರಣಗಳ ಹೊರತಾಗಿಯೂ, 2024ರ ಮಾದರಿಯು ಯಾಂತ್ರಿಕವಾಗಿ ಅದರ ಪೂರ್ವವರ್ತಿಗೆ ಹೋಲುತ್ತದೆ. ಈ 2024ರ ಕವಾಸಕಿ ವರ್ಸಿಸ್ 650 ಬೈಕ್ ಅದೇ 649cc ಪ್ಯಾರೆಲಲ್ ಟ್ವಿನ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ 65.7 bhp ಪವರ್ ಮತ್ತು 61 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಸ್ಲಿಪ್ಪರ್ ಕ್ಲಚ್‌ನೊಂದಿಗೆ ಸುಸಜ್ಜಿತವಾಗಿದೆ. ಇದು ನಯವಾದ ಮತ್ತು ಸ್ಪಂದಿಸುವ ಗೇರ್ ಶಿಫ್ಟ್‌ಗಳನ್ನು ಖಾತ್ರಿಪಡಿಸುತ್ತದೆ. ಇದು ಲಾಂಗ್ ರೈಡ್ ಹೋಗುವಾಗ ಹೆಚ್ಚು ಉಪಯುಕ್ತವಾಗಿದೆ.

ಈ ಹೊಸ 2024ರ ಕವಾಸಕಿ ವರ್ಸಿಸ್ 650 ಬೈಕ್ ಫಿಚರ್ಸ್ ಬಗ್ಗೆ ಹೇಳುವುದಾದರರೆ, ಈ ಬೈಕಿನಲ್ಲಿ ಎಲ್‌ಇಡಿ ಇಲ್ಯುಮಿನೇಷನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಟಿಎಫ್‌ಟಿ ಡಿಸ್ ಪ್ಲೇ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಸೇರಿದಂತೆ ವೈಶಿಷ್ಟ್ಯಗಳ ಸೂಟ್ ಅನ್ನು ನೀಡುವುದನ್ನು ಮುಂದುವರೆಸಿದೆ.
ಹೊಸ ಕವಾಸಕಿ ವರ್ಸಿಸ್ 650 ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಸೂಪರ್ ಬೈಕಿನಲ್ಲಿ ಪ್ರಿ ಲೋಡ್ ಮತ್ತು ರೀಬೌಂಡ್ ಹೊಂದಾಣಿಕೆಯೊಂದಿಗೆ USD ಫೋರ್ಕ್‌ಗಳನ್ನು ಒಳಗೊಂಡಿದೆ, ಇದು ಬೈಕ್‌ನ ಪ್ರತಿಕ್ರಿಯೆಯನ್ನು ಸರಿಹೊಂದಿಸಲು ಸವಾರರಿಗೆ ಅನುವು ಮಾಡಿಕೊಡುತ್ತದೆ. ಇದರಿಂದ ಈ ಬೈಕ್ ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ.

ಇನ್ನು ಪ್ರಮುಖವಾಗಿ ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ. ಈ ಬೈಕಿನ ಮುಂಭಾಗದಲ್ಲಿ ಡ್ಯುಯಲ್ 300mm ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 250mm ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನ 120/70 ಮುಂಭಾಗ ಮತ್ತು 160/60 ಹಿಂದಿನ ಟೈರ್‌ಗಳನ್ನು ಹೊಂದಿದ್ದರೆ, 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.
ಕವಾಸಕಿ ಇಂಡಿಯಾ ತನ್ನ ಹಿಂದಿನ. ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕವಾಸಕಿ ವರ್ಸಿಸ್ 650 ಬೈಕ್ ಮೇಲೆ ಭರ್ಜರಿ ರಿಯಾಯಿತಿಯನ್ನು ಈ ತಿಂಗಳು ಘೋಷಿಸಿತು. ಕವಾಸಕಿ ವರ್ಸಿಸ್ 650 ಬೈಕ್ ಮೇಲೆ ಎಕ್ಸ್ ಶೋ ರೂಂ ಬೆಲೆಯಲ್ಲಿ 45,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯು ಮಾರ್ಚ್ 31 ರವರೆಗೆ ಅಥವಾ ಸ್ಟಾಕ್ ಇರುವವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇದು ಜಿಎಸ್‌ಟಿಯನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








